ಪ್ರತ್ಯೇಕತಾವಾದಿಗಳಿಗೆ ಸರ್ಕಾರಿ ಸೇವೆ: ಕೇಂದ್ರದ ವಿರುದ್ಧ ಪಿಐಎಲ್ ದಾಖಲು
ಕಾಶ್ಮೀರ ವಿವಾದ ಕುರಿತಂತೆ ಪಾಕಿಸ್ತಾನ ಪರವಾಗಿ ನಿಂತು ಹೋರಾಟ ಮಾಡುತ್ತಿರುವ ಪ್ರತ್ಯೇಕತಾವಾದಿಗಳಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಸರ್ಕಾರಿ ಸೇವೆಗಳ ವಿರುದ್ಧ...

ನವದೆಹಲಿ: ಕಾಶ್ಮೀರ ವಿವಾದ ಕುರಿತಂತೆ ಪಾಕಿಸ್ತಾನ ಪರವಾಗಿ ನಿಂತು ಹೋರಾಟ ಮಾಡುತ್ತಿರುವ ಪ್ರತ್ಯೇಕತಾವಾದಿಗಳಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಸರ್ಕಾರಿ ಸೇವೆಗಳ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಗುರುವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿದೆ.
ವಕೀಲ ಎಂ.ಎಲ್ ಶರ್ಮಾ ಎಂಬುವವರು ಅರ್ಜಿಯನ್ನು ದಾಖಲಿಸಿದ್ದು, ಪ್ರತ್ಯೇಕತಾವಾದಿಗಳಿಗೆ ಸರ್ಕಾರ ಹೋಟೆಲ್, ವಿಮಾನ ಹಾಗೂ ಭದ್ರತೆ ಎಂದು 100 ಕೋಟಿ ಹಣವನ್ನು ಖರ್ಚು ಮಾಡುತ್ತಿದೆ. ಪಾಕಿಸ್ತಾನ ಪರವಾಗಿ ನಿಂತು ಹೋರಾಟ ಮಾಡುತ್ತಿರುವ ಪ್ರತ್ಯೇಕತಾವಾದಿಗಳಿಗೆ ನಮ್ಮ ಸರ್ಕಾರವೇಕೆ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕು ಎಂದು ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.
ಈ ಅರ್ಜಿಯನ್ನು ಪರಿಶೀಲನೆ ನಡೆಸಿರುವ ನ್ಯಾಯಮೂರ್ತಿ ಅಲಿನ್ ದಾವೆ ಅವರು, ಇದೇ ರೀತಿಯ ಅಭಿಪ್ರಾಯವನ್ನು ನಾವೂ ಕೂಡ ವ್ಯಕ್ತಪಡಿಸಿದ್ದೇವೆ. ಇಲ್ಲಿ ಕೂತಿರುವ ಪ್ರತೀಯೊಬ್ಬರಲ್ಲೂ ಇದೇ ಪ್ರಶ್ನೆಗಳು ಮೂಡಿವೆ ಎಂದು ಉತ್ತರಿಸಿದ್ದರು. ಅಲ್ಲದೆ, ತಮ್ಮ ಅರ್ಜಿಯ ಸಂಖ್ಯೆಯನ್ನು ತೆಗೆದುಕೊಂಡು ಮಧ್ಯಾಹ್ನ 2 ಗಂಟೆಗೆ ಮತ್ತೆ ನ್ಯಾಯಾಲಯಕ್ಕೆ ಬರುವಂತೆ ಅರ್ಜಿದಾರರಿಗೆ ಸೂಚಿಸಿದ್ದಾರೆ.
ಪ್ರತ್ಯೇಕತಾವಾದಿಗಳಿಗಾಗಿ ಸರ್ಕಾರ ವರ್ಷಕ್ಕೆ ರು. 100 ಕೋಟಿ ಹಣವನ್ನು ಖರ್ಚು ಮಾಡುತ್ತಿದ್ದು, ಇದರಲ್ಲಿ ಕೇಂದ್ರ ಸರ್ಕಾರ ಶೇ.90 ರಷ್ಟು ಹಾಗೂ ರಾಜ್ಯ ಸರ್ಕಾರ ಶೇ. 10 ರಷ್ಟು ಹಣದ ಹೊರೆಯನ್ನು ಹೊತ್ತು ವ್ಯಯ ಮಾಡುತ್ತಿದೆ. ಪ್ರತ್ಯೇಕತಾವಾದಿಗಳ ಭದ್ರತೆಗಾಗಿಯೇ ಸರ್ಕಾರ 950 ಪೊಲೀಸರನ್ನು ನಿಯೋಜಿಸಿದ್ದು, ಪ್ರತೀ ನಿತ್ಯ ಪ್ರತ್ಯೇಕತಾವಾದಿಗಳ ಭದ್ರತೆಗೇ ಹೆಚ್ಚು ಹಣವನ್ನು ಖರ್ಚು ಮಾಡುತ್ತಿದೆ.
ಉಗ್ರ ಬುರ್ಹಾನ್ ವಾನಿ ಹತ್ಯೆ ಹಿನ್ನೆಲೆಯಲ್ಲಿ ಕಾಶ್ಮೀರದ ಪ್ರತ್ಯೇಕವಾದಿಗಳು ನೀಡಿದ್ದ ಪ್ರತಿಭಟನಾ ಕರೆ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದಲೂ ಕಾಶ್ಮೀರದಲ್ಲಿ ಹಿಂಸಾಚಾರ ಮುಗಿಲು ಮುಟ್ಟಿದೆ. ಈಗಲೂ ಕಾಶ್ಮೀರದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಪರಿಸ್ಥಿತಿಯಿದ್ದು, ಮತ್ತೆ ಎಲ್ಲಿ ಹಿಂಸಾಚಾರ ಆರಂಭವಾಗುತ್ತದೆಯೋ ಎಂಬ ಭಯದಲ್ಲಿಯೇ ಅಲ್ಲಿನ ಜನ ಜೀವನ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


