'ತ್ರಿವಳಿ ತಲಾಖ್' ಸಮಸ್ಯೆಯನ್ನು ಮುಸ್ಲಿಮರೇ ಬಗೆಹರಿಸಿಕೊಳ್ಳಲಿ: ದಿಗ್ವಿಜಯ್ ಸಿಂಗ್
ದೇಶದಲ್ಲಿ ವಿವಾದ ಸೃಷ್ಟಿಸಿರುವ 'ತ್ರಿವಳಿ ತಲಾಖ್' ಸಮಸ್ಯೆಯನ್ನು ಮುಸ್ಲಿಮರೇ ಬಗೆಹರಿಸಿಕೊಳ್ಳಲಿ ಬಿಡಿ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ಕಾಂಗ್ರೆಸ್ ಹಿರಿಯ ನಾಯಕ ದ್ವಿಜಯ್ ಸಿಂಗ್ ಅವರು...

Published On :
ಜೋಧ್ಪುರ: ದೇಶದಲ್ಲಿ ವಿವಾದ ಸೃಷ್ಟಿಸಿರುವ 'ತ್ರಿವಳಿ ತಲಾಖ್' ಸಮಸ್ಯೆಯನ್ನು ಮುಸ್ಲಿಮರೇ ಬಗೆಹರಿಸಿಕೊಳ್ಳಲಿ ಬಿಡಿ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ಕಾಂಗ್ರೆಸ್ ಹಿರಿಯ ನಾಯಕ ದ್ವಿಜಯ್ ಸಿಂಗ್ ಅವರು ಸೋಮವಾರ ಸಲಹೆ ನೀಡಿದ್ದಾರೆ.
ತ್ರಿವಳಿ ತಲಾಖ್ ವಿವಾದ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ತ್ರಿವಳಿ ತಲಾಖ್ ಸಮಸ್ಯೆಯನ್ನು ಬಿಜೆಪಿ ನ್ಯಾಯಾಲಯದ ಅಂಗಳಕ್ಕೆ ಏಕೆ ತರುತ್ತಿದೆ?...ಸಮಸ್ಯೆ ಸಂಬಂಧ ಬಿಜೆಪಿ ಪ್ರಚೋದಕ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತಿದೆ. ತ್ರಿವಳಿ ತಲಾಖ್ ಸಮಸ್ಯೆ ಮುಸ್ಲಿಮರ ಸಮಸ್ಯೆಯಾಗಿದ್ದು, ಆವರ ಸಮಸ್ಯೆಯನ್ನು ಅವರೇ ಬಗೆಹರಿಸಿಕೊಳ್ಳಲು ಬಿಡಿ. ಈ ವಿಚಾರದಲ್ಲಿ ಯಾರೂ ಮಧ್ಯ ಪ್ರವೇಶ ಮಾಡಬಾರದು ಎಂದು ಹೇಳಿದ್ದಾರೆ.
ಒಡಿಶಾದ ಭುನೇಶ್ವದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ತ್ರಿವಳಿ ತಲಾಖ್ ಬಗ್ಗೆ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 'ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುವ ಕೆಲಸ ನಡೆಸಬೇಕು. ಜಿಲ್ಲಾ ಮಟ್ಟದಲ್ಲಿ ನಾನು ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸುತ್ತೇವೆ. ನವ ಭಾರತಕ್ಕೆ ಹೊಸ ಸೂತ್ರವನ್ನು ತರುತ್ತೇವೆಂದು ಹೇಳಿದ್ದರು. ಮೋದಿಯರ ಈ ಹೇಳಿತೆಯನ್ನು ಬಿಜೆಪಿ ನಾಯಕರು ಶ್ಲಾಘಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


