ದೇಶ

ದೂರು ನೀಡಲು ವ್ಯಾಟ್ಸಪ್ ನಂಬರ್ ಕೊಟ್ರೆ, 44 ಸಾವಿರ ಮದುವೆ ಪ್ರಸ್ತಾಪಗಳ ಸಂದೇಶ ಬಂತು!

ಬಿಹಾರದ ಯುವ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಯುವತಿಯರಿಂದ ಮದುವೆ ಪ್ರಸ್ತಾಪಗಳ ಮಹಾಪೂರವೇ ಹರಿದುಬಂದಿದ್ದು, ದೂರು ನೀಡಲು ಸಾರ್ವಜನಿಕವಾಗಿ ನೀಡಲಾಗಿದ್ದ ವ್ಯಾಟ್ಸಪ್ ನೆಂಬರ್ ಗೆ ಸುಮಾರು 44 ಸಾವಿರ ಮದುವೆ ಪ್ರಸ್ತಾಪಗಳು ಬಂದಿವೆಯಂತೆ.

ದೂರು ನೀಡಲು ವ್ಯಾಟ್ಸಪ್ ನಂಬರ್ ಕೊಟ್ರೆ, 44 ಸಾವಿರ ಮದುವೆ ಪ್ರಸ್ತಾಪಗಳ ಸಂದೇಶ ಬಂತು!
ತೇಜಸ್ವಿ ಯಾದವ್ (ಸಂಗ್ರಹ ಚಿತ್ರ)
Published On :

ಪಾಟ್ನಾ: ಬಿಹಾರದ ಯುವ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಯುವತಿಯರಿಂದ ಮದುವೆ ಪ್ರಸ್ತಾಪಗಳ ಮಹಾಪೂರವೇ ಹರಿದುಬಂದಿದ್ದು, ದೂರು ನೀಡಲು ಸಾರ್ವಜನಿಕವಾಗಿ  ನೀಡಲಾಗಿದ್ದ ವ್ಯಾಟ್ಸಪ್ ನೆಂಬರ್ ಗೆ ಸುಮಾರು 44 ಸಾವಿರ ಮದುವೆ ಪ್ರಸ್ತಾಪಗಳು ಬಂದಿವೆಯಂತೆ.

ಈ ಬಗ್ಗೆ ಸ್ವತಃ ಬಿಹಾರದ ಅಧಿಕಾರಿಗಳು ಮಾಹಿತಿ ನೀಡಿದ್ದು, ಬಿಹಾರದ ಕೆಟ್ಟ ರಸ್ತೆಗಳ ಕುರಿತು ದೂರು ನೀಡುವ ಸಲುವಾಗಿ ತೇಜಸ್ವಿ ಯಾದವ್ ತಮ್ಮ ವಾಟ್ಸಪ್ ನಂಬರ್ ಅನ್ನು  ಸಾರ್ವಜನಿಕವಾಗಿ ನೀಡಿದ್ದರು. ಆದರೆ ಈ ನಂಬರ್ ಗೆ ದೂರುಗಳು ಬರುವ ಬದಲು ಮದುವೆ ಪ್ರಸ್ತಾಪಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವರೆಗೂ ತೇಜಸ್ವಿ ಯಾದವ್ ಅವರ ನಂಬರ್ ಗೆ ಸುಮಾರು 47 ಸಾವಿರ ಸಂದೇಶಗಳು ಬಂದಿದ್ದು, ಈ ಪೈಕಿ ಕೇವಲ 3 ಸಾವಿರ ಸಂದೇಶಗಳು ಮಾತ್ರ ಕೆಟ್ಟ ರಸ್ತೆಗಳ ಕುರಿತ ದೂರುಗಳಾಗಿದ್ದು,  ಉಳಿದ 44 ಸಾವಿರ ಸಂದೇಶಗಳು ತೇಜಸ್ವಿ ಯಾದವ್ ಅವರಿಗೆ ಯುವತಿಯರು ಕಳುಹಿಸಿರುವ ಮದುವೆ ಪ್ರಸ್ತಾಪಗಳಂತೆ. ಬಹುತೇಕ ಯುವತಿಯರು ತಮ್ಮ ವೈಯಕ್ತಿಕ ಮಾಹಿತಿ, ಎತ್ತರ,  ಚರ್ಮದ ಬಣ್ಣ ಸೇರಿದಂತೆ ಕುಟುಂಬದ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ತೇಜಸ್ವಿ ಯಾದವ್ ಅವರು ಒಂದು ವೇಳೆ ನಾನು ಮದುವೆ ಮಾಡಿಕೊಂಡಿದ್ದರೆ, ಈ ಸಂದೇಶಗಳು ನನ್ನನ್ನು ಪೇಚಿಗೆ ಸಿಲುಕಿಸುತ್ತಿದ್ದವು. ಸಧ್ಯ ನಾನು ಆ  ಅಪಾಯದಿಂದ ಪಾರಾಗಿದ್ದೇನೆ ಎಂದು ಹ್ಯಾಸ್ಯ ಮಾಡಿದ್ದಾರೆ. ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಹಾಗೂ ಆರ್ ಜೆಡಿ ಪಕ್ಷ ಮೈತ್ರಿ ಸರ್ಕಾರವಿದ್ದು, ಲಾಲು ಪ್ರಸಾದ್ ಯಾವವ್  ಅವರ ಇಬ್ಬರು ಪುತ್ರರು ಉಪ ಮುಖ್ಯಮಂತ್ರಿಗಳಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.