ಛತ್ತೀಸ್ ಘಡ

ಛತ್ತೀಸ್ ಗಢ: ಅಲ್ಯೂಮಿನಾ ರಿಫೈನರಿಯಲ್ಲಿ ದುರ್ಘಟನೆ, ನಾಲ್ವರು ಕಾರ್ಮಿಕರ ಸಾವು, ಒಬ್ಬರು ಗಾಯ
ಕಲ್ಲಿದ್ದಲು ತುಂಬಿದ 'ಹಾಪರ್' ಕುಸಿದು ಅದರ ಕೆಳಗೆ ಕೆಲಸ ಮಾಡುತ್ತಿದ್ದ ಹತ್ತು ಜನರ ಮೇಲೆ ಬಿದ್ದಿದೆ. ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು.

Chhattisgarh: 29 ಲಕ್ಷ ರೂ ರಿವಾರ್ಡ್ ಹೊಂದಿದ್ದ 25 ನಕ್ಸಲರ ಶರಣಾಗತಿ!
ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ 25 ಮಾವೋವಾದಿಗಳು ಶರಣಾಗಿದ್ದು, ಅವರು ನಿನ್ನೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಿಆರ್‌ಪಿಎಫ್‌ನ ಡಿಐಜಿ ಎದುರು ಶರಣಾಗಿದ್ದಾರೆ.

ಛತ್ತೀಸ್ ಘಡ: ಎನ್ ಕೌಂಟರ್ ನಲ್ಲಿ ಮಹಿಳಾ ನಕ್ಸಲ್ ಹತ, ಶಸ್ತ್ರಾಸ್ತ್ರ ವಶಕ್ಕೆ
ಛತ್ತೀಸ್ ಘಡದಲ್ಲಿ ಇಂದು ನಡೆದ ಭದ್ರತಾ ಪಡೆಗಳ ಎನ್ ಕೌಂಟರ್ ನಲ್ಲಿ ಮಹಿಳಾ ನಕ್ಸಲರೊಬ್ಬರು ಹತರಾಗಿದ್ದು, ಎಕೆ 47 ಬಂದೂಕು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಮಾವೋ ಕ್ಯಾಂಪ್ ನಲ್ಲಿ ಕೋವಿಡ್-19 ಉಲ್ಬಣ; 8 ಸಾವು: ಸೋಂಕು ಭೀತಿಯಿಂದಾಗಿ ತಂಡವನ್ನೇ ತೊರೆಯುತ್ತಿರುವ ನಕ್ಸಲರು!
ನಕ್ಸಲ್ ಪೀಡಿತ ಛತ್ತೀಸ್ ಘಡದ ಮಾವೋ ಕ್ಯಾಂಪ್ ನಲ್ಲಿ ಕೊರೋನಾ ಸೋಂಕು ಸಾಂಕ್ರಾಮಿಕ ಉಲ್ಬಣವಾಗಿದ್ದು, ಸೋಂಕಿಗೆ ತುತ್ತಾಗಿ 8 ಮಂದಿ ಸಾವಿಗೀಡಾದ ಹಿನ್ನಲೆಯಲ್ಲಿ ಹಲವು ನಕ್ಸಲರು ತಮ್ಮ ತಂಡವನ್ನು ತೊರೆದು ಹೋಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸ್ಫೋಟಕ ಇಡುತ್ತಿದ್ದಾಗ ಸಾವನ್ನಪ್ಪಿದ ಮಾವೋ ನಾಯಕನ ಬೃಹತ್ ಪ್ರತಿಮೆ ಸ್ಥಾಪಿಸಿದ ಗ್ರಾಮಸ್ಥರು!
ಭದ್ರತಾ ಪಡೆಗಳ ಮೇಲೆ ದಾಳಿ ಮಾಡಲು, ಸುಧಾರಿತ ಸ್ಫೋಟಕವನ್ನು ಇಡುತ್ತಿದ್ದಾಗ ಅದು ಆಕಸ್ಮಿಕವಾಗಿ ಕೊಲ್ಲಲ್ಪಟ್ಟ ಮಾವೋವಾದಿ ಹೋರಾಟಗಾರನ ಪ್ರತಿಮೆಯನ್ನು ಛತ್ತೀಸ್‌ಗಢ ಗ್ರಾಮವೊಂದರಲ್ಲಿ ನಿರ್ಮಿಸಲಾಗಿದೆ.

ಛತ್ತೀಸ್ ಘಡ: ನಟೋರಿಯಸ್ ನಕ್ಸಲ್ ನಾಯಕ 'ಕೋಸಾ' ಎನ್ಕೌಂಟರ್ ನಲ್ಲಿ ಹತ
ಛತ್ತೀಸ್ ಘಡದ ಮೋಸ್ಟ್ ನಟೋರಿಯಸ್ ನಕ್ಸಲ್ ನಾಯಕ 'ಕೋಸಾ' ಎಂಬಾತನನ್ನು ಭದ್ರತಾ ಪಡೆಗಳು ಎನ್ಕೌಂಟರ್ ನಲ್ಲಿ ಹತ್ಯೆ ಮಾಡಿವೆ.

ಕೋವಿಡ್-19 ಸೋಂಕು ಉಲ್ಬಣ: ಯುಕೆ, ಯುಎಇ, ಇಸ್ರೇಲ್ ದೇಶಗಳನ್ನೇ ಹಿಂದಿಕ್ಕಿದ ಛತ್ತೀಸ್ ಘಡದ ರಾಯ್ ಪುರ!
ಛತ್ತೀಸ್ ಘಡದ ರಾಯ್ ಪುರ ಜಿಲ್ಲೆ ಕೋವಿಡ್ ಸೋಂಕಿತರ ಪಟ್ಟಿಯಲ್ಲಿ ಯುಕೆ, ಯುಎಇ, ಇಸ್ರೇಲ್ ದೇಶಗಳನ್ನೇ ಹಿಂದಿಕ್ಕಿದೆ.

ಛತ್ತೀಸ್‌ಗಢದಲ್ಲಿ ಕೋವಿಡ್ ಸೋಂಕು ಹೆಚ್ಚಳ: ಆಸ್ಪತ್ರೆ ಎದುರು ಶವಗಳ ರಾಶಿ, ವಿಲೇವಾರಿ ಮಾಡಲು ಸಿಬ್ಬಂದಿ, ಜಾಗದ ಕೊರತೆ
ಛತ್ತೀಸ್‌ಗಢದಲ್ಲಿ ಕೋವಿಡ್ ಸೋಂಕು ಹೆಚ್ಚಳದ ಪರಿಣಾಮ ಇಲ್ಲಿನ ಸರ್ಕಾರಿ ಆಸ್ಪತ್ರೆ ಅವರಣದ ಎದುರು ರಾಶಿ ರಾಶಿ ಹೆಣಗಳನ್ನು ಹಾಕಲಾಗಿದೆ.

ಪ್ರೀತಿಯ ನಾಯಿಯ ಸಾವಿನ ನೋವು ತಾಳಲಾರದೇ ಆತ್ಮಹತ್ಯೆಗೆ ಶರಣಾದ ಮಹಿಳೆ!
ಪ್ರೀತಿಯ ನಾಯಿ ಸಾವನ್ನಪ್ಪಿತು ಎಂದು ಅದರ ನೋವಿನಿಂದ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಛತ್ತೀಘಡದಲ್ಲಿ ನಡೆದಿದೆ.

