ಯುಪಿಎ ಆಡಳಿತಾವಧಿಯಲ್ಲಿ ಸೀಮಿತ ದಾಳಿಯೇ ನಡೆದಿಲ್ಲ ಎಂಬ ಹೇಳಿಕೆ ರಾಜಕೀಯ ಪ್ರೇರಿತವಾದದ್ದು: ಎನ್'ಸಿಪಿ
ಯುಪಿಎ ಆಡಳಿತಾವಧಿಯಲ್ಲಿ ಸೀಮಿತ ದಾಳಿ ನಡೆದಿಲ್ಲ ಎಂಬ ರಕ್ಷಣಾ ಸಚಿವರ ಹೇಳಿಕೆ ರಾಜಕೀಯ ಪ್ರೇರಿತವಾದದ್ದು ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್'ಸಿಪಿ) ಗುರುವಾರ...

ನವದೆಹಲಿ: ಯುಪಿಎ ಆಡಳಿತಾವಧಿಯಲ್ಲಿ ಸೀಮಿತ ದಾಳಿ ನಡೆದಿಲ್ಲ ಎಂಬ ರಕ್ಷಣಾ ಸಚಿವರ ಹೇಳಿಕೆ ರಾಜಕೀಯ ಪ್ರೇರಿತವಾದದ್ದು ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್'ಸಿಪಿ) ಗುರುವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಎನ್'ಸಿಪಿ ನಾಯಕ ಮಜೀದ್ ಮೆಮನ್ ಅವರು, ಒಬ್ಬ ರಕ್ಷಣಾ ಸಚಿವರಾಗಿ ಪರಿಕ್ಕರ್ ಅವರು ಈ ರೀತಿಯ ಹೇಳಿಕೆಯನ್ನು ನೀಡಬಾರದಿತ್ತು. ತಾವಿರುವ ಸ್ಥಾನವನ್ನು ಅವರು ನೆನೆಯಬೇಕಿದೆ. 20-25 ವರ್ಷದ ಹಿಂದೆ ಏನಾಗಿತ್ತು ಎಂಬುದು ಅವರಿಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಸೇನೆಯ ಸೀಮಿತ ದಾಳಿಗೆ ಬೆಂಬಲ ವ್ಯಕ್ತಪಡಿಸಿರುವ ಅವರು, ಸೇನೆಯ ಶ್ರಮವನ್ನು ಶ್ಲಾಘಿಸಿದ್ದಾರೆ. ಸೀಮಿತ ದಾಳಿ ಕುರಿತಂತೆ ಪರಿಕ್ಕರ್ ಅವರು ನೀಡಿದ್ದ ಹೇಳಿಕೆ ಸರಿಯಾಗಿದೆ. ಹೇಳಿಕೆಯನ್ನು ನಾನು ಒಪ್ಪಿಕೊಳ್ಳುತ್ತೇನೆ. ಸೀಮಿತ ದಾಳಿ ಎಲ್ಲಾ ಕೀರ್ತಿ ಭಾರತೀಯ ಸೇನೆಗೆ ಸಲ್ಲಬೇಕಿದೆ ಎಂದು ಹೇಳಿದ್ದಾರೆ.
ಸೀಮಿತ ದಾಳಿ ಕುರಿತಂತೆ ನಮ್ಮ ನೆಲದ ನಾಯಕರೇ ರಾಜಕೀಯವಾಗಿ ಕೆಸರೆರಚಾಟ ನಡೆಸಲು ಆರಂಭಿಸಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ನಾಯಕರ ಬಾಯಿ ಮುಚ್ಚಿಸುವ ರೀತಿಯಲ್ಲಿ ನಿನ್ನೆ ಪರಿಕ್ಕರ್ ಅವರು ಹೇಳಿಕೆಯನ್ನು ನೀಡಿದ್ದರು. ಸೀಮಿತ ದಾಳಿಯ ಕೀರ್ತಿ ಹಾಗೂ ಲಾಭಾಂಶವೇನಿದ್ದರೂ ಅದು ಭಾರತೀಯ ಸೇನೆಗೆ ಹಾಗೂ ನಿರ್ಧಾರ ಕೈಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲಬೇಕಿದೆ ಎಂದು ಹೇಳಿದ್ದರು. ಅಲ್ಲದೆ, ಇದೇ ವೇಳೆ ಯುಪಿಎ ಅವಧಿಯಲ್ಲಿಯೂ ಸೀಮಿತ ದಾಳಿಯನ್ನು ನಡೆಸಲಾಗಿತ್ತು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತಂತೆ ಮಾತನಾಡಿದ್ದ ಅವರು, ಯುಪಿಎ ಅವಧಿಯಲ್ಲಿ ಸೀಮಿತ ದಾಳಿಯನ್ನೇ ನಡೆಸಿಲ್ಲ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


