ಹೇಮಮಾಲಿನಿ ಪ್ರತಿದಿನ ಕುಡಿಯುತ್ತಾರೆ, ಆವರೇನು ಆತ್ಮಹತ್ಯೆ ಮಾಡಿಕೊಂಡಿದ್ದಾರಾ: ಮಹಾರಾಷ್ಟ್ರ ಶಾಸಕ
ವಿವಾದಾತ್ಮಕ ಹೇಳಿಕೆ ನೀಡುವ ಮೂಲದ ಸದಾಕಾಲ ಸುದ್ದಿಯಲ್ಲಿರುವ ಮಹಾರಾಷ್ಟ್ರದ ಪಕ್ಷೇತರ ಶಾಸಕ ಬಚ್ಚು ಕಾಡು ಇದೀಗ ಮತ್ತೆ ಸುದ್ದಿಗೆ ಬಂದಿದ್ದು, ಈ ಬಾರಿ...

Published On :
ಮುಂಬೈ: ವಿವಾದಾತ್ಮಕ ಹೇಳಿಕೆ ನೀಡುವ ಮೂಲದ ಸದಾಕಾಲ ಸುದ್ದಿಯಲ್ಲಿರುವ ಮಹಾರಾಷ್ಟ್ರದ ಪಕ್ಷೇತರ ಶಾಸಕ ಬಚ್ಚು ಕಾಡು ಇದೀಗ ಮತ್ತೆ ಸುದ್ದಿಗೆ ಬಂದಿದ್ದು, ಈ ಬಾರಿ ಸಂಸದೆ ಹೇಮಮಾಲಿನಿ ಕುರಿತು ಹೇಳಿಕೆಯನ್ನು ನೀಡಿದ್ದಾರೆ.
ನಾಂದೇಡ್ ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ರೈತರು ಮದ್ಯಪಾನದಿಂದಾಗಿ ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಅವರು, ಹೇಮಮಾಲಿನಿ ಪ್ರತಿದಿನ ಕುಡಿಯುತ್ತಾರೆ. ಆದರೆ, ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ಶೇ.75 ಸಂಸದರು, ಶಾಸಕರು, ಪತ್ರಕರ್ತರು ಕುಡಿಯುತ್ತಾರೆ. ಹೇಮಮಾಲಿಯವರೂ ಸಹ ಪ್ರತೀನಿತ್ಯ ಕುಡಿಯುತ್ತಾರೆ. ಆದರೆ, ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ?...ಮದುವೆ ಖರ್ಚನ್ನು ಭರಿಸಲಾಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂಬ ಕಾರಣ ಕೂಡ ಸರಿಯಲ್ಲ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ತಮ್ಮ ಮಗನ ಮದುವೆಗಾಗಿ ರೂ. 4 ಕೋಟಿ ಖರ್ಚು ಮಾಡಿದ್ದರು. ಮುಂದೆ ಅವರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ಕಾಯಬೇಕಾ...? ಎಂದು ಕೇಳಿದ್ದಾರೆ.
ಮದ್ಯಪಾನ, ಮದುವೆ ಖರ್ಚು ಎಂಬ ಕಾರಣಗಳೆಲ್ಲ ಅಸಂಬದ್ಧವಾದುದು. ರೈತರ ಆತ್ಮಹತ್ಯೆಗೆ ನಿಜವಾದ ಕಾರಣ ಹಣ. ರೈತರು ಬೆಳೆ ಬೆಳೆಯುತ್ತಾರೆ, ಆದರೆ ಅವರ ಆದಾಯ ಮಾತ್ರ ಬೆಳೆಯುವುದಿಲ್ಲ ಎಂದು ಪ್ರೊಫೆಸರ್ ಸ್ವಾಮಿನಾಥನ್ ಅವರು ಯಾವಾಗಲೂ ಹೇಳುತ್ತಿರುತ್ತಾರೆಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಮದ್ಯಪಾನbjpಬಿಜೆಪಿNitin Gadkarifarmer suicidedrinksರೈತರ ಆತ್ಮಹತ್ಯೆHema Maliniಹೇಮಾ ಮಾಲಿನಿMaharashtra MLABacchu Kaduಮಹಾರಾಷ್ಟ್ರ ಶಾಸಕಬಚ್ಚುಕಾಡುನಿತಿನ ಗಡ್ಕರಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


