ದೇಶ

ಅಮರ್ ಸಿಂಗ್ ರಿಂದ ಮುಲಾಯಂ ದುರುಪಯೋಗ: ರಾಮ್ ಗೋಪಾಲ್ ಯಾದವ್

ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಅವರ ಚಿಕ್ಕಪ್ಪ ಶಿವಪಾಲ್ ನಡುವಿನ ತಿಕ್ಕಾಟಕ್ಕೆ ರಾಜ್ಯಸಭೆ ಸದಸ್ಯ ಅಮರ್ ಸಿಂಗ್ ಕಾರಣ ಎಂದು ...

ಅಮರ್ ಸಿಂಗ್ ರಿಂದ ಮುಲಾಯಂ ದುರುಪಯೋಗ: ರಾಮ್ ಗೋಪಾಲ್ ಯಾದವ್
ರಾಮ್ ಗೋಪಾಲ್ ಯಾದವ್, ಅಮರ್ ಸಿಂಗ್ ಮತ್ತು ಮುಲಾಯಂ ಸಿಂಗ್ ಯಾದವ್
Published On :

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಅವರ ಚಿಕ್ಕಪ್ಪ ಶಿವಪಾಲ್ ನಡುವಿನ ತಿಕ್ಕಾಟಕ್ಕೆ ರಾಜ್ಯಸಭೆ ಸದಸ್ಯ ಅಮರ್ ಸಿಂಗ್ ಕಾರಣ ಎಂದು ಸಮಾಜವಾದಿ ಪಕ್ಷದ ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್ ಆರೋಪಿಸಿದ್ದಾರೆ.

ಖಾಸಗಿ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಅಮರ್ ಸಿಂಗ್ ಯಾವತ್ತೂ ಪಕ್ಷದ ಹಿತಾಸಕ್ತಿ ಬಗ್ಗೆ ಯೋಚಿಸಲೇ ಇಲ್ಲ. ಅವರು ತಮ್ಮ ಬಗ್ಗೆ ಮಾತ್ರವೇ ಯೋಚನೆ ಮಾಡುತ್ತಾರೆ ಎಂದು ದೂರಿದ್ದಾರೆ.

ಬಹಳ ಹಿಂದಿನಿಂದಲೂ ಅಮರ್ ಸಿಂಗ್ ಪಕ್ಷದೊಳಗೆ ಸಮಸ್ಯೆ ತಂದು ಇಡುತ್ತಾರೆ. ಎಸ್ಪಿಯ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್ ಅವರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

ನಾನು ಸಮಾಜವಾದಿಯಲ್ಲ, ಮುಲಾಯಂ ವಾದಿ ಎಂದು ಅಮರ್ ಸಿಂಗ್ ಹೇಳುತ್ತಾರೆ. ಈ ಮಾತಿನ ಅರ್ಥವೇನು ಎಂದು ಪ್ರಶ್ನಿಸಿರುವ ಅವರು ಅಖಿಲೇಶ್ ಮತ್ತು ಶಿವಪಾಲ್ ನಡುವೆ ಏರ್ಪಟ್ಟಿದ್ದ ಭಿನ್ನಮತ ಶಮನಗೊಂಡು, ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರೆತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.