ದೇಶ

ಕಿತ್ತು ತಿನ್ನುವ ಬಡತನ: 650 ರು. ಗೆ ಹೆಣ್ಣುಮಗುವನ್ನು ಮಾರಾಟ ಮಾಡಿದ ದಂಪತಿ

ಕಿತ್ತು ತಿನ್ನುವ ಬಡತನದಿಂದಾಗಿ ಬುಡಕಟ್ಟು ಜನಾಂಗದ ದಂಪತಿ ತಮ್ಮ ಎರಡು ವರ್ಷದ ಹೆಣ್ಣು ಮಗುವನ್ನು 650 ರು.ಗೆ ಮಾರಾಟ ಮಾಡಿರುವ ಘಟನೆ ತ್ರಿಪುರದಲ್ಲಿ ..

ಕಿತ್ತು ತಿನ್ನುವ ಬಡತನ: 650 ರು. ಗೆ ಹೆಣ್ಣುಮಗುವನ್ನು ಮಾರಾಟ ಮಾಡಿದ ದಂಪತಿ
ಸಾಂದರ್ಭಿಕ ಚಿತ್ರ
Published On :

ಅಗರ್ತಲಾ: ಕಿತ್ತು ತಿನ್ನುವ ಬಡತನದಿಂದಾಗಿ ಬುಡಕಟ್ಟು ಜನಾಂಗದ ದಂಪತಿ ತಮ್ಮ ಎರಡು ವರ್ಷದ ಹೆಣ್ಣು ಮಗುವನ್ನು 650 ರು.ಗೆ ಮಾರಾಟ ಮಾಡಿರುವ ಘಟನೆ ತ್ರಿಪುರದಲ್ಲಿ ನಡೆದಿದೆ.

ಬಡತನ ರೇಖೆಗಿಂತ ಕೆಳಗಿರುವ ಈ ದಂಪತಿ ಮಗುವಿನ ಖರ್ಚು ವೆಚ್ಚ ಭರಿಸಲಾಗದೇ ಮಗುವನ್ನು ಮಾರಾಟ ಮಾಡಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

ಬಡತನ ಹಾಗೂ ಆಹಾರವಿಲ್ಲದ ಕಾರಣ ಕೆಲ ಪ್ರದೇಶಗಳ ಬುಡಕಟ್ಟು ಜನಾಂಗದ ಮಂದಿ ಸಾಯುತ್ತಿದ್ದಾರೆ. ಆದರೆ ಎಲ್ಲೋ ಒಂದೋ, ಎರಡೋ ಪ್ರಕರಣಗಳಷ್ಟೇ ಮಾಧ್ಯಮಗಳಿಂದ ಬೆಳಕಿಗೆ ಬರುತ್ತಿವೆ ಎಂದು ತೃಣಮೂಲ ಕಾಂಗ್ರೆಸ್ ಶಾಸಕ ಸುದೀಪ್ ರಾಯ್ ಬಹರ್ಮನ್ ತಿಳಿಸಿದ್ದಾರೆ.

ತಮ್ಮ ಜೀವನ ನಿರ್ವಹಣೆಗೋಸ್ಕರ ಈ ದಂಪತಿ ತಮ್ಮ ಮಗುವನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನೂ ಮಗು ಮಾರಾಟದ ಆರೋಪದ ಮೇಲೆ ದಂಪತಿಯನ್ನು ಬಂಧಿಸಲಾಗಿದೆ. ಮಗುವನ್ನು ಖರೀದಿಸಿದವರು ಇನ್ನೂ ಸಿಕ್ಕಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.