ಸೆಕ್ಸ್ ಸಿಡಿ ವಿವಾದ: 3 ದಿನಗಳ ಕಾಲ ಪೊಲೀಸರ ವಶಕ್ಕೆ ಸಂದೀಪ್ ಕುಮಾರ್
ಸೆಕ್ಸ್ ಸಿಡಿ ವಿವಾದ ಆರೋಪ ಹೊತ್ತಿರುವ ಆಪ್ ಉಚ್ಛಾಟಿತ ನಾಯಕ ಸಂದೀಪ್ ಕುಮಾರ್ ಅವರನ್ನು ದೆಹಲಿ ನ್ಯಾಯಾಲಯ ದಿನಗಳ ಕಾಲ ಸೋಮವಾರ ಪೊಲೀಸರ...

ನವದೆಹಲಿ: ಸೆಕ್ಸ್ ಸಿಡಿ ವಿವಾದ ಆರೋಪ ಹೊತ್ತಿರುವ ಆಪ್ ಉಚ್ಛಾಟಿತ ನಾಯಕ ಸಂದೀಪ್ ಕುಮಾರ್ ಅವರನ್ನು ದೆಹಲಿ ನ್ಯಾಯಾಲಯ ದಿನಗಳ ಕಾಲ ಸೋಮವಾರ ಪೊಲೀಸರ ವಶಕ್ಕೆ ನೀಡಿದೆ.
ಸೆಕ್ಸ್ ಸಿಡಿ ವಿವಾದ ಕುರಿತಂತೆ ನಿನ್ನೆಯಷ್ಟೇ ವಿಚಾರಣೆ ನಡೆಸಿದ್ದ ರೊಹಿಣಿ ಜಿಲ್ಲಾ ನ್ಯಾಯಾಲಯವು, ಒಂದು ದಿನಗಳ ಕಾಲ ಸಂದೀಪ್ ಅವರನ್ನು ಪೊಲೀಸರ ವಶಕ್ಕೆ ನೀಡಿತ್ತು.
ಇದರಂತೆ ಪೊಲೀಸರ ವಶ ಇಂದಿಗೆ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿರುವ ದೆಹಲಿ ನ್ಯಾಯಾಲಯ ಸಂದೀಪ್ ಕುಮಾರ್ ಅವರನ್ನು ಮತ್ತೆ ಮೂರು ದಿನಗಳ ಪೊಲೀಸರ ವಶಕ್ಕೆ ನೀಡಿದೆ.
ಕೆಲ ದಿನಗಳ ಹಿಂದಷ್ಟೇ ಸಂದೀಪ್ ಕುಮಾರ್ ಅವರು ಮಹಿಳೆಯರ ಜೊತೆ ಚೆಲ್ಲಾಟವಾಡುತ್ತಿದ್ದ ಸಿಡಿಯೊಂದು ಬಹಿರಂಗಗೊಂಡಿತ್ತು. ಈ ಸಿಡಿ ಸಾಕಷ್ಟು ಸುದ್ದಿಯನ್ನು ಮಾಡಿತ್ತು. ಇದರಂತೆ ಸಿಡಿಯಲ್ಲಿದ್ದ ಮಹಿಳೆ ಸಂದೀಪ್ ವಿರುದ್ಧ ಪ್ರಕರಣವೊಂದನ್ನು ದಾಖಲು ಮಾಡಿದ್ದರು.
ರೇಷನ್ ಕಾರ್ಡ್ ಪಡೆಯಲು ಸಹಾಯ ಕೋರಿ ನಾನು ಸಚಿವರ ಬಳಿ ಹೋಗಿದ್ದೆ. ಈ ವೇಳೆ ಅವರು ನನಗೆ ಮತ್ತು ಬರುವ ಪಾನೀಯ ನೀಡಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಿ ಮಹಿಳೆ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು, ಅಲ್ಲದೆ ಅವರು ಸಚಿವರಾದಮೇಲೆಯೇ ಆ ಸಿಡಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು.
ಸಿಡಿಯನ್ನು ಬಹಿರಂಗವಾಗುತ್ತಿದ್ದಂತೆಯೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಂದೀಪ್ ಅವರನ್ನು ತಮ್ಮ ಸಂಪುಟದಿಂದ ವಜಾ ಮಾಡಿದ್ದರು. ಮಹಿಳೆ ದೂರು ದಾಖಲಿಸಿದ ನಂತರ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ಸಂದೀಪ್ ಅವರನ್ನು ಅಮಾನತುಗೊಳಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


