ದೇಶ

ಕೇಂದ್ರ ಸಂಪುಟ ಸಮಿತಿ ಸಭೆಯೊಳಗೆ ಮೊಬೈಲ್ ಫೋನ್ ನಿಷೇಧ

ಸಂಪರ್ಕ ಸಾಧನಗಳನ್ನು ಹ್ಯಾಕ್ ಮಾಡುವ ಮೂಲಕ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆಯನ್ನು ತಡೆಯಲು ಸಂಪುಟ...

ಕೇಂದ್ರ ಸಂಪುಟ ಸಮಿತಿ ಸಭೆಯೊಳಗೆ ಮೊಬೈಲ್ ಫೋನ್ ನಿಷೇಧ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ಸಂಪರ್ಕ ಸಾಧನಗಳನ್ನು ಹ್ಯಾಕ್ ಮಾಡುವ ಮೂಲಕ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆಯನ್ನು ತಡೆಯಲು ಸಂಪುಟ ಸಭೆಗಳಿಗೆ ಹೋಗುವಾಗ ಸಚಿವರುಗಳು ಮೊಬೈಲ್ ಫೋನ್ ಗಳನ್ನು ತೆಗೆದುಕೊಂಡು ಹೋಗಬಾರದು ಎಂದು ಎಲ್ಲಾ ಕೇಂದ್ರ ಸಚಿವರಿಗೆ ಸರ್ಕಾರ ಸೂಚಿಸಿದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರ ಖಾಸಗಿ ಕಾರ್ಯದರ್ಶಿಗಳಿಗೆ ಸಂಪುಟ ಸಚಿವಾಲಯ ಆದೇಶ ಜಾರಿ ಮಾಡಿದೆ.
ಸಂಪುಟ ಮತ್ತು ಸಂಪುಟ ಸಮಿತಿ ಸಭೆಯೊಳಗೆ ಯಾವುದೇ ಸ್ಮಾರ್ಟ್ ಫೋನ್ ಅಥವಾ ಮೊಬೈಲ್ ಫೋನ್ ಗಳನ್ನು ತೆಗೆದುಕೊಂಡು ಹೋಗದಂತೆ ನಿರ್ಧಾರ ಮಾಡಲಾಗಿದೆ. ಈ ಸಂಬಂಧ ಕಾರ್ಯದರ್ಶಿಗಳು ತಮ್ಮ ಸಚಿವರಿಗೆ ತಿಳಿಸುವಂತೆ ಹೇಳಲಾಗಿದೆ ಎಂದು ಸಂಪುಟ ಸಚಿವಾಲಯ ತಿಳಿಸಿದೆ.
ಮೊಬೈಲ್ ಫೋನ್ ಗಳ ಹ್ಯಾಕಿಂಗ್ ಮಾಡಿ ಅವುಗಳ ಭದ್ರತೆ ಬಗ್ಗೆ ಇತ್ತೀಚೆಗೆ ಭದ್ರತಾ ಸಂಸ್ಥೆಗಳು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವ ಪಡೆದಿದೆ. ಸಂಪುಟ ಸಮಿತಿ ಸಭೆಯ ಸಂದರ್ಭದಲ್ಲಿ ಚರ್ಚೆಗೆ ಬರುವ ಅನೇಕ ವಿಷಯಗಳು ಸೂಕ್ಷ್ಮವಾಗಿರುವುದರಿಂದ ಆ ವಿಷಯಗಳು ಸೋರಿಕೆಯಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಈ ಹಿಂದೆ ಸಚಿವರು ಸಂಪುಟ ಅಥವಾ ಸಂಪುಟ ಸಮಿತಿ ಸಭೆಗೆ ಆಗಮಿಸುವಾಗ ಮೊಬೈಲ್/ ಸ್ಮಾರ್ಟ್ ಫೋನ್ ಗಳನ್ನು ತಮ್ಮ ಜೊತೆ ತರಬಹುದಾಗಿತ್ತು. ಆದರೆ ಅದನ್ನು ಸೈಲೆಂಟ್ ಮೋಡ್ ನಲ್ಲಿ ಅಥವಾ ಸ್ವಿಚ್ ಆಫ್ ಮಾಡಿ ಇಡಬೇಕಾಗುತ್ತಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.