ಮತ್ತೆ ಬಂತು ಆಪರೇಷನ್ ರೋಮಿಯೋ: 2 ಗಂಟೆಯಲ್ಲಿ 121 ಜನರ ಬಂಧನ
ರೋಡ್ ರೋಮಿಯೋಗಳ ವಿರುದ್ಧ ಆಪರೇಷನ್ ಮತ್ತೆ ಮುಂದುವರೆದಿದ್ದು, ಹರಿಯಾಣದ ಗುರುಗ್ರಾಮದ ಪೊಲೀಸರು ಶನಿವಾರ ಸಂಜೆ ನಡೆಸಿದ ಕಾರ್ಯಾಚರಣೆ ವೇಳೆ 121 ಜನರು...

ಗುರುಗ್ರಾಮ: ರೋಡ್ ರೋಮಿಯೋಗಳ ವಿರುದ್ಧ ಆಪರೇಷನ್ ಮತ್ತೆ ಮುಂದುವರೆದಿದ್ದು, ಹರಿಯಾಣದ ಗುರುಗ್ರಾಮದ ಪೊಲೀಸರು ಶನಿವಾರ ಸಂಜೆ ನಡೆಸಿದ ಕಾರ್ಯಾಚರಣೆ ವೇಳೆ 121 ಜನರು ಬಂಧನಕ್ಕೊಳಗಾಗಿದ್ದಾರೆ.
ಇಲ್ಲಿನ ಎಂ.ಜಿ ರಸ್ತೆಯಲ್ಲಿ ರೋಡ್ ರೋಮಿಯೋಗಳ ಹಾವಳಿ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು 'ಆಪರೇಷನ್ ರೋಡ್ ರೋಮಿಯೋ' ಕಾರ್ಯಾಚರಣೆಯನ್ನು ಕಳೆದ ವಾರವಷ್ಟೇ ಆರಂಭಿಸಿದ್ದರು. ಕೇವಲ 2 ಗಂಟೆಗಳಲ್ಲೇ 50ಕ್ಕೂ ಹೆಚ್ಚು ಯುವಕರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದರು.
ಇದರಂತೆ ನಿನ್ನೆ ಕೂಡ 'ಆಪರೇಷನ್ ರೋಮಿಯೋ ರಿಟರ್ನ್ಸ್' ಎಂದು ಕಾರ್ಯಾಚರಣೆಯನ್ನು ಮುಂದುವರೆಸಿ ಕೇವಲ 2 ಗಂಟೆಗಳಲ್ಲೇ 121 ರೋಡ್ ರೋಮಿಯೋಗಳನ್ನು ಬಂಧಿಸಿದ್ದಾರೆ.
ನಗರದಲ್ಲಿ ಯುವತಿಯರನ್ನು ಚುಡಾಯಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಆರಂಭ ಮಾಡಲಾಗಿತ್ತು. ನಿನ್ನೆ ನಡೆಸಿದ ಕಾರ್ಯಾಚರಣೆ ವೇಳೆ 2 ಗಂಟೆಗಳಲ್ಲಿ 121 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಎಪಿಸಿ ಧರ್ಮ ಯಾದವ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


