ದೇಶ

ಭದ್ರತಾ ಪಡೆಗೆ ನಕ್ಸಲ್ ಹಿಟ್ ಲಿಸ್ಟ್ ನೀಡಿದ ಕೇಂದ್ರ, ನಕ್ಸಲರ ನೈತಿಕ ಸ್ಥೈರ್ಯ ಕುಗ್ಗಿಸುವಂತೆ ಸೂಚನೆ

ಸುಕ್ಮಾದಲ್ಲಿ 25 ಸಿಆರ್ ಪಿಎಫ್ ಯೋಧರನ್ನು ಬಲಿ ಪಡೆದ ನಕ್ಸಲರ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಸೇನಾ ಪಡೆಗಳಿಗೆ ಹಿಟ್ ಲಿಸ್ಟ್ ನ್ನು ನೀಡಿದೆ.

ಭದ್ರತಾ ಪಡೆಗೆ ನಕ್ಸಲ್ ಹಿಟ್ ಲಿಸ್ಟ್ ನೀಡಿದ ಕೇಂದ್ರ, ನಕ್ಸಲರ ನೈತಿಕ ಸ್ಥೈರ್ಯ ಕುಗ್ಗಿಸುವಂತೆ ಸೂಚನೆ
ನಕ್ಸಲ್
Published On :
ನವದೆಹಲಿ: ಸುಕ್ಮಾದಲ್ಲಿ 25 ಸಿಆರ್ ಪಿಎಫ್ ಯೋಧರನ್ನು ಬಲಿ ಪಡೆದ ನಕ್ಸಲರ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಸೇನಾ ಪಡೆಗಳಿಗೆ ಹಿಟ್ ಲಿಸ್ಟ್ ನ್ನು ನೀಡಿದ್ದು, ಆಕ್ರಮಣಕಾರಿ ದಾಳಿ ನಡೆಸುವ ಬಗ್ಗೆ ಗಮನ ಕೇಂದ್ರೀಕರಿಸಲು ಸೂಚನೆ ನೀಡಿದೆ. 
ನಕ್ಸಲರ ಉನ್ನತ ಕಮಾಂಡೋಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುವ ಮೂಲಕ ನಕ್ಸಲ್ ಪಡೆಯ ನೈತಿಕ ಸ್ಥೈರ್ಯ ಕುಗ್ಗಿಸುವಂತೆ ಸೂಚನೆ ನೀಡಿದೆ. ಹಿಟ್ ಲಿಸ್ಟ್ ನಲ್ಲಿ ಬಸ್ತಾರ್ ವಿಭಾಗದ ನಕ್ಸಲ್ ಕಮಾಂಡರ್ ರಘು ಜಗರ್ಗುಂಡ ಪ್ರದೇಶ ಸಮಿತಿ ಮುಖ್ಯಸ್ಥ ಪಾಪಾರಾವ್ ಅವರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಕೇಂದ್ರ ಸರ್ಕಾರ ಸಿಆರ್ ಪಿಎಫ್ ಪಡೆಗಳಿಗೆ ಸೂಚನೆ ನೀಡಿದೆ. 
ಇತ್ತೀಚೆಗೆ ಸುಕ್ಮಾದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ನಡೆದ ದಾಳಿಯ ಸೂತ್ರಧಾರ ಎಂದೇ ಹೇಳಲಾಗುತ್ತಿರುವ ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿ(ಪಿಎಲ್ ಜಿಎ) ಕಮಾಂಡರ್ ಹಿಡ್ಮಾ ಸಹ ಹಿಟ್ ಲಿಸ್ಟ್ ನಲ್ಲಿದ್ದು, ಪ್ರಮುಖ ನಾಯಕರನ್ನೇ ಗುರಿಯಾಗಿರಿಸಿಕೊಂಡು ಆಕ್ರಮಣಕಾರಿ ದಾಳಿ ನಡೆಸುವ ಮೂಲಕ ನಕ್ಸಲರಲ್ಲಿ ನೈತಿಕ ಸ್ಥೈರ್ಯ ಕುಗ್ಗಿಸುವಂತೆ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದು, ಸಿಆರ್ ಪಿಎಫ್, ಸೇನಾ ಪಡೆಗಳಿಗೆ ಹೇಳಿದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.