ಅಪ್ರಾಪ್ತರು ಅಪಘಾತ ಮಾಡಿದ್ರೆ ಇನ್ನು ಪೋಷಕರಿಗೂ ಶಿಕ್ಷೆ!
ಮಹತ್ವದ ಬೆಳವಣಿಗೆಯಲ್ಲಿ ಮೋಟಾರ್ ವಾಹನ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಅಪಘಾತ, ಕುಡಿದು ವಾಹನ ಚಾಲನೆಯಂತಹ ಅಪರಾಧಗಳಿಗೆ ಇನ್ನು ಕಠಿಣ ಶಿಕ್ಷೆ ಜಾರಿಗೊಳಿಸಲು ನಿರ್ಧರಿಸಲಾಗಿದೆ.

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಮೋಟಾರ್ ವಾಹನ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಅಪಘಾತ, ಕುಡಿದು ವಾಹನ ಚಾಲನೆಯಂತಹ ಅಪರಾಧಗಳಿಗೆ ಇನ್ನು ಕಠಿಣ ಶಿಕ್ಷೆ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ನೂತನ ಮೋಟಾರ್ ವಾಹನ ಕಾಯ್ದೆಯಲ್ಲಿನ ತಿದ್ದುಪಡಿ ಅಂಶಗಳ ಅನ್ವಯ ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿ ಸಿಕ್ಕಿಬಿದ್ದರೆ ಅಥವಾ ಇನ್ನೇನಾದರೂ ತೊಂದರೆಗೆ ಸಿಕ್ಕಿಹಾಕಿಕೊಂಡರೆ ಅಂಥವರಿಗೆ ಮಾತ್ರವಲ್ಲ ಅವರ ಪೋಷಕರು ಅಥವಾ ಹೆತ್ತವರಿಗೂ ಶಿಕ್ಷೆಯಾಗಲಿದೆ. ಕೇಂದ್ರ ಸಚಿವ ಸಂಪುಟ ಅನುಮೋದಿಸಿದ ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆಯಲ್ಲಿ ಇಂಥಹ ಒಂದು ಅಂಶವಿದ್ದು, ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವಾಗ ಅಪಘಾತ ಸಂಭವಿಸಿದರೆ, ಪೋಷಕರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಅಲ್ಲದೆ ಪೋಷಕರಿಗೆ ಲಕ್ಷ, ಲಕ್ಷ ರೂ. ದಂಡ ಕೂಡ ಬೀಳಲಿದೆ.
ಮುಂದಿನ ವಾರವೇ ತಿದ್ದುಪಡಿ ಮಸೂದೆ ಸಂಸತ್‌ನಲ್ಲಿ ಮಂಡನೆಯಾಗುವ ಸಾಧ್ಯತೆ ಇದ್ದು, ಉಭಯ ಸದನಗಳಲ್ಲಿ ಕಾಯ್ದೆಗೆ ಅನುಮೋದನೆ ದೊರೆಯುವ ವಿಶ್ವಾಸವಿದೆ. ಒಂದು ವೇಳೆ ಈ ತಿದ್ದುಪಡಿ ನಿಯಮ ಜಾರಿಯಾಗಿದ್ದೇ ಆದರೆ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುವ ದಂಡ ಹಾಲಿ ಪ್ರಮಾಣಕ್ಕಿಂತ 10 ಪಟ್ಟು ಹೆಚ್ಚಾಗಲಿದೆ. ಸಣ್ಣ ಸಾರಿಗೆ ನಿಯಮ ಉಲ್ಲಂಘಿಸಿದರೂ ಕನಿಷ್ಠ 5 ಸಾವಿರ ರೂ. ದಂಡ ಕಟ್ಟಲೇ ಬೇಕು. ಇದರೊಂದಿಗೆ ಹೀಗೆ ಶಿಕ್ಷೆ ಅವಧಿ, ದಂಡ ಪ್ರಮಾಣದಲ್ಲಿನ ಹೆಚ್ಚಳ, ಬದಲಾವಣೆಗಳಿಗೆ ಸಂಬಂಧಿಸಿದ ಮಸೂದೆಯನ್ನು ಬರುವ ವಾರ ಲೋಕಸಭೆ ಮುಂದೆ ತರಲು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ.
ಅಂತೆಯೇ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರಿಗೆ 2,000 ರೂ ಬದಲು 10 ಸಾವಿರ ರೂ., ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುವ ಚಾಲಕರಿಗೆ 1,000 ಬದಲು 5 ಸಾವಿರ ರೂ. ದಂಡ ಬೀಳಲಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ "ಅಪಘಾತ ಸಂಭವಿಸಿದಾಗ ಅಪಘಾತ ಎಸಗಿದವರಿಂದ ಸಂತ್ರಸ್ತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ದೊರೆಯಲಿದೆ. ಈ ಮೊತ್ತವನ್ನು ನಾಲ್ಕು ತಿಂಗಳೊಳಗೆ ಪಾವತಿಸುವುದು ಕಡ್ಡಾಯ' ಎಂದು ತಿಳಿಸಿದ್ದಾರೆ.
ಅಂತೆಯೇ ಸಿಗ್ನಲ್ ಜಂಪ್, ಸೀಟ್ ಬೆಲ್ಟ್, ಹೆಲ್ಮೆಟ್ ಇಲ್ಲದೆ ಚಾಲನೆ ಮಾಡುವವರಿಗೆ 1000 ರೂ. ದಂಡ ವಿಧಿಸುವ ಜೊತೆಗೆ ಚಾಲನಾ ಪರವಾನಗಿಯನ್ನು ಮೂರು ತಿಂಗಳು ವಜಾಗೊಳಿಸಲಾಗುತ್ತದೆ. ವಿಶೇಷವೆಂದರೆ ಸಂಚಾರ ನಿಯಮ ಉಲ್ಲಂಘಿಸುವ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರಿಗೆ ದುಪ್ಪಟ್ಟು ದಂಡ ವಿಧಿಸಲು ಈ ಬದಲಾದ ಕಾಯ್ದೆ ಅವಕಾಶ ನೀಡಲಿದೆ. ಸಾಮಾನ್ಯ ವ್ಯಕ್ತಿಯಾಗಲಿ, ಸೆಲೆಬ್ರಿಟಿ, ಜನಪ್ರತಿನಿಧಿ ಅಥವಾ ಪ್ರಭಾವಿಗಳಿರಲಿ ಚಾಲನಾ ಪರೀಕ್ಷೆ ಪಾಸು ಮಾಡದ ಹೊರತು ಡಿಎಲ್ ವಿತರಿಸಕೂಡದು ಎಂದು ಆರ್ ಟಿಒಗಳಿಗೆ ಸೂಚಿಸಲಾಗಿದೆ ಎಂದು ಗಡ್ಕರಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


