ಉತ್ತರ ಪ್ರದೇಶ: ಶಾಲೆಗಳ 15 ರಜೆ ರದ್ದು ಪಡಿಸಿದ ಯೋಗಿ ಆದಿತ್ಯನಾಥ್ ಸರ್ಕಾರ
ಶ್ರೇಷ್ಠ ವ್ಯಕ್ತಿಗಳ ಜನ್ಮದಿನ ಹಾಗೂ ಸ್ಮರಣಾರ್ಥವಾಗಿ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ 15 ಸಾರ್ವತ್ರಿಕ ರಜಾದಿನವನ್ನು ರದ್ದು ಪಡಿಸಿ ಉತ್ತರ ಪ್ರದೇಶ ಸರ್ಕಾರ ...

Published On :
ಲಕ್ನೋ: ಶ್ರೇಷ್ಠ ವ್ಯಕ್ತಿಗಳ ಜನ್ಮದಿನ ಹಾಗೂ ಸ್ಮರಣಾರ್ಥವಾಗಿ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ 15 ಸಾರ್ವತ್ರಿಕ ರಜಾದಿನವನ್ನು ರದ್ದು ಪಡಿಸಿ ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಮಹಾನ್ ವ್ಯಕ್ತಿಗಳ ಜಯಂತಿ ಹಾಗೂ ಪುಣ್ಯತಿಥಿ ದಿನದಂದು ಸಾರ್ವತ್ರಿಕ ರಜೆಯನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ.
ಈ ನಿರ್ಧಾರದಿಂದಾಗಿ ಶಿಕ್ಷಣ ಸಂಸ್ಥೆಗಳು ನೀಡುತ್ತಿದ್ದ ರಜೆಯಲ್ಲಿ 15 ದಿನ ಕಡಿತಗೊಂಡಂತಾಗಿದೆ. ಆ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ಮಹಾತ್ಮರ ಕುರಿತು 2 ಗಂಟೆ ವಿಶೇಷ ಕಾರ್ಯಕ್ರಮ ನಡೆಸುವಂತೆ ಸೂಚಿಸಲಾಗಿದೆ ಎಂದು ಸಚಿವ ಶ್ರೀಕಾಂತ್ ಶರ್ಮಾ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಒಟ್ಟು 42 ಸಾರ್ವಜನಿಕ ರಜೆಗಳಿದ್ದು, ಅದರಲ್ಲಿ ಸುಮಾರು 17 ರಜೆಗಳು ಶ್ರೇಷ್ಠ ವ್ಯಕ್ತಿಗಳ ಜನ್ಮದಿನಾಚರಣೆಗಳಿಗೆ ಸೇರಿದ್ದವು.
ಸರ್ಕಾರಿ ನೌಕರರಿಗೆ ಸೂಚಿಸಲಾಗಿರುವ 15 ದಿನಗಳು ನಿರ್ಬಂಧಿತ ರಜಾದಿನವಾಗಲಿವೆ. ಹೆಚ್ಚಿರುವ ರಜಾ ದಿನಗಳಿಂದಾಗಿ ಶಾಲೆ ಕಾರ್ಯನಿರ್ವಹಿಸುವ ದಿನ 220 ರಿಂದ 120ಕ್ಕೆ ಇಳಿದಿದೆ. ಈ ರಜಾ ಸಂಸ್ಕೃತಿ ಹೀಗೆಯೇ ಮುಂದುವರಿದರೆ ಶಾಲೆಗಳಲ್ಲಿ ಶಿಕ್ಷಣ ನೀಡಲು ಸಮಯವೇ ಉಳಿಯುವುದಿಲ್ಲ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಅಭಿಪ್ರಾಯ ಪಟ್ಟಿದ್ದರು.
ಮಹಾತ್ಮರ ಜನ್ಮದಿನ ಮತ್ತು ಪುಣ್ಯ ತಿಥಿಗಳಂದು ಈ ರಜೆಗಳನ್ನು ನೀಡಲಾಗುತ್ತಿತ್ತು. ಬಹುತೇಕ ರಜೆಗಳನ್ನು ಬಿಎಸ್ ಪಿ ಮತ್ತು ಸಮಾಜವಾದಿ ಪಕ್ಷದ ಸರ್ಕಾರಗಳು ಅಧಿಕಾರದಲ್ಲಿದ್ದಾಗ ಘೋಷಿಸಲಾಗಿತ್ತು.
ಮಹಾರಾಣಾ ಪ್ರತಾಪ್ ಜಯಂತಿ, ಪರಶುರಾಮ ಜಯಂತಿ, ಜಮತ್ ಉಲ್ ವಿದಾ, ಛತ್ ಪೂಜಾ, ಈದ್ ಮಿಲಾದ್ ಉನ್ ನಬಿ, ಚಂದ್ರಶೇಖರ್ ಜಯಂತಿ, ಮಹರ್ಷಿ ಕಶ್ಯಪ ಮತ್ತು ಮಹಾರಾಜ್ ಗುಹಾ ಜಯಂತಿ, ವಿಶ್ವ ಕರ್ಮ ಪೂಜಾ, ಅಗ್ರಸೇನ್ ಜಯಂತಿ ಸೇರಿದಂತೆ ಒಟ್ಟು 15 ರಜೆ ದಿನಗಳನ್ನು ಉತ್ತರ ಪ್ರದೇಶ ಸರ್ಕಾರ ರದ್ದು ಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Uttar pradeshಉತ್ತರ ಪ್ರದೇಶschoolsYogi Adityanathಶಾಲೆಗಳುಯೋಗಿ ಆದಿತ್ಯನಾಥ15 public holidays15 ಸಾರ್ವಜನಿಕ ರಜೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


