ದೇಶ

ಈಸ್ಟರ್ ಹಬ್ಬ: ದೇಶದ ಜನತೆಗೆ ಶುಭ ಕೋರಿದ ಉಪ ರಾಷ್ಟ್ರಪತಿ, ಪ್ರಧಾನಿ

ಇಂದು ಈಸ್ಟರ್ ಭಾನುವಾರ. ಈ ಮಂಗಳಕರ ಸಂದರ್ಭದಲ್ಲಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ...

ಈಸ್ಟರ್ ಹಬ್ಬ: ದೇಶದ ಜನತೆಗೆ ಶುಭ ಕೋರಿದ ಉಪ ರಾಷ್ಟ್ರಪತಿ, ಪ್ರಧಾನಿ
ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತು ಪ್ರಧಾನಿ ನರೇಂದ್ರ ಮೋದಿ
Published On :
ನವದೆಹಲಿ: ಇಂದು ಈಸ್ಟರ್ ಭಾನುವಾರ. ಈ ಮಂಗಳಕರ ಸಂದರ್ಭದಲ್ಲಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಕೋರಿದ್ದಾರೆ. ಹಬ್ಬ ದೇಶದ ಜನತೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ತರಲಿ ಎಂದು ಆಶಿಸಿದ್ದಾರೆ.
ಕ್ರೈಸ್ತರ ದೇವರು ಜೀಸಸ್ ನ ಪುನರುಜ್ಜೀವನದ ದಿನ ಎಂದು ನಂಬಲಾಗುವ ಈಸ್ಟರ್ ಹಬ್ಬದ ಅಂಗವಾಗಿ ದೇಶದ ಜನತೆಗೆ ಶುಭ ಕೋರುತ್ತೇನೆ. ಪ್ರೀತಿ ದ್ವೇಷಕ್ಕಿಂತ ಹೆಚ್ಚು ಶಕ್ತಿಯುತವಾಗಿರುತ್ತದೆ. ಮಾನವ ಜನಾಂಗದ ಮೇಲೆ ದಯೆ ತೋರುವ ಈಸ್ಟರ್ ಹಬ್ಬವನ್ನು ಜಾತಿ, ಧರ್ಮ ಬೇಧವಿಲ್ಲದೆ ಆಚರಿಸೋಣ ಎಂದು ಉಪ ರಾಷ್ಟ್ರಪತಿ ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಈಸ್ಟರ್ ಅಂಗವಾಗಿ ದೇಶದ ಜನತೆಗೆ ಶುಭ ಕೋರಿದ್ದು ಸಮಾಜದಲ್ಲಿ ಸಾಮರಸ್ಯ ಹೆಚ್ಚಲಿ ಎಂದು ಆಶಿಸಿದ್ದಾರೆ.
ಜೀಸಸ್ ಕ್ರೈಸ್ತರನ್ನು ಶಿಲುಬೆಗೇರಿಸಿದ ನಂತರ ಸಮಾಧಿಕ್ರಿಯೆ ಮಾಡಿದ ಬಳಿಕ ಮೂರನೇ ದಿನ ಪುನರುಜ್ಜೀವನವಾಗುತ್ತದೆ ಎಂದು ನಂಬಲಾಗಿದೆ. ಇದರ ಅಂಗವಾಗಿ ಈಸ್ಟರ್ ಹಬ್ಬವನ್ನು ಆಚರಿಸಲಾಗುತ್ತದೆ. ಲೆಂಟ್ ಎಂಬ 40  ದಿನಗಳ ಉಪವಾಸ ಮುಕ್ತಾಯದ ದಿನ ಇಂದು ಆಗಿದೆ. ಕ್ರೈಸ್ತರೆಲ್ಲರೂ ಚರ್ಚ್ ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.