ದೇಶ

ಲೈಂಗಿಕ ಕಿರುಕುಳ ಆರೋಪ: ಎಎಪಿ ಶಾಸಕ ಅಮನತುಲ್ಲಾ ಖಾನ್ ಬಂಧನ

ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಎಎಪಿ ಶಾಸಕ ಅಮನತುಲ್ಲಾ ಖಾನ್ ಅವರನ್ನು ಬುಧವಾರ ದೆಹಲಿ...

ಲೈಂಗಿಕ ಕಿರುಕುಳ ಆರೋಪ: ಎಎಪಿ ಶಾಸಕ ಅಮನತುಲ್ಲಾ ಖಾನ್ ಬಂಧನ
ಅಮನತುಲ್ಲಾ ಖಾನ್
Published On :
ನವದೆಹಲಿ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಎಎಪಿ ಶಾಸಕ ಅಮನತುಲ್ಲಾ ಖಾನ್ ಅವರನ್ನು ಬುಧವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ. 
ಸ್ವತಃ ಅಮನತುಲ್ಲಾ ಖಾನ್ ಸೊಸೆಯೇ ಅವರ ವಿರುದ್ಧ ದೂರು ನೀಡಿದ್ದು, ಈ ಸಂಬಂಧ ವಿಚಾರಣೆಗೆಂದು ಆಗಮಿಸಿದ ಆಪ್ ಶಾಸಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಂಟಿ ಪೊಲೀಸರು ಆಯುಕ್ತ ಆರ್.ಪಿ.ಉಪಾಧ್ಯಯ ಅವರು ತಿಳಿಸಿದ್ದಾರೆ.
ಅಮನತುಲ್ಲಾ ಖಾನ್ ಇಂದು ಎರಡನೇ ಬಾರಿ ಜೈಲು ಪಾಲಾಗಿದ್ದಾರೆ. ಈ ಮುಂಚೆ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಖಾನ್, ಸೆಪ್ಟೆಂಬರ್ 18ರಂದು ಜಾಮೀನಿನ ಮೇಲೆ ಬಿಡುಗಡೆ ಯಾಗಿದ್ದರು.
ಡಿಸಿಪಿ ಕಚೇರಿಯಲ್ಲಿ ಸಾಮಾನ್ಯ ಚರ್ಚೆಗೆ ನನ್ನನ್ನು ಕರೆಯಲಾಗಿತ್ತು. ಆದರೆ ಈಗ ಬಂಧಿಸಿದ್ದಾರೆ ಎಂದು ಅಮನತುಲ್ಲಾ ಖಾನ್ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.