ದೇಶ

ಜಿಎಸ್ಟಿ ಮಂಡಳಿ ರಚನೆಗೆ ಕೇಂದ್ರ ಸಂಪುಟ ಅಧಿಸೂಚನೆ

ಸರಕು ಮತ್ತು ಸೇವಾ ಸಮಿತಿಯ ಕಾರ್ಯವೈಖರಿ, ರಚನೆ ಮತ್ತು ಪ್ರಕ್ರಿಯೆಗಳನ್ನು ಕೇಂದ್ರ ಸಂಪುಟ ಸೋಮವಾರ...

ಜಿಎಸ್ಟಿ ಮಂಡಳಿ ರಚನೆಗೆ ಕೇಂದ್ರ ಸಂಪುಟ ಅಧಿಸೂಚನೆ
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ
Published On :
ನವದೆಹಲಿ: ಸರಕು ಮತ್ತು ಸೇವಾ ಸಮಿತಿಯ ಕಾರ್ಯವೈಖರಿ, ರಚನೆ ಮತ್ತು ಪ್ರಕ್ರಿಯೆಗಳನ್ನು ಕೇಂದ್ರ ಸಂಪುಟ ಸೋಮವಾರ ಆರಂಭಿಸಿದ್ದು, ಹೊಸ ಪರೋಕ್ಷ ತೆರಿಗೆಯಡಿಯಲ್ಲಿ ತೆರಿಗೆ ದರವನ್ನು ಅದು ನಿರ್ಧರಿಸಲಿದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರ ನೇತೃತ್ವದ ಈ ಸಮಿತಿಯಲ್ಲಿ ಎಲ್ಲಾ 29 ರಾಜ್ಯಗಳ ಹಣಕಾಸು ಸಚಿವರು  ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಇರುತ್ತಾರೆ. ಸಮಿತಿ ನವೆಂಬರ್ 11ರಂದು ಅಸ್ಥಿತ್ವಕ್ಕೆ ಬರಲಿದೆ.
ಇಂದಿನ ದಿನಾಂಕ ನಮೂದಿಸಿದ ಸರ್ಕಾರದ ಅಧಿಸೂಚನೆಯಲ್ಲಿ ಜಿಎಸ್ಟಿ ಸಮಿತಿ ಸ್ಥಾಪನೆಗೆ ಪ್ರಕ್ರಿಯೆ ಆರಂಭವಾಗಿದ್ದು, ಇನ್ನು 60 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ. ಪ್ರಧಾನ ಮಂತ್ರಿಗಳ ನೇತೃತ್ವದ ಸಂಪುಟ ಸಮಿತಿ ರಚನೆ, ಪ್ರಕ್ರಿಯೆ ಮತ್ತು ಕಾರ್ಯವೈಖರಿಗೆ ಅನುಮೋದನೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.