ಕಣಿವೆ ರಾಜ್ಯ ಕಾಶ್ಮೀರದಲ್ಲಿ ವಿಸ್ತಾರ್ ಯಾತ್ರೆಗೆ ಚಾಲನೆ ನೀಡಿದ ಅಮಿತ್ ಶಾ
ಭಾರತೀಯ ಜನತಾ ಪಕ್ಷದ 95 ದಿನಗಳ ವಿಸ್ತಾರ್ ಯಾತ್ರೆಯನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು...

Published On :
ಜಮ್ಮು: ಭಾರತೀಯ ಜನತಾ ಪಕ್ಷದ 95 ದಿನಗಳ ವಿಸ್ತಾರ್ ಯಾತ್ರೆಯನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಕಣಿವೆ ರಾಜ್ಯ ಕಾಶ್ಮೀರದಲ್ಲಿ ಆರಂಭಿಸಿದರು.
ಜಮ್ಮುವಿನಲ್ಲಿ ಇಂದು ಅವರು ಆ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಕುರಿತು ಇತರ ನಾಯಕರೊಂದಿಗೆ ಚರ್ಚ ನಡೆಸಿದರು.
ಸಭೆಯ ನಂತರ ಮಾಧ್ಯಮಗಳಿಗೆ ವಿವರಣೆ ನೀಡಿದ ಬಿಜೆಪಿ ನಾಯಕ ರವೀಂದ್ರ ರೈನಾ, ರಾಜ್ಯದಲ್ಲಿನ ಶಾಂತಿ ಕುರಿತು ಮತ್ತು ಪಕ್ಷದ ಬೆಳವಣಿಗೆಗೆ ಸಂಬಂಧಪಟ್ಟಂತೆ ಅಮಿತ್ ಶಾ ಹಲವು ವಿಷಯಗಳ ಕುರಿತು ಮಾತುಕತೆ ನಡೆಸಿದರು ಎಂದು ಹೇಳಿದರು.
ಈ ಸಭೆ ನಮಗೆ ಮುಖ್ಯವಾದ ಸಂದರ್ಭ.ಪ್ರತಿ ರಾಜ್ಯಗಳಲ್ಲಿ ಪಕ್ಷವನ್ನು ವಿಸ್ತರಿಸುವುದು ಸಭೆಯ ಉದ್ದೇಶವಾಗಿದೆ. ಸಭೆಯಲ್ಲಿ ರಾಜ್ಯಕ್ಕೆ ಮತ್ತು ಪಕ್ಷಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಅಮಿತ್ ಶಾ ಚರ್ಚೆ ನಡೆಸಿದರು. ಆ ನಿಟ್ಟಿನಲ್ಲಿ ಕೆಲಸ ಮಾಡುವುದು ಮತ್ತು ಕಣಿವೆ ರಾಜ್ಯದಲ್ಲಿ ಶಾಂತಿಯನ್ನು ತರುವುದು ನಮ್ಮ ಆದ್ಯತೆಯಾಗಿದೆ. ರಾಜ್ಯದಲ್ಲಿನ ಎಲ್ಲಾ ವಿರೋಧಿ ಅಂಶಗಳು, ಹಿಂಸೆ, ಜಗಳಗಳನ್ನು ತಂದೊಡ್ಡಲು ಪ್ರಯತ್ನಿಸುವವರನ್ನು ಶಿಕ್ಷಿಸಲಾಗುವುದು ಎಂದರು.
ಅಮಿತ್ ಶಾ ಅವರು ಎರಡು ದಿನಗಳ ಭೇಟಿಗಾಗಿ ಜಮ್ಮು-ಕಾಶ್ಮೀರಕ್ಕೆ ಆಗಮಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ನಡೆಸಬೇಕಾದ ಕಾರ್ಯತಂತ್ರಗಳ ಕುರಿತು ಶಾ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಅವರು ಪ್ರತಿ ರಾಜ್ಯದಲ್ಲಿ ಒಂದರಿಂದ 3 ದಿನಗಳವರೆಗೆ ಉಳಿಯಲಿದ್ದಾರೆ. ಅವರ ಪ್ರವಾಸ ಸೆಪ್ಟೆಂಬರ್ 25ರಂದು ಜನಸಂಘ ನಾಯಕ ದೀನ್ ದಯಾಳ್ ಉಪಾಧ್ಯಾಯ ಅವರ 101ನೇ ಜಯಂತಿಯನ್ನು ಸಮಾಪ್ತಿಗೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


