ಚಕ್ರವರ್ತಿ ಅಶೋಕ ಜನ್ಮ, ಮರಣ ದಿನಾಂಕ ಕುರಿತು ಆರ್ ಟಿಐ; ಉತ್ತರಕ್ಕಾಗಿ ಪರದಾಡಿದ ನಾಲ್ಕು ಸಚಿವಾಲಯ!
ಅಖಂಡ ಭಾರತ ದೇಶವನ್ನು ಆಳಿದ ಮಹಾನ್ ಚಕ್ರವರ್ತಿ ಅಶೋಕನ ಜನ್ಮ ದಿನ ಹಾಗೂ ಮರಣ ದಿನ ಯಾವುದು? ಎಂಬ ಈ ಮಾಹಿತಿ ಹಕ್ಕು ಪ್ರಶ್ನೆಗೆ ಸರಿಯಾದ ಉತ್ತರ ಹುಡುಕಲು ಕೇಂದ್ರದ ನಾಲ್ಕು ಸಚಿವಾಲಯಗಳು ಪರದಾಡಿದ ಘಟನೆ ನಡೆದಿದೆ.

ನವದೆಹಲಿ: ಅಖಂಡ ಭಾರತ ದೇಶವನ್ನು ಆಳಿದ ಮಹಾನ್ ಚಕ್ರವರ್ತಿ ಅಶೋಕನ ಜನ್ಮ ದಿನ ಹಾಗೂ ಮರಣ ದಿನ ಯಾವುದು? ಎಂಬ ಈ ಮಾಹಿತಿ ಹಕ್ಕು ಪ್ರಶ್ನೆಗೆ ಸರಿಯಾದ ಉತ್ತರ ಹುಡುಕಲು ಕೇಂದ್ರದ ನಾಲ್ಕು ಸಚಿವಾಲಯಗಳು ಪರದಾಡಿದ ಘಟನೆ ನಡೆದಿದೆ.
ಅರುಣ್ ಕುಮಾರ್ ಎಂಬ ಆರ್ ಟಿಐ ಅರ್ಜಿದಾರ ಚಕ್ರವರ್ತಿ ಅಶೋಕನ ಜನ್ಮ ದಿನಾಚರಣೆ ಕುರಿತು ಕೇಂದ್ರ ಸರ್ಕಾರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ಹಿನ್ನಲೆಯಲ್ಲಿ ರಾಜ ಅಶೋಕನ ಜನ್ಮ ದಿನ ಹಾಗೂ ಮರಣ ದಿನದ ಸರಿಯಾದ ದಿನಾಂಕ ನೀಡುವಂತೆ ಪ್ರಧಾನಿ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿಯನ್ನು ಪ್ರಧಾನಿ ಕಾರ್ಯಾಲಯದ ಮಾಹಿತಿ ಹಕ್ಕು ಅಧಿಕಾರಿ ಸ್ವೀಕರಿಸಿದ್ದು, ಬಳಿಕ ಅದನ್ನು ಪರಿಶೀಲಿಸಿ ಕೇಂದ್ರ ಸಂಸ್ಕೃತಿ ಇಲಾಖೆಯನ್ನು ಅರ್ಜಿಯನ್ನು ವರ್ಗಾಯಿಸಲಾಗಿದೆ.
ಅರ್ಜಿ ಸ್ವೀಕರಿಸಿದ ಸಂಸ್ಕೃತಿ ಇಲಾಖೆ ದಾಖಲೆಗಳನ್ನು ಪರಿಶೀಲಿಸಿದಾಗ ರಕ್ಷಣೆಸ ವಿತ್ತ ಹಾಗೂ ಗೃಹಇಲಾಖೆಗಳ ವತಿಯಿಂದ ಎರಡು ವಿಭಿನ್ನ ದಿನಾಂಕಗಳಲ್ಲಿ ಆಶೋಕ ಕುರಿತ ಕಾರ್ಯಕ್ರಮ ಆಯೋಜನೆಯಾಗಿರುವ ವಿಚಾರ ತಿಳಿದಿದೆ. ಹೀಗಾಗಿ ಎರಡೂ ಇಲಾಖೆಗಳಿಗೆ ಅರ್ಜಿಯನ್ನು ಸಂಸ್ಕೃತಿ ಇಲಾಖೆ ವರ್ಗಾಯಿಸಿದೆ. ಆದರೆ ಈ ಎರಡೂ ಇಲಾಖೆಯ ದಾಖಲೆಗಳಲ್ಲೂ ಅಶೋಕನ ಜನ್ಮ ಹಾಗೂ ಮರಣ ಹೊಂದಿದ ದಿನದ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ.
ಅಂತಿಮವಾಗಿ ಅರ್ಜಿದಾರ ಅರುಣ್ ಕುಮಾರ್ ಗೆ ಮಾಹಿತಿ ನೀಡಿರುವ ಕೇಂದ್ರ ಮಾಹಿತಿ ಆಯೋಗ ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಅಶೋಕ ಕ್ರಿ.ಪೂ 304 ರಲ್ಲಿ ಜನಿಸಿ ಕ್ರಿ ಪೂ 232ರಲ್ಲಿ ಸಾವನ್ನಪ್ಪಿದ್ದ ಎಂದು ಮಾಹಿತಿ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


