ದೇಶ

ಕಾಂಗ್ರೆಸ್ ನಾಯಕಿ ಮನೆಯಲ್ಲಿ ಕಬಡ್ಡಿ ಆಟಗಾರ್ತಿ ಮೇಲೆ ಗ್ಯಾಂಗ್ ರೇಪ್: ಮೂವರ ಬಂಧನ

ಕಬಡ್ಡಿ ಆಟಗಾರ್ತಿ ಮೇಲಿನ ಸಾಮೂಹಿತ ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು ಕಾಂಗ್ರೆಸ್ ನಾಯಕಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ...

ಕಾಂಗ್ರೆಸ್ ನಾಯಕಿ ಮನೆಯಲ್ಲಿ ಕಬಡ್ಡಿ ಆಟಗಾರ್ತಿ ಮೇಲೆ ಗ್ಯಾಂಗ್ ರೇಪ್: ಮೂವರ ಬಂಧನ
ಬಂಧನ
Published On :

ಲೂಧಿಯಾನಾ: ಕಬಡ್ಡಿ ಆಟಗಾರ್ತಿ ಮೇಲಿನ ಸಾಮೂಹಿತ ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು ಕಾಂಗ್ರೆಸ್ ನಾಯಕಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಳೆದ ಬುಧವಾರ ಸಂಜೆ ಪಂಜಾಬ್ ನ ಖನ್ನಾದಲ್ಲಿ ಮಹಿಳಾ ಕಾಂಗ್ರೆಸ್ ಘಟಕದ ನಾಯಕಿ ಶಹಾಂಜ್ ಚಂಡಿಗಡ್ ದಲ್ಲಿ ದ್ವೀತಿಯ ಪಿಯುಸಿ ಓದುತ್ತಿರುವ 19 ವರ್ಷದ ಸ್ಥಳೀಯ ಮಟ್ಟದ ಕಬಡ್ಡಿ ಆಟಗಾರ್ತಿಯನ್ನು ಮನೆಗೆ ಕರೆದುಕೊಂಡು ಈ ವೇಳೆ ಆಟಗಾರ್ತಿ ಮೇಲೆ ಅವತಾರ್ ಸಿಂಗ್ ಮತ್ತು ಆತನ ಗೆಳೆಯ ನಿರ್ಮಲ್ ಸಿಂಗ್ ಎಂಬುವರು ಅತ್ಯಾಚಾರ ನಡೆಸಿದ್ದು ಈ ಸಂಬಂಧ ಕಾಂಗ್ರೆಸ್ ನಾಯಕಿ ಶಹಾಂಜ್, ಪಟಿಯಾಲದ ಅವತಾರ್ ಸಿಂಗ್ ಹಾಗೂ ನಿರ್ಮಲ್ ಸಿಂಗ್ ರನ್ನು ಬಂಧಿಸಿದ್ದಾರೆ.

ಸಾಮೂಹಿಕ ಅತ್ಯಾಚಾರ ಸಂಬಂಧ ಅತ್ಯಾಚಾರ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನಲ್ಲಿ ಅವತಾರ್ ಎಂಬುವರೊಂದಿಗೆ ಒಂದೂವರೆ ವರ್ಷದ ಹಿಂದೆ ಪರಿಚಯವಾಗಿತ್ತು. ಪರಿಚಯದ ಬಳಿಕ ನಾವು ಫೋನ್ ನಲ್ಲಿ ಮಾತನಾಡುತ್ತಿದ್ದೇವು. ಬುಧವಾರ ಕರೆ ಮಾಡಿ ಅವತಾರ್ ನನ್ನನ್ನು ತಮ್ಮ ಪೋಷಕರಿಗೆ ಪರಿಚಯಿಸುವುದಾಗಿ ಹೇಳಿ ಕರೆಸಿಕೊಂಡಿದ್ದರು.

ಪೋಷಕರ ಭೇಟಿ ನಂತರ ತನ್ನ ಸಹೋದರಿಯನ್ನು ಭೇಟಿ ಮಾಡಿಸುವುದಾಗಿ ಹೇಳಿ ಶಹಾಂಜ್ ಮನೆಗೆ ಕರೆದೊಯ್ದು ಅಲ್ಲಿ ನನ್ನ ಮೇಲೆ ಅವತಾರ್ ಸಿಂಗ್ ಹಾಗೂ ನಿರ್ಮಲ್ ಸಿಂಗ್ ಅತ್ಯಾಚಾರ ಮಾಡಿದರು ಎಂದು ದೂರಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.