ಚೆನ್ನೈ: ಐಟಿ ದಾಳಿ ವೇಳೆ ಮತದಾರರಿಗೆ ಹಂಚಲು ತಂದಿದ್ದ ಬರೊಬ್ಬರಿ 89 ಕೋಟಿ ರು. ಪತ್ತೆ!
ಅರ್ ಕೆ ನಗರ ಉಪ ಚುನಾವಣೆಯನ್ನು ತೀರಾ ಪ್ರತಿಷ್ಠೆಯ ಕಣವಾಗಿ ಪರಿಗಣಿಸಿರುವ ತಮಿಳುನಾಡು ರಾಜಕೀಯ ಪಕ್ಷಗಳು ಶತಾಯಗತಾಯ ಆ ಕ್ಷೇತ್ರವನ್ನು ಗೆಲ್ಲಲೇ ಬೇಕು ಎಂಬ ಕಾರಣಕ್ಕೆ ಮತದಾರರಿಗೆ ಹಣ ಹೊಳೆಯನ್ನೇ ಹರಿಸುತ್ತಿರುವ ಸಂಗತಿ ಆದಾಯ ತೆರಿಗೆ ಆಧಿಕಾರಿಗಳ ದಾಳಿಯಿಂದಾಗಿ ತಿಳಿದುಬಂದಿದೆ.

ಚೆನ್ನೈ: ಅರ್ ಕೆ ನಗರ ಉಪ ಚುನಾವಣೆಯನ್ನು ತೀರಾ ಪ್ರತಿಷ್ಠೆಯ ಕಣವಾಗಿ ಪರಿಗಣಿಸಿರುವ ತಮಿಳುನಾಡು ರಾಜಕೀಯ ಪಕ್ಷಗಳು ಶತಾಯಗತಾಯ ಆ ಕ್ಷೇತ್ರವನ್ನು ಗೆಲ್ಲಲೇ ಬೇಕು ಎಂಬ ಕಾರಣಕ್ಕೆ ಮತದಾರರಿಗೆ ಹಣ ಹೊಳೆಯನ್ನೇ ಹರಿಸುತ್ತಿರುವ ಸಂಗತಿ ಆದಾಯ ತೆರಿಗೆ ಆಧಿಕಾರಿಗಳ ದಾಳಿಯಿಂದಾಗಿ ತಿಳಿದುಬಂದಿದೆ.
ಮೂಲಗಳ ಪ್ರಕಾರ ಇತ್ತೀಚೆಗೆ ನಟ ಶರತ್ ಕುಮಾರ್ ಮತ್ತು ಸಚಿವ ವಿಜಯ ಭಾಸ್ಕರ್ ಅವರ ನಿವಾಸ ಸೇರಿದಂತೆ ಚೆನ್ನೈನ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು ಭಾರಿ ಪ್ರಮಾಣದ ನಗದನ್ನು ವಶಪಡಿಸಿಕೊಂಡಿದ್ದರು. ಈ ಹಣ ಮತದಾರರಿಗೆ ಹಂಚಿಕೆ ಮಾಡಲು ಶೇಖರಿಸಿಡಲಾಗಿತ್ತು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆದಾಯ ತೆರಿಗೆ ದಾಳಿ ವೇಳೆ ಮತದಾರರಿಗೆ 90 ಕೋಟಿ ರು. ಹಣ ಹಂಚಲು ನಡೆಸಿದ್ದ ಯೋಜನೆ ದಾಖಲೆಗಳಲ್ಲಿ ಬಹಿರಂಗವಾಗಿತ್ತು.
ಅಲ್ಲದೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿ ಸ್ವಾಮಿ ಸೇರಿದಂತೆ ಸಂಪುಟದ 7 ಮಂತ್ರಿಗಳು ಈ ಹೊಣೆಗಾರಿಕೆ ಹೊತ್ತುಕೊಂಡಿರುವ ಸ್ಫೋಟಕ ಮಾಹಿತಿ ಲಭಿಸಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಆರ್.ಕೆ. ನಗರ ಕ್ಷೇತ್ರದ 2.63 ಲಕ್ಷ ಮತದಾರರ ಪೈಕಿ 2.24 ಲಕ್ಷ ಮತದಾರರ (ಶೇ.85)ನ್ನು ಗುರುತಿಸಿದ್ದ ಆಡಳಿತಾರೂಢ (ಶಶಿಕಲಾ) ಬಣ ಹಣ ಅವರಿಗೆ ಹಣ ಹಂಚಿಕೆ ಮಾಡಿತ್ತು. ಪ್ರತೀ ಮತಕ್ಕೆ ಬರೊಬ್ಬರಿ 4 ಸಾವಿರ ರುಗಳಂತೆ ಮತದಾರರಿಗೆ ಹಣ ಹಂಚಿಕೆ ಮಾಡಿತ್ತು ಎಂದು ಹೇಳಲಾಗುತ್ತಿದೆ.
ಐಟಿ ದಾಳಿಗೊಳಗಾದವರಿಗೆ ಸಮನ್ಸ್ ಜಾರಿ
ಇನ್ನು ಇತ್ತೀಚೆಗೆ ಅದಾಯ ತೆರಿಗೆ ಅಧಿಕಾರಿಗಳಿಂದ ದಾಳಿಗೆ ಒಳಗಾದ ಸಚಿವ ವಿಜಯ ಭಾಸ್ಕರ್, ನಟ-ರಾಜಕಾರಣಿ ಶರತ್ ಕುಮಾರ್ ಹಾಗೂ ಡಾ| ಎಂಜಿಆರ್ ವಿಶ್ವವಿದ್ಯಾಲಯದ ಉಪಕುಲಪತಿ ಗೀತಾಲಕ್ಷ್ಮಿ ಅವರಿಗೆ ತೆರಿಗೆ ಇಲಾಖೆ ಸಮನ್ಸ್ ಜಾರಿ ಮಾಡಿದೆ. ಈ ವರೆಗೂ ಆದಾಯ ತೆರಿಗೆ ಅಧಿಕಾರಿಗಳು ಸುಮಾರು 50 ಪ್ರದೇಶಗಳಲ್ಲಿ ದಾಳಿ ನಡೆಸಿದ ಅಪಾರ ಪ್ರಮಾಣದ ನಗದು ವಶಪಡಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


