ಬಡ ಮತ್ತು ತುಳಿತಕ್ಕೊಳಗಾದವರ ಸೇವೆಗೆ ಬಿಜೆಪಿ ಸದಾ ಸಿದ್ಧ: ಪ್ರಧಾನಿ
ಬಡವರು ಮತ್ತು ಸಮಾಜದ ಕಟ್ಟೆಕಡೆಯಲ್ಲಿರುವ, ತಿರಸ್ಕಾರಕ್ಕೆ ಒಳಗಾದ ಜನರ ಸೇವೆಯನ್ನು ಪಕ್ಷ...

Published On :
ನವದೆಹಲಿ: ಬಡವರು ಮತ್ತು ಸಮಾಜದ ಕಟ್ಟೆಕಡೆಯಲ್ಲಿರುವ, ತಿರಸ್ಕಾರಕ್ಕೆ ಒಳಗಾದ ಜನರ ಸೇವೆಯನ್ನು ಪಕ್ಷ ಮುಂದುವರಿಸಲಿದೆ. ಪಕ್ಷದ ಏಳಿಗೆಗಾಗಿ ದುಡಿದ ತಳಮಟ್ಟದ ಕಾರ್ಯಕರ್ತರನ್ನು ಈ ಸಂದರ್ಭದಲ್ಲಿ ನೆನೆಸಿಕೊಳ್ಳುವುದು ಮುಖ್ಯ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಜೆಪಿಯ 37ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಇತರ ಸಚಿವರು, ಶಾಸಕರು, ಕಾರ್ಯಕರ್ತರ ಜೊತೆ ಭಾಗವಹಿಸಿದರು. ದೆಹಲಿಯ ಬಿಜೆಪಿ ಕೇಂದ್ರ ಕಚೇರಿಗೆ ತೆರಳಿ ದೀನ್ ದಯಾಳ್ ಉಪಾಧ್ಯಾಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಬಿಜೆಪಿಯ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ದೇಶಾದ್ಯಂತ ಇರುವ ಬಿಜೆಪಿ ಕುಟುಂಬ ಸದಸ್ಯರಿಗೆ ನಾನು ಶುಭಾಶಯ ತಿಳಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಸಮಾಜ ಸೇವೆಯ ಪ್ರಯತ್ನದೊಂದಿಗೆ ಪಕ್ಷವನ್ನು ಇಟ್ಟಿಗೆ ರೀತಿ ಕಟ್ಟಿದ ದಶಕಗಳಿಂದ ಕಠಿಣ ಶ್ರಮಪಟ್ಟು ದುಡಿಯುತ್ತಿರುವ ಬಿಜೆಪಿ ಕಾರ್ಯಕರ್ತರನ್ನು ಈ ಸಂದರ್ಭದಲ್ಲಿ ನೆನೆಸಿಕೊಳ್ಳಲು ಹೆಮ್ಮೆಯಾಗುತ್ತಿದೆ ಎಂದರು.
ಅಂತ್ಯೋದಯದ ಮಂತ್ರದೊಂದಿಗೆ ದೇಶದ ಬಡ ಮತ್ತು ಮಧ್ಯಮ ವರ್ಗದವರು ಸೇರಿದಂತೆ ಎಲ್ಲಾ ಜನರ ಸೇವೆ ಮಾಡುವ ಕಾರ್ಯ ಮುಂದುವರಿಯುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


