ದೇಶ

ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ಐಎನ್ಎಸ್ ಅರಿಹಂತ್ ಸೇನೆಗೆ ಸೇರ್ಪಡೆ

ಭೂಮಿ, ಆಕಾಶ ಮತ್ತು ಸಮುದ್ರದ ಮೂಲಕ ಅಣುಬಾಂಬ್ ನ್ನು ಸ್ಫೋಟಿಸಲು ಸಾಮರ್ಥ್ಯವಿರುವ ಸ್ವದೇಶಿ ನಿರ್ಮಿತ ಭಾರತದ ಪರಮಾಣು...

ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ಐಎನ್ಎಸ್ ಅರಿಹಂತ್ ಸೇನೆಗೆ ಸೇರ್ಪಡೆ
ಐಎನ್ಎಸ್ ಅರಿಹಂತ್
Published On :
ನವದೆಹಲಿ: ಭಾರತದ ಮೊದಲ ಸ್ವದೇಶಿ ನಿರ್ಮಿತ ಪರಮಾಣು ಜಲಾಂತರ್ಗಾಮಿ ನೌಕೆ ಐಎನ್ಎಸ್ ಅರಿಹಂತ್ ತನ್ನ ಸೇವೆಯನ್ನು ಆರಂಭಿಸಿದೆ. 
6 ಸಾವಿರ ಟನ್ ತೂಕದ ಜಲಾಂತರ್ಗಾಮಿ ನೌಕೆಯನ್ನು ಸೇವೆಗೆ ಸೇರಿಸಿದ ನಂತರ ಭಾರತದ ಮೂರೂ ಸೇನೆಗಳು ಸದ್ದಿಲ್ಲದೆ ತನ್ನ ಪರಮಾಣು ಸೇವೆಯನ್ನು ಪೂರ್ಣಗೊಳಿಸಿದಂತಾಗಿದೆ. ಐಎನ್ಎಸ್ ಅರಿಹಂತ್ ನ್ನು ನೌಕಾ ಮುಖ್ಯಸ್ಥ ಸುನಿಲ್ ಲಂಬಾ ಕಳೆದ ಆಗಸ್ಟ್ ನಲ್ಲಿ ವಿದ್ಯುಕ್ತವಾಗಿ ಭಾರತದ ನೌಕಾ ಸೇವೆಗೆ ಸೇರ್ಪಡೆ ಮಾಡಿದ್ದರು. ಗೌಪ್ಯತೆ ಕಾಪಾಡಲು ಅದನ್ನು ಐಎನ್ಎಸ್ ಅರಿಹಂತ್ ಎಂದು ಉಲ್ಲೇಖಿಸಲು ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಐಎನ್ಎಸ್ ಅರಿಹಂತ್ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನೌಕೆಯಾಗಿದ್ದು 2009 ರಲ್ಲಿ ಬಿಡುಗಡೆಯಾದ ಪರಮಾಣು ಚಾಲಿತ ಕ್ಷಿಪಣಿ ಜಲಾಂತರ್ಗಾಮಿ ಅರಿಹಂತ್ ವರ್ಗದ ಪ್ರಮುಖ ಹಡಗು ಆಗಿದೆ. ಇದು ಆರಂಭದಲ್ಲಿ 2012ರಲ್ಲಿ ಸಮುದ್ರದಲ್ಲಿ ಪ್ರಾಯೋಗಿಕ ಕಾರ್ಯಾಚರಣೆ ನಡೆಸುವ ನಿರೀಕ್ಷೆಯಲ್ಲಿತ್ತು. ಆದರೆ ಅದು ನಡೆದಿದ್ದು 2014ರಿಂದ.ಸತತ ಪ್ರಾಯೋಗಿಕ ಪರೀಕ್ಷೆಗಳ ಮೂಲಕ ಇದೀಗ ನೌಕೆ ಸಮುದ್ರಕ್ಕೆ ಇಳಿದಿದೆ. ನೌಕೆಯ ಪರಮಾಣು ರಿಯಾಕ್ಟರ್ ನ್ನು ರಷ್ಯಾದ ಸಹಾಯದಿಂದ ಕಟ್ಟಲಾಗಿತ್ತು.
ಪ್ರಧಾನ ಮಂತ್ರಿಗಳ ಕಾರ್ಯಾಲಯದ ಮೇಲ್ವಿಚಾರಣೆ ಮೇರೆಗೆ ಈ ಯೋಜನೆಯನ್ನು ಅತ್ಯಾಧುನಿಕ ತಂತ್ರಜ್ಞಾನ ನೌಕೆ ಕಾರ್ಯಕ್ರಮದಡಿಯಲ್ಲಿ ಮಾಡಲಾಗಿದ್ದು ಇದಕ್ಕೆ ರಕ್ಷಣಾ ಇಲಾಖೆ, ಅಣುಶಕ್ತಿ ಕೇಂದ್ರ ಮತ್ತು ಖಾಸಗಿ ಕಂಪೆನಿಗಳು ನೆರವು ನೀಡಿವೆ.
ರಷ್ಯಾದ ಅಕುಲಾ-1 ದರ್ಜೆಯ ನೌಕಾಪಡೆಯ ಮಾದರಿಯಲ್ಲಿ ಐಎನ್ಎಸ್ ಅರಿಹಂತ್ ಜಲಾಂತರ್ಗಾಮಿ ನೌಕೆಯನ್ನು ವಿನ್ಯಾಸಗೊಳಿಸಲಾಗಿದ್ದು ಅದರ 83 ಎಮ್ ಡಬ್ಲ್ಯು ಜಲ ರಿಯಾಕ್ಟರ್ ನ್ನು ಕೂಡ ರಷ್ಯಾದ ನೆರವಿನಿಂದ ಕಟ್ಟಲಾಗಿದೆ.
ಐಎನ್ಎಸ್ ಅರಿಹಂತ್ ನ 100 ಸಿಬ್ಬಂದಿಗಳಿಗೆ ರಷ್ಯಾದ ವಿಶೇಷ ತಜ್ಞರು ತರಬೇತಿ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.