ಪಾದಚಾರಿಗೆ ಡಿಕ್ಕಿ ಹೊಡೆದು ಕಾರಿನ ಬಾನೆಟ್ ಮೇಲೆ ಶವವನ್ನು 2 ಕಿಮೀ ವರೆಗೆ ಹೊತ್ತೊಯ್ದ ಚಾಲಕ
ರಸ್ತೆ ದಾಟುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದ ಚಾಲಕ ಕಾರು ನಿಲ್ಲಿಸದೇ ಬಾನೆಟ್ ಮೇಲಿದ್ದ ಶವವನ್ನು ಸುಮಾರು ಎರಡೂವರೆ ಕಿ.ಮೀ ದೂರ ಹೊತ್ತೊಯ್ದ ಘಟನೆ ...

ಮೆಹಬೂಬ ನಗರ: ರಸ್ತೆ ದಾಟುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದ ಚಾಲಕ ಕಾರು ನಿಲ್ಲಿಸದೇ ಬಾನೆಟ್ ಮೇಲಿದ್ದ ಶವವನ್ನು ಸುಮಾರು ಎರಡೂವರೆ ಕಿ.ಮೀ ದೂರ ಹೊತ್ತೊಯ್ದ ಘಟನೆ ಹೈದರಾಬಾದ್ ನ ಜಡ್ಚೆರ್ಲಾದಲ್ಲಿ ನಡೆದಿದೆ.
ಕರ್ನೂಲ್ ನಿಂದ ಹೈದರಾಬಾದ್ ಗೆ ಬರುತ್ತಿದ್ದ ಕಾರಿನಲ್ಲಿದ್ದ ಅಪರಿಚಿತ ಚಾಲಕ ರಸ್ತೆ ದಾಟುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ಬಾನೆಟ್ ಮೇಲಿದ್ದ ಶವವನ್ನು ಇಳಿಸಿದೇ ಸುಮಾರು ಎರಡೂವರೆ ಕಿಮೀ ವರೆಗೂ ಕೊಂಡೊಯ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟವನನ್ನು ನಿಂಬಾಯಿಗಡ್ಡ ನಿವಾಸಿ ಸ್ರೀನು ಎಂದು ತಿಳಿದು ಬಂದಿದೆ. ಸ್ರೀನು ಸ್ಥಳೀಯ ಕಬ್ಬಿಣದ ಅಂಗಡಿಯೊಂದರಲ್ಲಿ ದಿನಗೂಲಿ ನೌಕರನಾಗಿದ್ದ. ಸ್ರೀನು ಗೆ ಡಿಕ್ಕಿ ಹೊಡೆದ ಕಾರನ್ನು ಸ್ಥಳೀಯ ಯುವಕರು ತಮ್ಮ ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಹೋಗಿದ್ದಾರೆಯ. ಆದರೆ ಅಪಘಾತ ನಡೆದ ಸ್ಥಳದಿಂದ ಸುಮಾರು ಎರಡೂವರೆ ಕಿಮೀ ದೂರದಲ್ಲಿ ಕಾರು ನಿಲ್ಲಿಸಿ ಚಾಲಕ ಕತ್ತಲೆಯಲ್ಲಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ಕಾರನ್ನು ಪರಿಶೀಲನೆ ನಡೆಸಿದಾಗ ಅದು ಹೈದರಾಬಾದ್ ನ ನಿವಾಸಿ ಚಂದ್ರಕಲಾ ಎಂಬುವರಿಗೆ ಸೇರಿದ್ದಾಗಿ ತಿಳಿದು ಬಂದಿದೆ. ವಿಳಾಸ ಪಡೆದು ಪೊಲೀಸರು ಚಂದ್ರಕಲಾ ಮನೆಗೆ ಭೇಟಿ ನೀಡಿದ್ದರು. ಆದರೆ ಘಟನೆ ನಂತರ ಚಂದ್ರಕಲಾ ತಮ್ಮ ಮನೆಗೆ ಬೀಗ ಜಡಿದು ಪರಾರಿಯಾಗಿದ್ದಾರೆ.ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ದೇಹವನ್ನು ಪೊಲೀಸರು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


