ಒಂದು ತಿಂಗಳ ಮೊದಲೇ ಕೇಂದ್ರ ಬಜೆಟ್ ನ್ನು ಮಂಡಿಸಲಾಗುವುದು: ಪ್ರಧಾನಿ ಮೋದಿ
ಯೋಜನೆಗಳು ಮತ್ತು ಸರ್ಕಾರದ ಸವಲತ್ತುಗಳನ್ನು ತ್ವರಿತವಾಗಿ ಜಾರಿಗೊಳಿಸಲು ಈ ಬಾರಿ ಒಂದು ತಿಂಗಳ...

Published On :
ನವದೆಹಲಿ: ಯೋಜನೆಗಳು ಮತ್ತು ಸರ್ಕಾರದ ಸವಲತ್ತುಗಳನ್ನು ತ್ವರಿತವಾಗಿ ಜಾರಿಗೊಳಿಸಲು ಈ ಬಾರಿ ಒಂದು ತಿಂಗಳ ಮುಂಚೆಯೇ ಬಜೆಟ್ ಮಂಡಿಸಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಗಳನ್ನು ಪರಿಶೀಲಿಸುವ ವೇದಿಕೆ ಪ್ರಗತಿಯ 16ನೇ ಸಂವಾದದಲ್ಲಿ ಮಾತನಾಡಿದ ಮೋದಿ, ರಾಜ್ಯಗಳು ಬಜೆಟ್ ಮಂಡನೆಗೆ ಹೊಸ ದಿನಾಂಕವನ್ನು ಸೂಚಿಸಿ ಅದರ ಗರಿಷ್ಠ ಲಾಭವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಕಾರ್ಮಿಕ ಮತ್ತು ನೌಕರಿ ಸಚಿವಾಲಯಕ್ಕೆ ಸಂಬಂಧಪಟ್ಟ ಕುಂದುಕೊರತೆಗಳ ನಿಭಾಯಿಸುವಿಕೆ ಮತ್ತು ನಿರ್ಣಯಗಳಿಗೆ ಸಂಬಂಧಪಟ್ಟ ಅಭಿವೃದ್ಧಿ ಕುರಿತು ಪರಾಮರ್ಶೆ ನಡೆಸಿದರು.ಕಾರ್ಮಿಕರ ಭವಿಷ್ಯನಿಧಿ ಫಲಾನುಭವಿಗಳಿಗೆ ಸಂಬಂಧಿಸಿದ ಅನೇಕ ದೂರು ದುಮ್ಮಾನಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಕಾರ್ಮಿಕರ ಅಗತ್ಯಗಳಿಗೆ ಸರ್ಕಾರ ಮನಮಿಡಿಯಬೇಕಾಗಿದೆ ಎಂದರು.
ಇ-ರಾಷ್ಟ್ರೀಯ ಕೃಷಿ ಮಾರುಕಟ್ಟೆ(ಇ-ನಾಮ್)ನ ಪ್ರಗತಿ ಬಗ್ಗೆ ಪರಾಮರ್ಶೆ ನಡೆಸುವಾಗ ಅಧಿಕಾರಿಗಳು, 8 ರಾಜ್ಯಗಳಲ್ಲಿ 21 ಮಂಡಿಗಳಲ್ಲಿ ಕಳೆದ ಏಪ್ರಿಲ್ ನಲ್ಲಿ ಆರಂಭಗೊಂಡ ಇ-ನಾಮ್ ಇಂದು 10 ರಾಜ್ಯಗಳಲ್ಲಿ 250 ಮಂಡಿಗಳಿಗೆ ವಿಸ್ತರಣೆಯಾಗಿದೆ. ಎಪಿಎಂಸಿ ಕಾಯ್ದೆಯಲ್ಲಿ ಅಗತ್ಯಪಟ್ಟ ಬದಲಾವಣೆಗಳನ್ನು ಇತರ ರಾಜ್ಯಗಳು ಮಾಡಿಕೊಳ್ಳಬೇಕು, ಆಗ ಇ-ನಾಮ್ ನ್ನು ದೇಶಾದ್ಯಂತ ವಿಸ್ತರಿಸಬಹುದು ಎಂದು ಪ್ರಧಾನಿ ಹೇಳಿದರು.
ಪ್ರಧಾನ ಮಂತ್ರಿ ಸಚಿವಾಲಯ ಹೊರಡಿಸಿರುವ ಹೇಳಿಕೆ ಪ್ರಕಾರ, ರೈಲ್ವೆ, ರಸ್ತೆ, ಇಂಧನ ಮತ್ತು ನೈಸರ್ಗಿಕ ಅನಿಲ ವಲಯಗಳಲ್ಲಿನ ಮೂಲಭೂತ ಸೌಕರ್ಯ ಯೋಜನೆಗಳ ಪ್ರಗತಿ ಬಗ್ಗೆ ಪ್ರಧಾನಿ ಪರಾಮರ್ಶೆ ನಡೆಸಿದರು. ಯೋಜನೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವ ಮೂಲಕ ಅತಿಯಾದ ವೆಚ್ಚವನ್ನು ನಿವಾರಿಸಬಹುದು ಎಂದು ಪ್ರಧಾನಿ ಪ್ರತಿಪಾದಿಸಿದರು.
ಭಾರತದ ಅಧಿಕೃತ ಭಾಷೆಗಳಲ್ಲಿ ಪ್ರತಿ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಮಾಹಿತಿಗಳನ್ನು ವೆಬ್ ಸೈಟ್ ನಲ್ಲಿ ಹಾಕಬೇಕೆಂದು ಕಾರ್ಯದರ್ಶಿಗಳು ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಪ್ರಧಾನಿ ಮೋದಿ ಸೂಚನೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


