ದೇಶ

ಭಾರತ-ಬಾಂಗ್ಲಾದೇಶ ನಡುವಿನ ವ್ಯಾಪಾರ ಶೇ.17ರಷ್ಟು ಹೆಚ್ಚಳ: ಧರ್ಮೇಂದ್ರ ಪ್ರಧಾನ್

ಹಿಂದೆಂದಿಗಿಂತಲೂ ಪ್ರಸ್ತುತ ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಸಂಬಂಧ ಹೆಚ್ಚು ವೃದ್ದಿಯಾಗಿದ್ದು, ಎರಡೂ ದೇಶಗಳ ನಡುವಿನ ವ್ಯಾಪಾರ ಒಪ್ಪಂದ ಪ್ರಮಾಣ ಶೇ.17ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.

ಭಾರತ-ಬಾಂಗ್ಲಾದೇಶ ನಡುವಿನ ವ್ಯಾಪಾರ ಶೇ.17ರಷ್ಟು ಹೆಚ್ಚಳ: ಧರ್ಮೇಂದ್ರ ಪ್ರಧಾನ್
ಇಂಡಿಯಾ ಅವೇರ್ನೆಸ್ ಕಾರ್ಯಕ್ರಮದಲ್ಲಿ ಧರ್ಮೇಂದ್ರ ಪ್ರಧಾನ್
Published On :

ನವದೆಹಲಿ: ಹಿಂದೆಂದಿಗಿಂತಲೂ ಪ್ರಸ್ತುತ ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಸಂಬಂಧ ಹೆಚ್ಚು ವೃದ್ದಿಯಾಗಿದ್ದು, ಎರಡೂ ದೇಶಗಳ ನಡುವಿನ  ವ್ಯಾಪಾರ ಒಪ್ಪಂದ ಪ್ರಮಾಣ ಶೇ.17ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ  ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.

ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಅವೇರ್ನೆಸ್ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ್ ಅವರು, ಹಿಂದೆಂದಿಗಿಂತಲೂ ಈಗ ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಸಂಬಂಧ  ಸಾಕಷ್ಟು ವೃದ್ಧಿಯಾಗಿದ್ದು, ಎರಡೂ ದೇಶಗಳ ವಾಣಿಜ್ಯ ಒಪ್ಪಂದಗಳಲ್ಲಿ ಶೇ.17ರಷ್ಟು ವೃದ್ದಿಯಾಗಿದೆ. ಇದು ಭಾರತ-ಬಾಂಗ್ಲಾದೇಶ ಸೌಹಾರ್ಧ ಸಂಬಂಧಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದರು.

"ಭಾರತ-ಬಾಂಗ್ಲಾದೇಶ ನಡುವೆ ಸುಮಾರು 6.5 ಬಿಲಿಯನ್ ಮೌಲ್ಯದ ವಾಣಿಜ್ಯ ಒಪ್ಪಂದವಾಗಿದ್ದು, ಭಾರತದ ನುಮಾಲಿಘಡ್ ನಿಂದ ಬಾಂಗ್ಲಾದೇಶದ ಪರ್ಬಾತಿಪುರದವರೆಗೂ ಪೈಪ್ ಲೈನ್ ಅಳವಡಿಸಿ ಡೀಸೆಲ್ ಪೂರೈಕೆ ಮಾಡಲು  ಯೋಜನೆ ರೂಪಿಸಲಾಗಿದೆ. ಅಂತೆಯೇ ಬಾಂಗ್ಲಾದೇಶಕ್ಕೆ ಅತ್ಯಾವಶ್ಯಕವಾಗಿರುವ ದ್ರವರೂಪದ ನೈಸರ್ಗಿಕ ಅನಿಲ ಪೂರೈಕೆಗೂ ಭಾರತ ಬದ್ಧವಾಗಿದ್ದು, ಈಗಗಾಲೇ ಇದರ ಕಾಮಗಾರಿ ಆರಂಭವಾಗಿದೆ. ಅಂತೆಯೇ ಭಾರತದ ಒನ್  ಜಿಸಿ ವಿದೇಶ್ ಸಂಸ್ಥೆ ಚಿತ್ತಗಾಂಗ್  ಬಳಿಯ ಎರಡು ಕರಾವಳಿ ತೀರದಲ್ಲಿ ಪರಿಶೋಧನೆಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.