ಕುಪ್ವಾರ ದಾಳಿ: ಹತಾಶೆಗೊಂಡಿರುವ ಪಾಕ್'ಗೆ ದಿಟ್ಟ ಉತ್ತರ ನೀಡುತ್ತೇವೆ-ನಿರ್ಮಲ್ ಸಿಂಗ್ ಭರವಸೆ
ಕುಪ್ವಾರ ಉಗ್ರರ ದಾಳಿಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಜಮ್ಮು ಮತ್ತು ಕಾಶ್ಮೀರದ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರು, ಹತಾಶೆಗೊಂಡಿರುವ ಪಾಕಿಸ್ತಾನಕ್ಕೆ ದಿಟ್ಟ ಉತ್ತರವನ್ನು...

Published On :
ಶ್ರೀನಗರ: ಕುಪ್ವಾರ ಉಗ್ರರ ದಾಳಿಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಜಮ್ಮು ಮತ್ತು ಕಾಶ್ಮೀರದ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರು, ಹತಾಶೆಗೊಂಡಿರುವ ಪಾಕಿಸ್ತಾನಕ್ಕೆ ದಿಟ್ಟ ಉತ್ತರವನ್ನು ನೀಡುತ್ತೇವೆಂದು ಗುರುವಾರ ಭರವಸೆ ನೀಡಿದ್ದಾರೆ.
ಉಗ್ರರ ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇವೆ. ಕಾಶ್ಮೀರದ ಶಾಂತಿಯುತ ವಾತಾವರಣ ಕದಡಲು ಪಾಕಿಸ್ತಾನ ಯತ್ನಿಸುತ್ತಿದೆ. ಆದರೆ, ಈ ಪ್ರಯತ್ನ ಎಂದಿಗೂ ಸಾಧ್ಯವಾಗುವುದಿಲ್ಲ. ನಮ್ಮ ಯೋಧರು ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಪ್ರಯತ್ನಗಳು ಯಶಸ್ವಿಯಾಗಲು ಅವರು ಎಂದಿಗೂ ಬಿಡುವುದಿಲ್ಲ. ದಾಳಿಗೆ ದಿಟ್ಟ ಉತ್ತರ ನೀಡುವ ಮೂಲಕ ಉತ್ತರವನ್ನು ನೀಡುತ್ತಾರೆಂದು ಹೇಳಿದ್ದಾರೆ.
ದಾಳಿ ನಿಜಕ್ಕೂ ಹೇಡಿತನದ ವರ್ತನೆ. ಕಾಶ್ಮೀರದಲ್ಲಿ ಮತ್ತೆ ಸಮಸ್ಯೆಗಳನ್ನು ಸೃಷ್ಟಿಸಲು ಪಾಕಿಸ್ತಾನ ಯತ್ನಿಸುತ್ತಿದ್ದು, ಇದು ಯಶಸ್ವಿಯಾಗುತ್ತಿಲ್ಲ. ಹೀಗಾಗಿ ಪಾಕಿಸ್ತಾನ ಹತಾಶೆಗೊಂಡಿದೆ. ಶೀಘ್ರದಲ್ಲಿಯೇ ಪಾಕಿಸ್ತಾನಕ್ಕ ಭಾರತ ದಿಟ್ಟ ಉತ್ತರವನ್ನು ನೀಡಲಿದೆ ಎಂದು ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಪಾಕಿಸ್ತಾನ ಕೆಟ್ಟ ದಿನಗಳನ್ನು ಎದುರಿಸಲಿದೆ. ಅವರ ರೀತಿಯಲ್ಲಿಯೇ ನಾವು ಕೂಡ ಪ್ರತಿ ಉತ್ತರವನ್ನು ನೀಡುತ್ತೇವೆ. ಈ ಕುರಿತಂತೆ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಸಿದ್ಧತೆಗಳನ್ನು ನಡೆಸಿದೆ ಎಂದಿದ್ದಾರೆ.
ಕಾಶ್ಮೀರದ ಕುಪ್ವಾರ ಜಿಲ್ಲೆಯ ಸೇನಾ ಶಿಬಿರದ ಮೇಲೆ ಇಂದು ಬೆಳಗ್ಗೆ ದಾಳಿ ಮಾಡಿದ್ದ ಉಗ್ರರು ಮೂವರು ಯೋಧರನ್ನು ಬಲಿಪಡೆದುಕೊಂಡಿದ್ದರು. ಉಗ್ರ ದಾಳಿಗೆ ದಿಟ್ಟ ಉತ್ತರ ನೀಡಿದ್ದ ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Pakistanಪಾಕಿಸ್ತಾನಜಮ್ಮು ಮತ್ತು ಕಾಶ್ಮೀರJammu and KashmirNirmal Singhನಿರ್ಮಲ್ ಸಿಂಗ್Kupwara attackಕುಪ್ವಾರ ದಾಳಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


