ದೂರದೂರಿಗೆ ಪ್ರಯಾಣಿಸುವ ರೈಲುಗಳಲ್ಲಿ 3ಎಸಿ ಬೋಗಿಗಳನ್ನು ಹೆಚ್ಚಿಸಲಿರುವ ರೈಲ್ವೆ ಇಲಾಖೆ
ಹವಾನಿಯಂತ್ರಿತ ಬೋಗಿಗಳಿಗೆ ಹೆಚ್ಚುತ್ತಿರುವ ಬೇಡಿಕೆಗಳನ್ನು ಈಡೇರಿಸಲು ದೂರದೂರಿಗೆ ಪ್ರಯಾಣಿಸುವ...

Published On :
ನವದೆಹಲಿ: ಹವಾನಿಯಂತ್ರಿತ ಬೋಗಿಗಳಿಗೆ ಹೆಚ್ಚುತ್ತಿರುವ ಬೇಡಿಕೆಗಳನ್ನು ಈಡೇರಿಸಲು ದೂರದೂರಿಗೆ ಪ್ರಯಾಣಿಸುವ ರೈಲುಗಳಲ್ಲಿ 3ಎಸಿ ಕೋಚುಗಳನ್ನು ಹೆಚ್ಚಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಕಳೆದ ವರ್ಷ ಏಪ್ರಿಲ್ 1ರಿಂದ ಈ ವರ್ಷ ಮಾರ್ಚ್ 10ರವರೆಗೆ ದೂರದೂರಿಗೆ ತೆರಳುವ ರೈಲ್ವೆಯ ಒಟ್ಟು ಪ್ರಯಾಣಿಕರ ಸಂಖ್ಯೆಯಲ್ಲಿ 3 ಎಸಿ ಬೋಗಿಗಳಲ್ಲಿ ಶೇಕಡಾ 17ರಷ್ಟು ಏರಿಕೆಯಾಗಿದ್ದು, ಪ್ರಯಾಣಿಕರಿಂದ ಸಿಕ್ಕಿದ ಟಿಕೆಟ್ ಮೊತ್ತದಲ್ಲಿ ಶೇಕಡಾ 32.60ಯಷ್ಟು ಹೆಚ್ಚಳವಾಗಿದೆ ಎಂದು ಇಲಾಖೆಯ ದಾಖಲೆಗಳು ತಿಳಿಸುತ್ತವೆ.
3 ಎಸಿ ವರ್ಗದ ಬೋಗಿಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಬಗ್ಗೆ ದಾಖಲೆಗಳು ತಿಳಿಸುತ್ತವೆ. ಸ್ಲೀಪರ್ ವರ್ಗದ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಶೇಕಡಾ 59.78ರಷ್ಟು ಜಾಸ್ತಿಯಾಗಿದೆ. ಪ್ರಯಾಣಿಕರಿಂದ ಬರುವ ಆದಾಯದಲ್ಲಿ ಶೇಕಡಾ 44.78ರಷ್ಟು ಹೆಚ್ಚಾಗಿದೆ.
ಕಳೆದ ವರ್ಷ ಸ್ಲೀಪರ್ ಬೋಗಿಗಳಲ್ಲಿ ಶೇಕಡಾ 60ರಷ್ಟು ಪ್ರಯಾಣಿಕರು ಪ್ರಯಾಣಿಸಿದ್ದು
ಶೇಕಡಾ 45.94ರಷ್ಟು ಆದಾಯ ಬಂದಿದೆ. ಇತ್ತೀಚಿನ ದಿನಗಳಲ್ಲಿ ಸ್ಲೀಪರ್ ಕೋಚ್ ಗಿಂತ ಜನರು 3 ಎಸಿ ಬೋಗಿಗಳನ್ನು ಹೆಚ್ಚು ಬಯಸುತ್ತಾರೆ ಎನ್ನುತ್ತದೆ ರೈಲ್ವೆ ಸಚಿವಾಲಯ.
ರೈಲ್ವೆ ಇಲಾಖೆ ಇತ್ತೀಚೆಗೆ 3 ಎಸಿ ಬೋಗಿಗಳನ್ನು ಒಳಗೊಂಡ ಹಮ್ಸಫರ್ ಎಕ್ಸ್ ಪ್ರೆಸ್ ನ್ನು ಆರಂಭಿಸಿದ್ದು ಉತ್ತಮ ಫಲಿತಾಂಶ ಸಿಕ್ಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


