ಪ್ರಯಾಣಿಕರು ಸೀಟ್ ಬೆಲ್ಟ್ ಹಾಕಿ ಕೂತಿರುವಾಗಲೇ ರಾಷ್ಟ್ರಗೀತೆ ಪ್ರಸಾರ ಮಾಡಿದ ಸ್ಪೈಸ್ ಜೆಟ್
ಇನ್ನೇನು ವಿಮಾನ ಭೂಸ್ಪರ್ಶವಾಗಬೇಕು, ಪ್ರಯಾಣಿಕರು ಇನ್ನೂ ಸೀಟ್ ಬೆಲ್ಟ್ ಹಾಕಿಕೊಂಡು ಕೂತೇ ಇದ್ದಾರೆ, ಆದರೆ ವಿಮಾನದ ಪಿಎ ಸಿಸ್ಟಮ್ ನಲ್ಲಿ ರಾಷ್ಟ್ರಗೀತೆ ಪ್ರಸಾರವಾಗಲು ಪ್ರಾರಂಭವಾಯಿತು.

Published On :
ಇಂದೋರ್: ಇನ್ನೇನು ವಿಮಾನ ಭೂಸ್ಪರ್ಶವಾಗಬೇಕು, ಪ್ರಯಾಣಿಕರು ಇನ್ನೂ ಸೀಟ್ ಬೆಲ್ಟ್ ಹಾಕಿಕೊಂಡು ಕೂತೇ ಇದ್ದಾರೆ, ಆದರೆ ವಿಮಾನದ ಪಿಎ ಸಿಸ್ಟಮ್ ನಲ್ಲಿ ರಾಷ್ಟ್ರಗೀತೆ ಪ್ರಸಾರವಾಗಲು ಪ್ರಾರಂಭವಾಯಿತು.
ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದಂತೆಯೇ ಪ್ರಯಾಣಿಕರಿಗೆ ಎದ್ದು ನಿಂತು ಗೌರವ ಸೂಚಿಸುವುದೋ ಅಥವಾ, ವಿಮಾನ ಇನ್ನೂ ಭೂಸ್ಪರ್ಶವಾಗದೇ ಇದ್ದ ಹಿನ್ನೆಲೆಯಲ್ಲಿ ಸೀಟ್ ನಲ್ಲೇ ಕುಳಿತು ವಿಮಾನ ನಿಯಮಗಳನ್ನು ಪಾಲಿಸುವುದೋ ಎಂಬ ಗೊಂದಲ ಪ್ರಾರಂಭವಾಗಿತ್ತು.
ಏ.18 ರಂದು ತಿರುಪತಿಯಿಂದ ಹೈದರಾಬಾದ್ ಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದ್ದು, ಪ್ರಯಾಣಿಕರೊಬ್ಬರು ಸ್ಪೈಸ್ ಜೆಟ್ ವಿಮಾನ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕ್ಯಾಬಿನ್ ಸಿಬ್ಬಂದಿಗಳು ವಿಮಾನ ಭೂಸ್ಪರ್ಶವಾಗುವ ಕೆಲವೇ ನಿಮಿಷಗಳ ಮುನ್ನ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಿದ್ದಾರೆ. ಆದರೆ ಪ್ರಯಾಣಿಕರು ಹಾಗೂ ಕ್ಯಾಬಿನ್ ಸಿಬ್ಬಂದಿಗಳು ಎದ್ದು ನಿಲ್ಲುವ ಪರಿಸ್ಥಿತಿಯಲ್ಲಿ ಇರಲಿಲ್ಲ ಎಂದು ದೂರಿನಲ್ಲಿ ಪುನೀತ್ ತಿವಾರಿ ಹೇಳಿದ್ದಾರೆ.
ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದಂತೆಯೇ ನಮಗೆಲ್ಲಾ ಆಶ್ಚರ್ಯವಾಯಿತು. ಸೀಟ್ ಬೆಲ್ಟ್ ನ್ನು ಧರಿಸಬೇಕೆಂಬ ಪೈಲಟ್ ನ ನಿರ್ದೇಶನದ ಪ್ರಕಾರ ಕುಳಿತೇ ಇದ್ದೆವು. ರಾಷ್ಟ್ರಗೀತೆಯನ್ನು ಪ್ರಸಾರ ಮಾಡಿ ಮಧ್ಯದಲ್ಲಿ ನಿಲ್ಲಿಸಲಾಯಿತು ಎಂದು ದೂರಿನಲ್ಲಿ ಪುನೀತ್ ತಿವಾರಿ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಪೈಸ್ ಜೆಟ್, ನಮ್ಮ ಸಿಬ್ಬಂದಿಗಳು ಪ್ಲೇ ಲಿಸ್ಟ್ ನಲ್ಲಿದ್ದ ತಪ್ಪು ಸಂಖ್ಯೆಯನ್ನು ಆಯ್ಕೆ ಮಾಡಿದ್ದರಿಂದ ರಾಷ್ಟ್ರಗೀತೆ ಪ್ರಸಾರವಾಗಿದೆ. ತಕ್ಷಣವೇ ಅದನ್ನು ನಿಲ್ಲಿಸಿದ್ದಾರೆ, ಪ್ರಯಾಣಿಕರಿಗೆ ಉಂಟಾಗಿರುವ ಸಮಸ್ಯೆಗೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


