ದೇಶ

ಮಧ್ಯಪ್ರದೇಶ: ಪತ್ನಿಗೆ ಗುಂಡಿಕ್ಕಿ ಹತ್ಯೆ ಮಾಡಿ ತಾನೂ ಶೂಟ್ ಮಾಡಿಕೊಂಡ ಕಾಂಗ್ರೆಸ್ ನಾಯಕ

ಮಧ್ಯಪ್ರದೇಶದ 73 ವರ್ಷದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಉದ್ಯಮಿ ಸಯೀದ್ ಮಲ್ಗುಜರ್ ಅವರು ತಮ್ಮ ಪತ್ನಿ 53 ವರ್ಷದ ಹುಸ್ನಾ....

ಮಧ್ಯಪ್ರದೇಶ: ಪತ್ನಿಗೆ ಗುಂಡಿಕ್ಕಿ ಹತ್ಯೆ ಮಾಡಿ ತಾನೂ ಶೂಟ್ ಮಾಡಿಕೊಂಡ ಕಾಂಗ್ರೆಸ್ ನಾಯಕ
ಸಾಂದರ್ಭಿಕ ಚಿತ್ರ
Published On :
ಭೋಪಾಲ್: ಮಧ್ಯಪ್ರದೇಶದ 73 ವರ್ಷದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಉದ್ಯಮಿ ಸಯೀದ್ ಮಲ್ಗುಜರ್ ಅವರು ತಮ್ಮ ಪತ್ನಿ 53 ವರ್ಷದ ಹುಸ್ನಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿ ಬಳಿಕ ತಾನೂ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಜಬಲಪೂರದಲ್ಲಿ ನಡೆದಿದೆ.
ಸಯೀದ್ ಅವರು ಇಂದು ಬೆಳಗ್ಗೆ 5 ಗಂಟೆಯ ಸುಮಾರಿಗೆ ಹನುಮಂತಲ್ ಪ್ರದೇಶದ ನಲ್ಬಂದ್ ನಲ್ಲಿರುವ ತಮ್ಮ ಮನೆಯಲ್ಲಿ ಪರವಾನಗಿ ಪಡೆದ ಪಾಯಿಂಟ್ ಬ್ಲಾಂಕ್ ರೇಂಜ್ ಪಿಸ್ತೂಲ್ ನಿಂದ ಪತ್ನಿಯ ಹಣೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಬಳಿಕ ತಾವೂ ಶೂಟ್ ಮಾಡಿಕೊಂಡು ಸಾವಿಗೆ ಶರಣಾಗಿದ್ದಾರೆ ಎಂದು ಜಬಲಪೂರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್.ಸಿಕರ್ವಾರ್ ಅವರು ತಿಳಿಸಿದ್ದಾರೆ.
ಮೊದಲನೆ ಮಹಡಿಯಲ್ಲಿ ಈ ಘಟನೆ ನಡೆದಿದ್ದು, ಗುಂಡಿನ ಸದ್ದು ಕೇಳಿ ನೆಲ ಮಹಡಿಯಲ್ಲಿದ್ದ ಅವರ ಪುತ್ರ 20 ವರ್ಷದ ಅಹದ್ ಮೊದಲನೆ ಮಹಡಿಗೆ ಆಗಮಿಸಿ ತಂದೆಯ ಕೈಯಿಂದ  ಗನ್ ಕಿತ್ತುಕೊಂಡಿದ್ದಾನೆ. ಬಳಿಕ ಗನ್ ನೊಂದಿಗೆ ಹೊರಗೆ ಬಂದು ಸ್ನೇಹಿತರ ಸಂಬಂಧಿಗಳ ಸಹಾಯ ಕೋರಿದ್ದಾನೆ. ಆದರೆ ಸಯೀದ್ ಮನೆಯಲ್ಲಿದ್ದ ಮತ್ತೊಂದು ಗನ್ ನಿಂದ ಶೂಟ್ ಮಾಡಿಕೊಂಡಿದ್ದು ದಂಪತಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸಿಕರ್ವಾರ್ ಅವರು ಹೇಳಿದ್ದಾರೆ.
ಮಾಜಿ ಕೇಂದ್ರ ಸಚಿವ ಮತ್ತು ಜೆಡಿಯು ನಾಯಕ ಶರದ್ ಯಾದವ್ ಅವರ ಆಪ್ತರಾಗಿದ್ದ ಸಯೀದ್ ಅವರು ಎರಡು ದಶಕಗಳ ಹಿಂದೆಯೇ ಕಾಂಗ್ರೆಸ್ ಸೇರಿದ್ದರು. ಅಲ್ಲದೆ ನಗರ ಪಾಲಿಕೆ ಮಾಜಿ ಕೌನ್ಸಿಲರ್ ಸಯೀದ್ ಒಂದು ಬಾರಿ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದರು ಎಂದು ಜಿಲ್ಲಾ ಕಾಂಗ್ರೆಸ್ ಮುಖ್ಯಸ್ಥ ದಿನೇಶ್ ಯಾದವ್ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.