ದಭೋಲ್ಕರ್ ಕೊಲೆ: ವೀರೇಂದ್ರಸಿಂಗ್ ತಾವ್ಡೆ ವಿರುದ್ಧ ಕೊಲೆ ಆರೋಪ ಪ್ರಕರಣ ದಾಖಲಿಸಿದ ಸಿಬಿಐ
2013 ರಲ್ಲಿ ನಡೆದ ವಿಚಾರವಾದಿ ನರೇಂದ್ರ ದಭೋಲ್ಕರ್ ಕೊಲೆ ಸಂಬಂಧವಾಗಿ ಸಿಬಿಐ, ಹಿಂದೂ ಜಾಗರಣ ಸಮಿತಿ ಸದಸ್ಯ ವೀರೇಂದ್ರಸಿಂಗ್ ತಾವ್ಡೆ ವಿರುದ್ಧ ಅಪರಾಧ ಷಡ್ಯಂತ್ರ ಮತ್ತು ಕೊಲೆ ಪ್ರಕರಣ ದಾಖಲಿಸಿದೆ.

Published On :
ನವದೆಹಲಿ: 2013 ರಲ್ಲಿ ನಡೆದ ವಿಚಾರವಾದಿ ನರೇಂದ್ರ ದಭೋಲ್ಕರ್ ಕೊಲೆ ಸಂಬಂಧವಾಗಿ ಸಿಬಿಐ, ಹಿಂದೂ ಜಾಗರಣ ಸಮಿತಿ ಸದಸ್ಯ ವೀರೇಂದ್ರಸಿಂಗ್ ತಾವ್ಡೆ ವಿರುದ್ಧ ಅಪರಾಧ ಷಡ್ಯಂತ್ರ ಮತ್ತು ಕೊಲೆ ಪ್ರಕರಣ ದಾಖಲಿಸಿದೆ.
ಮತ್ತೊಬ್ಬ ವಿಚಾರವಾದಿ ಮತ್ತು ಬರಹಗಾರ ಗೋವಿಂದ ಪನ್ಸಾರೆ ಅವರು ಫೆಬ್ರವರಿ 2015 ರಲ್ಲಿ ಕೊಲೆಯಾದಾಗಲಿಂದಲೂ ಪರಿವೀಕ್ಷಣೆಯಲ್ಲಿರುವ ಮತ್ತೊಂದು ಹಿಂದೂ ಸಂಸ್ಥೆ ಸನಾತನ ಸಂಸ್ಥಾ ಜೊತೆಗೆ ಹಿಂದೂ ಜಾಗರಣ ಸಮಿತಿಗೆ ಸಂಬಂಧವಿದೆ ಎಂದು ಕೂಡ ತಿಳಿಯಲಾಗಿದೆ.
ಸೆಕ್ಷನ್ 120-ಬಿ (ಅಪರಾಧ ಷಡ್ಯಂತ್ರ) ಮತ್ತು ಸೆಕ್ಷನ್ 302 (ಕೊಲೆ) ಅಡಿಯಲ್ಲಿ ತಾವ್ಡೆ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಸಿಬಿಐ ಮೂಲಗಳು ತಿಳಿಸಿವೆ.
ಮೂಢ ನಂಭಿಕೆ ವಿರೋಧಿ ಕಾರ್ಯಕರ್ತ ದಭೋಲ್ಕರ್ ಅವರನ್ನು ಹಾಡುಹಗಲೇ ಆಗಸ್ಟ್ 20 2103 ರಲ್ಲಿ ಕೊಲ್ಲಲಾಗಿತ್ತು. ಮೇ 2014 ರಲ್ಲಿ ಬಾಂಬೆ ಹೈಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು ಮತ್ತು ಈ ವರ್ಷ ಜೂನ್ ನಲ್ಲಿ ತಾವ್ಡೆಯನ್ನು ಸಿಬಿಐ ಬಂಧಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಕೊಲೆCBIHindu Janajagruti SamitiNarendra Dabholkarನರೇಂದ್ರ ದಭೋಲ್ಕರ್Virendrasing Tawdeಹಿಂದೂ ಜಾಗರಣ ಸಮಿತಿವೀರೇಂದ್ರಸಿಂಗ್ ತಾವ್ಡೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


