ಭಾರತ- ಪಾಕ್ ಸಂಘರ್ಷದ ಜೀವಹಾನಿಗಿಂತ ರಾಮಮಂದಿರಕ್ಕಾಗಿ ಮೃತಪಟ್ಟವರ ಸಂಖ್ಯೆ ಹೆಚ್ಚು: ವಿನಯ್ ಕಟಿಯಾರ್
ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ವಪಕ್ಷೀಯರನ್ನೇ ಮುಜುಗರಕ್ಕೀಡು ಮಾಡುವಂತೆ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ವಿನಯ್ ಕಟಿಯಾರ್ ರಾಮಮಂದಿರಕ್ಕಾಗಿ 3.5 ಲಕ್ಷ ಜನರು ಜೀವತೆತ್ತಿದ್ದಾರೆ ಎಂದು ಹೇಳಿದ್ದಾರೆ.

ಲಖನೌ: ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ವಪಕ್ಷೀಯರನ್ನೇ ಮುಜುಗರಕ್ಕೀಡು ಮಾಡುವಂತೆ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ವಿನಯ್ ಕಟಿಯಾರ್ ರಾಮಮಂದಿರಕ್ಕಾಗಿ 3.5 ಲಕ್ಷ ಜನರು ಜೀವತೆತ್ತಿದ್ದಾರೆ ಎಂದು ಹೇಳಿದ್ದಾರೆ.
ಭಾರತ- ಪಾಕಿಸ್ತಾನದ ನಡುವೆ ನಡೆದ ಯುದ್ಧದಲ್ಲಿ ಮೃತಪಟ್ಟವರಿಗಿಂತ ರಾಮಮಂದಿರಕ್ಕಾಗಿ ಜೀವ ಕಳೆದುಕೊಂಡವರ ಸಂಖ್ಯೆ ಹೆಚ್ಚಿದೆ ಆದ್ದರಿಂದ ರಾಮಮಂದಿರ ನಿರ್ಮಾಣ ಆಗಲೇ ಬೇಕು ಎಂದು ವಿನಯ್ ಕಟಿಯಾರ್ ಪಟ್ಟು ಹಿಡಿದ್ದಾರೆ. ಕೇಂದ್ರ ಸರ್ಕಾರದ ರಾಮಾಯಾಣ ಮ್ಯೂಸಿಯಂ ಪ್ರಸ್ತಾವನೆಯನ್ನು ತೀವ್ರವಾಗಿ ಟೀಕಿಸಿದ್ದ ಬಿಜೆಪಿ ಸಂಸದ ವಿನಯ್ ಕಟಿಯಾರ್ ರಾಮಮಂದಿರದ ನಿರೀಕ್ಷೆಯಲ್ಲಿರುವವರಿಗೆ ಕೇಂದ್ರ ಸರಕಾರ ರಾಮಾಯಣ ಮ್ಯೂಸಿಯಂ ಎಂಬ ಲಾಲಿಪಾಪ್ ನೀಡಲು ಮುಂದಾಗಿದೆ ಎಂದು ಲೇವಡಿ ಮಾಡಿದ್ದರು. ಈಗ ಭಾರತ- ಪಾಕ್ ನಡುವಿನ ಯುದ್ಧದಲ್ಲಿ ಮಾಡಿದವರಿಗಿಂತಲೂ ಹೆಚ್ಚು ಜನರು ರಾಮಮಂದಿರಕ್ಕಾಗಿ ಜೀವ ಅರ್ಪಿಸಿದ್ದಾರೆ ಎಂದು ಹೇಳಿರುವ ವಿನಯ್ ಕಟಿಯಾರ್ ರಾಮಮಂದಿರ ಪುರಾತನ ವಿಷಯವಾಗಿದೆ. ರಾಮಮಂದಿರ ನಿರ್ಮಾಣವಾಗುವವರೆಗೂ ಈ ವಿಷಯ ಮುಕ್ತಾಯವಾಗುವುದಿಲ್ಲ ಎಂದು ವಿನಯ್ ಕಟಿಯಾರ್ ಅಭಿಪ್ರಾಯಪಟ್ಟಿದ್ದಾರೆ.
ಇದೆ ವೇಳೆ ಕೇಂದ್ರ ಸರ್ಕಾರ ರಾಮಮಂದಿರ ನಿರ್ಮಾಣ ಮಾಡುವ ಘೋಷಣೆ ಮಾಡುವ ಬದಲು ರಾಮಾಯಣ ಮ್ಯೂಸಿಯಂ ನಿರ್ಮಾಣ ಘೋಷಣೆ ಮಾಡಿರುವುದು ದೊಡ್ಡ ತಪ್ಪು ಎಂದು ವಿನಯ್ ಕಟಿಯಾರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


