ದೇಶ

18ರಿಂದ 20ಗಂಟೆ ಕೆಲಸ ಮಾಡಿ ಇಲ್ಲವೇ ಜಾಗ ಖಾಲಿ ಮಾಡಿ: ಸಚಿವರಿಗೆ, ಅಧಿಕಾರಿಗಳಿಗೆ ಯೋಗಿ ಎಚ್ಚರಿಕೆ

ನಾನು ವಿರಾಮವಿಲ್ಲದೆ ಕೆಲಸ ಮಾಡುವ ವ್ಯಕ್ತಿ. ದಿನಕ್ಕೆ 18ರಿಂದ 20 ಗಂಟೆಗಳ ಕಾಲ ಕೆಲಸ ಮಾಡುವವರು ಮಾತ್ರ ನನ್ನೊಂದಿಗೆ ಇರಬಹುದು...

18ರಿಂದ 20ಗಂಟೆ ಕೆಲಸ ಮಾಡಿ ಇಲ್ಲವೇ ಜಾಗ ಖಾಲಿ ಮಾಡಿ: ಸಚಿವರಿಗೆ, ಅಧಿಕಾರಿಗಳಿಗೆ ಯೋಗಿ ಎಚ್ಚರಿಕೆ
ಯೋಗಿ ಆದಿತ್ಯನಾಥ್
Published On :
ಲಖನೌ: ನಾನು  ವಿರಾಮವಿಲ್ಲದೆ ಕೆಲಸ ಮಾಡುವ ವ್ಯಕ್ತಿ. ದಿನಕ್ಕೆ 18ರಿಂದ 20 ಗಂಟೆಗಳ ಕಾಲ ಕೆಲಸ ಮಾಡುವವರು ಮಾತ್ರ ನನ್ನೊಂದಿಗೆ ಇರಬಹುದು, ಇಲ್ಲದೇ ಇದ್ದವರು ಎದ್ದು ಹೋಗಬಹುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮ್ಮ ಸಚಿವರಿಗೆ ಹಾಗೂ ಅಧಿಕಾರಿಗಳೆ ಎಚ್ಚರಿಕೆ ನೀಡಿದ್ದಾರೆ.
ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿ ಸ್ಥಾನಕ್ಕೇರಿದ ಒಂದು ತಿಂಗಳಲ್ಲಿಯೇ ಹಲವಾರು ಕಾರ್ಯಗಳನ್ನು ಕೈಗೊಂಡು ಬ್ಯುಸಿಯಾಗಿದ್ದು, ತಮ್ಮ ಸಚಿವ ಸಂಪುಟದಲ್ಲಿರುವವರೂ ಸಮಯದ ಬಗ್ಗೆ ಯೋಚಿಸದೆ ಕೆಲಸ ಮಾಡಬೇಕೆಂದು ಬಯಸಿದ್ದಾರೆ. ಕೆಲವೊಮ್ಮೆ ಅಧಿಕಾರಿಗಳು ರಾತ್ರಿಯೂ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಸರ್ಕಾರದ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಸಚಿವರು ಹೆಚ್ಚಿನ ಮುತುವರ್ಜಿ ವಹಿಸಬೇಕು. ಇಂಥಾ ವಿಷಯಗಳಲ್ಲಿ ಅಸಡ್ಡೆ ತೋರಿದರೆ ಸರ್ಕಾರ ಅದನ್ನು ಸಹಿಸುವುದಿಲ್ಲ. ದಿನದಲ್ಲಿ 18-20 ಗಂಟೆಗಳ ಕಾಲ ದುಡಿಯಲಿಚ್ಛಿಸುವವರು ಮಾತ್ರ ಸಚಿವ ಸಂಪುಟದಲ್ಲಿರಬಹುದು, ಇಲ್ಲದೇ ಇದ್ದರೆ ಅವರು ಹೊರಗೆ ಹೋಗಬಹುದು ಎಂದು ಆದಿತ್ಯನಾಥ ಹೇಳಿದ್ದಾರೆ.
ನಾನು ವಿರಾಮವಿಲ್ಲದೆ ದುಡಿಯುವ ವ್ಯಕ್ತಿ, ನನ್ನ ಸರ್ಕಾರದಲ್ಲಿ ಕೆಲಸ ನಿರ್ವಹಿಸುತ್ತಿರುವವರೂ ಅದೇ ರೀತಿ ಇರಬೇಕೆಂದು ನಾನು ಬಯಸುತ್ತೇನೆ. ಕಠಿಣ ಪರಿಶ್ರಮದಿಂದ ಕೆಲಸ ಮಾಡಲು ಇಚ್ಛಿಸುತ್ತಿರುವವರು ನನ್ನೊಂದಿಗೆ ಇರಬಹುದು. ಕೆಲಸ ಮಾಡಲು ಇಚ್ಛೆ ಇಲ್ಲದೇ ಇದ್ದರೆ ಬಿಟ್ಟು ಹೋಗಬಹುದು ಎಂದು ಆದಿತ್ಯನಾಥ್ ತುಂಬಾ ಸ್ಪಷ್ಟವಾಗಿ ತಮ್ಮ ಅಧಿಕಾರಿ ವರ್ಗಕ್ಕೆ ಆದೇಶ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.