ದೇಶ

ಗೋವಾ: ಮುಂದಿನ 2 ವಾರದಲ್ಲಿ ಎಲ್ಲಾ ಲೇಟ್ ನೈಟ್ ಮತ್ತು ರೇವ್ ಪಾರ್ಟಿ ಬಂದ್?

ಮಹತ್ವದ ಬೆಳವಣಿಗೆಯೊಂದರಲ್ಲಿ ಗೋವಾ ಸರ್ಕಾರ ಮುಂದಿನ ಎರಡು ವಾರದಲ್ಲಿ ಎಲ್ಲಾ ತಡ ರಾತ್ರಿಯ ಪಾರ್ಟಿ ಮತ್ತು ರೇವ್ ಪಾರ್ಟಿಗಳನ್ನು ರದ್ಧುಗೊಳಿಸುವ...

ಗೋವಾ: ಮುಂದಿನ 2 ವಾರದಲ್ಲಿ ಎಲ್ಲಾ ಲೇಟ್ ನೈಟ್  ಮತ್ತು ರೇವ್ ಪಾರ್ಟಿ ಬಂದ್?
ಸಾಂದರ್ಭಿಕ ಚಿತ್ರ
Published On :
ಪಣಜಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಗೋವಾ ಸರ್ಕಾರ ಮುಂದಿನ ಎರಡು ವಾರದಲ್ಲಿ ಎಲ್ಲಾ ತಡ ರಾತ್ರಿಯ ಪಾರ್ಟಿ ಮತ್ತು ರೇವ್ ಪಾರ್ಟಿಗಳನ್ನು ರದ್ಧುಗೊಳಿಸುವ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಗೋವಾ ಕಡಲ ತೀರಗಳಲ್ಲಿ ನಡೆಯುವ ರೇವ್ ಪಾರ್ಟಿಗಳನ್ನು ನಿಷೇಧಿಸುವಂತೆ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ್ ಒತ್ತಾಯಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈಗಾಗಲೇ ಗೋವಾ ಸರ್ಕಾರ ಶೇ. 80 ರಷ್ಟು ಪಾರ್ಟಿಗಳನ್ನು ರದ್ಧುಗೊಳಿಸಿದೆ, ಇನ್ನೆರಡು ವಾರಗಳಲ್ಲಿ ಎಲ್ಲಾ ರೀತಿಯ ಪಾರ್ಟಿಗಳು ಕ್ಲೋಸ್ ಆಗಲಿವೆ, ಈ ಸಂಬಂಧ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ನಮ್ಮ ಕರಾವಳಿ ತೀರ ಈಗಾಗಲೇ ಡ್ರಗ್ಸ್ ಮಾರಾಟ ಮತ್ತು ಕಳ್ಳಸಾಗಣೆಗೆ ಕುಖ್ಯಾತಿಯಾಗಿದೆ, ಇದನ್ನು ನಿಯಂತ್ರಿಸುವ ಅವಶ್ಯಕತೆಯಿದೆ. ಎಲ್ಲಕ್ಕಿಂತ ಮೊದಲು ರೇವ್ ಪಾರ್ಟಿ ಮತ್ತು ಎಲ್ಲಾ ರೀತಿಯ ನೈಟ್ ಪಾರ್ಟಿಗಳನ್ನು ನಿಯಂತ್ರಿಸಬೇಕಾಗಿದೆ ಎಂದು ಹೇಳಿದ್ದಾರೆ.
ನಮ್ಮ ಸಂಸ್ಕೃತಿಗೆ ವಿರೋಧವಾಗಿರುವ ಈ ಪಾರ್ಟಿ ನಡೆಯುತ್ತಿದ್ದರು ಪೊಲೀಸರು ಕಣ್ಮುಚ್ಚಿ ಕುಳಿತಿದ್ದರು. ಲೇಟ್ ನೈಟ್ ಪಾರ್ಟಿ ನಮ್ಮ ಸಂಸ್ಕೃತಿಯಲ್ಲ, ಅದನ್ನು ನಾವು ಪ್ರೋತ್ಸಾಹಿಸಬಾರದು, ಕೂಡಲೇ ಅವುಗಳನ್ನು ಮುಚ್ಚಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.