ದೇಶ

ಸಮಾಜವಾದಿ ಪಕ್ಷದ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಗೈರಾಗಲಿರುವ ನಿತೀಶ್ ಕುಮಾರ್

ಉತ್ತರ ಪ್ರದೇಶದಲ್ಲಿ ನ.5 ರಂದು ನಡೆಯಲಿರುವ ಸಮಾಜವಾದಿ ಪಕ್ಷದ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಬಿಹಾರ ಸಿಎಂ ನಿತೀಶ್ ಕುಮಾರ್ ಗೈರು ಹಾಜರಾಗಲಿದ್ದಾರೆ.

ಸಮಾಜವಾದಿ ಪಕ್ಷದ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಗೈರಾಗಲಿರುವ ನಿತೀಶ್ ಕುಮಾರ್
ನಿತೀಶ್ ಕುಮಾರ್
Published On :

ಪಾಟ್ನಾ: ಉತ್ತರ ಪ್ರದೇಶದಲ್ಲಿ ನ.5 ರಂದು ನಡೆಯಲಿರುವ ಸಮಾಜವಾದಿ ಪಕ್ಷದ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಬಿಹಾರ ಸಿಎಂ ನಿತೀಶ್ ಕುಮಾರ್ ಗೈರು ಹಾಜರಾಗಲಿದ್ದಾರೆ.

ಬಿಹಾರದಲ್ಲಿ ನ.4 ರಿಂದ 6 ವರೆಗೆ ಚ್ಚಾಥ್ ಹಬ್ಬದ ಆಚರಣೆ ಇದ್ದು, ಆಡಳಿತಾತ್ಮಕ ವ್ಯವಹಾರಗಳಲ್ಲಿ ನಿತೀಶ್ ಕುಮಾರ್ ಕಾರ್ಯನಿರತರಾಗಿರುವುದರಿಂದ ಉತ್ತರ ಪ್ರದೇಶದಲ್ಲಿ ನಡೆಯಲಿರುವ ಸಮಾಜವಾದಿ ಪಕ್ಷದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಜೆಡಿಯು ಕೆಸಿ ತ್ಯಾಗಿ ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಮುಖಂಡ ಶಿವಪಾಲ್ ಯಾದವ್ ಪಕ್ಷದ ರಜತಮಹೋತ್ಸವಕ್ಕೆ ಆಗಮಿಸಬೇಕೆಂದು ನಿತೀಶ್ ಕುಮಾರ್ ಹಾಗೂ ಆರ್ ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಅವರಿಗೆ ಎರಡು ಬಾರಿ ಆಹ್ವಾನ ನೀಡಿದ್ದರು. ಸಮಾರಂಭದಲ್ಲಿ ಭಾಗಿಯಾಗುವುದಾಗಿ ಲಾಲು ಪ್ರಸಾದ್ ಈಗಾಗಲೇ ತಿಳಿಸಿದ್ದಾರೆ. ಬಿಹಾರದಲ್ಲಿ ರಚನೆಯಾಗಿದ್ದ ಮಹಾಮೈತ್ರಿಕೂಟದಲ್ಲಿ ಸಮಾಜವಾದಿ ಪಕ್ಷ ಸಹ ಗುರುತಿಸಿಕೊಂಡಿತ್ತು. ಆದರೆ ನಿತೀಶ್ ಕುಮಾರ್ ಅವರೊಂದಿಗೆ ಉಂಟಾದ ಭಿನ್ನಾಭಿಪ್ರಾಯದಿಂದ ಕಳೆದ ವರ್ಷ ಸಮಾಜವಾದಿ ಪಕ್ಷ ಮಹಾಮೈತ್ರಿಕೂಟದಿಂದ ಹೊರ ನಡೆದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.