ದೇಶ

ಹೈಜಾಕ್ ಆಗಿರುವ ಶಂಕೆಯಲ್ಲಿ ಜೆಟ್ ಏರ್ ವೇಸ್ ಪ್ರಯಾಣಿಕನಿಂದ ಪ್ರಧಾನಿಗೆ ಟ್ವೀಟ್; ನಿಜಕ್ಕೂ ಆಗಿದ್ದೇನು?

ಜೆಟ್ ಏರ್ ವೇಸ್ ನ ಪ್ರಯಾಣಿಕ ನಿತಿನ್ ವರ್ಮಾ, ಟ್ವಿಟರ್ ನಲ್ಲಿ ಪ್ರಧಾನಿಗೆ ಟ್ವೀಟ್ ಮಾಡಿದ್ದು..." 3 ಗಂಟೆಗಳಿಂದ ವಿಮಾನದಲ್ಲೇ ಇದ್ದೇವೆ, ನಾವಿರುವ ವಿಮಾನ ಹೈಜಾಕ್ ಆದಂತಿದೆ, ದಯವಿಟ್ಟು ಸಹಾಯ...

ಹೈಜಾಕ್ ಆಗಿರುವ ಶಂಕೆಯಲ್ಲಿ ಜೆಟ್ ಏರ್ ವೇಸ್ ಪ್ರಯಾಣಿಕನಿಂದ ಪ್ರಧಾನಿಗೆ ಟ್ವೀಟ್; ನಿಜಕ್ಕೂ ಆಗಿದ್ದೇನು?
ಜೆಟ್ ಏರ್ ವೇಸ್
Published On :
ಜೈಪುರ: ಮೂರು ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಜನಸಾಮಾನ್ಯರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಬಳಿ ನೇರವಾಗಿ ಹೇಳಿಕೊಳ್ಳುವ ವಾತಾವರಣ ನಿರ್ಮಾಣವಾಗಿದೆ. ಇದು ಅನೇಕ ಬಾರಿ ದುರುಪಯೋಗವಾಗಿರುವ ಉದಾಹರಣೆಗಳಿದ್ದು, ಇಂತಹದ್ದೇ ಮತ್ತೊಂದು ಪ್ರಕರಣ ನಡೆದಿದೆ. 
ಮುಂಬೈ ನಿಂದ ದೆಹಲಿಗೆ ತೆರಳಬೇಕಿದ್ದ ಜೆಟ್ ಏರ್ ವೇಸ್ ವಿಮಾನವನ್ನು ಹವಾಮಾನ ವೈಪರಿತ್ಯದ ಕಾರಣದಿಂದ ಜೈಪುರದ ಕಡೆಗೆ ಡೈವರ್ಟ್ ಮಾಡಲಾಗಿತ್ತು. ಆದರೆ ಗಂಟೆಗಳು ಕಳೆದರೂ ಸಹ ವಿಮಾನ ಲ್ಯಾಂಡ್ ಆಗದೇ ಇದ್ದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಜೆಟ್ ಏರ್ ವೇಸ್ ನ ಪ್ರಯಾಣಿಕ ನಿತಿನ್ ವರ್ಮಾ, ಟ್ವಿಟರ್ ನಲ್ಲಿ ಪ್ರಧಾನಿಗೆ ಟ್ವೀಟ್ ಮಾಡಿದ್ದು " 3 ಗಂಟೆಗಳಿಂದ ವಿಮಾನದಲ್ಲೇ ಇದ್ದೇವೆ, ನಾವಿರುವ ವಿಮಾನ ಹೈಜಾಕ್ ಆದಂತಿದೆ, ದಯವಿಟ್ಟು ಸಹಾಯ ಮಾಡಿ 9w355 ಎಂದು ದೂರು ನೀಡಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ಸಿಬ್ಬಂದಿಗಳು ಸಂಪೂರ್ಣ ತಪಾಸಣೆ ಮಾಡಿದ್ದಾರೆ. ತಪ್ಪು ಮಾಹಿತಿ ನೀಡಿರುವ ಆರೋಪದಡಿ ವರ್ಮಾ ಅವರನ್ನು ಬಂಧಿಸಲಾಗಿದ್ದು ಐಪಿಸಿ ಸೆಕ್ಷನ್ 505 ಪ್ರಕಾರ (ತಪ್ಪು ಮಾಹಿತಿ ನೀಡಿ ಕಿಡಿಗೇಡಿತನ ತೋರಿದ ಆರೋಪ) ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಪ್ರಧಾನಿಗೆ ಟ್ವೀಟ್ ಮಾಡಿದ ವ್ಯಕ್ತಿಯನ್ನು ವಿಚಾರಣೆಗಾಗಿ ಜೈಪುರದಲ್ಲಿಯೇ ಇಳಿಸಲಾಗಿತ್ತು. ಮುಂಬೈ ನಿಂದ ದೆಹಲಿಗೆ ತೆರಳಬೇಕಿದ್ದ ಜೆಟ್ ಏರ್ ವೇಸ್ ವಿಮಾನವನ್ನು ಹವಾಮಾನ ವೈಪರಿತ್ಯದ ಕಾರಣದಿಂದ ಜೈಪುರದ ಕಡೆಗೆ ಡೈವರ್ಟ್ ಮಾಡಲಾಗಿತ್ತು ಎಂದು ಜೈಪುರ ವಿಮಾನ ನಿಲ್ದಾಣದ ಹಂಗಾಮಿ ನಿರ್ದೇಶಕ ಎಂಪಿ ಬನ್ಸಾಲ್ ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.