ವಿಷ ಆಹಾರ ಸೇವನೆ ಶಂಕೆ: 400 ಸಿಆರ್'ಪಿಎಫ್ ಯೋಧರು ಅಸ್ವಸ್ತ
ಸಿಆರ್'ಪಿಎಫ್ ಶಿಬಿರದಲ್ಲಿ ನೀಡಲಾಗಿದ್ದ ಆಹಾರವನ್ನು ಸೇವಿಸಿ 400 ಯೋಧರು ಅಸ್ವಸ್ತರಾಗಿರುವ ಘಟನೆಯೊಂದು ಕೇರಳದ ಪಲ್ಲಿಪುರಂನಲ್ಲಿ ಭಾನುವಾರ ನಡೆದಿದೆ...

Published On :
ತಿರುವನಂತರಪುರ: ಸಿಆರ್'ಪಿಎಫ್ ಶಿಬಿರದಲ್ಲಿ ನೀಡಲಾಗಿದ್ದ ಆಹಾರವನ್ನು ಸೇವಿಸಿ 400 ಯೋಧರು ಅಸ್ವಸ್ತರಾಗಿರುವ ಘಟನೆಯೊಂದು ಕೇರಳದ ಪಲ್ಲಿಪುರಂನಲ್ಲಿ ಭಾನುವಾರ ನಡೆದಿದೆ.
ವಿಷಯುಕ್ತ ಆಹಾರದಿಂದಾಗಿ ಯೋಧರು ಅಸ್ವಸ್ತರಾಗಿದ್ದಾರೆಂದು ಶಂಕಿಸಲಾಗಿದ್ದು, ಅಸ್ವಸ್ತಗೊಂಡ ಯೋಧರನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಕಳೆದ ರಾತ್ರಿ ಯೋಧರಿಗೆ ಆಹಾರವನ್ನು ನೀಡಲಾಗಿದ್ದು, ಆಹಾರ ಸೇವಿಸುತ್ತಿದ್ದಂತೆಯೇ ಯೋಧರಿಗೆ ಹೊಟ್ಟೆನೋವು ಹಾಗೂ ವಾಂತಿಯಾಗಲು ಶುರುವಾಗಿದೆ. ಕೂಡಲೇ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
109 ಯೋಧರನ್ನು ತ್ರಿವಂಡ್ರಮ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಪರಿವೀಕ್ಷಣೆಯಲ್ಲಿರಿಸಲಾಗಿದೆ. ಈಗಾಗಲೇ ಕೇರಳ ರಾಜ್ಯ ಆರೋಗ್ಯ ಸಚಿವ ಕೆ.ಕೆ. ಶೈಲಜ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದು, ಯೋಧರ ಆರೋಗ್ಯವನ್ನು ವಿಚಾರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


