ಶೌಚಾಲಯ ಕಟ್ಟಿಸಲು ಸಾಕಿದ್ದ ಕುರಿಗಳನ್ನು ಮಾರಿದ 104ರ ಹರೆಯದ ಅಜ್ಜಿ
ಛತ್ತೀಸ್ಗಢದ ಧಮ್ತರಿ ಜಿಲ್ಲೆಯ ನಿವಾಸಿ 104 ರ ಹರೆಯದ ಮುದುಕಿಯೊಬ್ಬರು ಶೌಚಾಲಯ ನಿರ್ಮಿಸಲು ತಾವು ಸಾಕಿದ್ದ ಕುರಿಗಳನ್ನು ಮಾರಾಟ ಮಾಡಿದ್ದಾರೆ...

ಧಮ್ತರಿ: ಛತ್ತೀಸ್ಗಢದ ಧಮ್ತರಿ ಜಿಲ್ಲೆಯ ನಿವಾಸಿ 104 ರ ಹರೆಯದ ಮುದುಕಿಯೊಬ್ಬರು ಶೌಚಾಲಯ ನಿರ್ಮಿಸಲು ತಾವು ಸಾಕಿದ್ದ ಕುರಿಗಳನ್ನು ಮಾರಾಟ ಮಾಡಿದ್ದಾರೆ.
ಈ ಅಜ್ಜಿ ನೆಲೆಸಿರುವ ಗ್ರಾಮ ಒಂದು ಕುಗ್ರಾಮವಾಗಿದ್ದು ಟಿವಿ ಮತ್ತು ಓದಲು ಪತ್ರಿಕೆಗಳು ಸಿಗದಂತ ಈ ಊರಿನಲ್ಲಿ ಶೇಖಡ 75ರಷ್ಟು ಗ್ರಾಮಸ್ಥರು ಬಯಲು ಶೌಚಾಲಯವನ್ನೇ ಅವಲಂಭಿಸಿದ್ದಾರೆ. ಇಂತಹ ಊರಿನಲ್ಲಿ ಶೌಚಾಲಯ ನಿರ್ಮಿಸುವ ಮೂಲಕ ಆದರ್ಶ ಮೆರೆದಿದ್ದಾರೆ.
ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯಗಳನ್ನು ನಿರ್ಮಾಣ ಮಾಡುತ್ತಿರುವ ಸುದ್ದಿ ತಿಳಿದ ಮುದುಕಿ ತನ್ನ ಕುರಿಗಳನ್ನು ಮಾರಿ ಶೌಚಾಲಯ ನಿರ್ಮಾಣ ಮಾಡಿದ್ದಾರೆ. ಅಜ್ಜಿಯ ಇಂತಹ ಸಾಧನೆ ಕಂಡ ಹಲವು ಗ್ರಾಮಸ್ಥರು ತಮ್ಮ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ.
ಬಯಲು ಮುಕ್ತ ಶೌಚಾಲಯ ಮೂಲಕ ಸ್ವಚ್ಛ ಭಾರತ ಕನಸು ಕಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿಗೆ ಈ ಪ್ರಕರಣಗಳು ಪ್ರೇರಕವಾಗಬಲ್ಲದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


