ದೇಶ

ಅಯೋಧ್ಯಯಲ್ಲಿ ರಾಮ ನವಮಿ ಆಚರಣೆ ವೇಳೆ ಕಾಲ್ತುಳಿತ, ಓರ್ವ ಮಹಿಳೆ ಸಾವು

ಅಯೋಧ್ಯಯಲ್ಲಿ ಬುಧವಾರ ನಡೆದ ರಾಮ ನವಮಿ ಮೇಳದಲ್ಲಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಕಾಲ್ತುಳಿತ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಮಹಿಳೆ....

ಅಯೋಧ್ಯಯಲ್ಲಿ ರಾಮ ನವಮಿ ಆಚರಣೆ ವೇಳೆ ಕಾಲ್ತುಳಿತ, ಓರ್ವ ಮಹಿಳೆ ಸಾವು
ಸಾಂದರ್ಭಿಕ ಚಿತ್ರ
Published On :
ಲಖನೌ: ಅಯೋಧ್ಯಯಲ್ಲಿ ಬುಧವಾರ ನಡೆದ ರಾಮ ನವಮಿ ಮೇಳದಲ್ಲಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಕಾಲ್ತುಳಿತ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ರಾಮ ಜನ್ಮಭೂಮಿ ಮಂದಿರ ಸಮೀಪ ಇರುವ ತುಳಸಿ ಉದ್ಯಾನದಲ್ಲಿ ಮೊದಲ ಕಾಲ್ತುಳಿತ ಸಂಭವಿಸಿದ್ದು, ಈ ವೇಳೆ ಸಿದ್ಧಾರ್ಥನಗರ ಜಿಲ್ಲೆಯ 65 ವರ್ಷದ ದುಲರಿ ದೇವಿ ಎಂಬ ಮಹಿಳೆ ಮೃತಪಟ್ಟಿದ್ದಾರೆ. 
ತುಳಸಿ ಭವನದಲ್ಲಿ ಪೂಜೆ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವೇಳೆ ಜನರ ತಳ್ಳಾಟದಿಂದ ದುಲರಿ ಕೆಳಗೆ ಬಿದ್ದಿದ್ದು, ಕಾಲ್ತುಳಿತದಿಂದಾಗಿ ತನ್ನ ಪತ್ನಿ ಮೃತಪಟ್ಟಿದ್ದಾರೆ ಎಂದು ದುಲರಿ ಪತಿ ಸಾಧು ರಾಮ್ ಅವರು ಹೇಳಿದ್ದಾರೆ. 
ಈ ಮಧ್ಯೆ ದುಲರಿ ದೇವಿ ಭಾರಿ ಜನಸಂದಣಿ ಮಧ್ಯ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಫೈಜಾಬಾದ್ ಎಸ್ಎಸ್ ಪಿ ಅನಂತ್ ಡಿಯೋ ಅವರು ತಿಳಿಸಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಮಹಿಳೆ ಲಖಪತಿ ದೇವಿ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸರಯು ನದಿ ದಡದಲ್ಲಿರುವ ಬಂಧತಿರಾದಲ್ಲಿ ಮತ್ತೊಂದು ಕಾಲ್ತುಳಿತ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಆದರೆ ಗಾಯಾಳುಗಳ ಸಂಖ್ಯೆಯನ್ನು ಸ್ಥಳೀಯ ಆಡಳಿತ ಇನ್ನು ಖಚಿತಪಡಿಸಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.