ಉರಿ ದಾಳಿ ಬೆನ್ನಲ್ಲೇ ಬಿಜೆಪಿಯಿಂದ ವೈಭವದ ಕಾರ್ಯಕಾರಿಣಿ ಸಭೆ: ಕಾಂಗ್ರೆಸ್ ಟೀಕೆ
ಬಿಜೆಪಿ ಕೇರಳದ ಕೋಯಿಕ್ಕೋಡ್ ನಲ್ಲಿ ನಡೆಸಿರುವ ಕಾರ್ಯಕಾರಿಣಿಯನ್ನು ವೈಭವೋಪೇತವೆಂದು ಹೇಳಿರುವ ಕಾಂಗ್ರೆಸ್...

ತಿರುವನಂತಪುರಂ: ಬಿಜೆಪಿ ಕೇರಳದ ಕೋಯಿಕ್ಕೋಡ್ ನಲ್ಲಿ ನಡೆಸಿರುವ ಕಾರ್ಯಕಾರಿಣಿಯನ್ನು ವೈಭವೋಪೇತವೆಂದು ಹೇಳಿರುವ ಕಾಂಗ್ರೆಸ್, ಸೆ.18 ರಂದು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಭಯೋತ್ಪಾದಕ ದಾಳಿಯಲ್ಲಿ 18 ಯೋಧರು ಹುತಾತ್ಮರಾದ ನಂತರ ಇಂತಹ ವೈಭವೋಪೇತ ಕಾರ್ಯಕ್ರಮವನ್ನು ನಡೆಸಿರುವುದನ್ನು ಟೀಕಿಸಿದೆ.
ದೇಶಕ್ಕಾಗಿ 18 ಯೋಧರು ಬಲಿದಾನ ಮಾಡಿರುವ ಬೆನ್ನಲ್ಲೇ ಬಿಜೆಪಿ ಕಾರ್ಯಕಾರಿಣಿಸಭೆಯನ್ನು ಆಯೋಜಿಸಿದೆ ಎಂದು ಕೇರಳ ಕಾಂಗ್ರೆಸ್ ನ ಅಧ್ಯಕ್ಷ ವಿಎಂ ಸುಧೀಂದ್ರನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಮುಂದೂಡಬೇಕಿತ್ತು ಎಂದು ಸುಧೀಂದ್ರನ್ ಹೇಳಿದ್ದು, ಪ್ರಧಾನಿ ನರೇಂದ್ರ ಮೋದಿ ವೈಭವೋಪೇತ ಕಾರ್ಯಕಾರಿಣಿಯನ್ನುದ್ದೇಶಿಸಿ ಮಾತನಾಡುವ ಬದಲು ವಿಶೇಷ ಸಂಸತ್ ಅಧಿವೇಶನ ಕರೆದು ಕಾರ್ಯಕಾರಿಣಿಯಲ್ಲಿ ಪ್ರಸ್ತಾಪಿಸಿದ ಅಂಶಗಳನ್ನು ಸಂಸತ್ ನಲ್ಲಿ ಪ್ರಸ್ತಾಪಿಸಬೇಕಿತ್ತು ಎಂದಿದ್ದಾರೆ. ಈ ಹಿಂದೆ ಭೇಟಿ ನೀಡಿದ್ದ ವೇಳೆ ಕೇರಳದ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ ಎಂದು ಸುಧೀಂದ್ರನ್ ಇದೆ ವೇಳೆ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


