ದೇಶ

ಬಿಹಾರ ರಾಜ್ಯದಲ್ಲಿ 5 ಶಂಕಿತ ಉಗ್ರರ ಬಂಧನ

ಸೀಮಿತ ದಾಳಿ ನಂತರ ಉಗ್ರರ ವಿರುದ್ಧ ತೀವ್ರ ಕಾರ್ಯಾಚರಣೆಗೆ ಇಳಿದಿರುವ ರಾಷ್ಟ್ರೀಯ ತನಿಖಾ ತಂಡ ಮಂಗಳವಾರ ಐವರು ಶಂಕಿತ ಉಗ್ರರನ್ನು ಮಂಗಳವಾರ ಬಂಧನಕ್ಕೊಳಪಡಿಸಿದೆ...

ಬಿಹಾರ ರಾಜ್ಯದಲ್ಲಿ 5 ಶಂಕಿತ ಉಗ್ರರ ಬಂಧನ
ಸಂಗ್ರಹ ಚಿತ್ರ
Published On :

ಪಾಟ್ನ: ಸೀಮಿತ ದಾಳಿ ನಂತರ ಉಗ್ರರ ವಿರುದ್ಧ ತೀವ್ರ ಕಾರ್ಯಾಚರಣೆಗೆ ಇಳಿದಿರುವ ರಾಷ್ಟ್ರೀಯ ತನಿಖಾ ತಂಡ ಮಂಗಳವಾರ ಐವರು ಶಂಕಿತ ಉಗ್ರರನ್ನು ಮಂಗಳವಾರ ಬಂಧನಕ್ಕೊಳಪಡಿಸಿದೆ ಎಂದು ತಿಳಿದುಬಂದಿದೆ.

ನೇಪಾಳ ಮಾರ್ಗವಾಗಿ ಭಾರತದೊಳಗೆ ಈ ಐವರು ಶಂಕಿತ  ಉಗ್ರರು ನುಸುಳಿರುವ ಸಾಧ್ಯತೆಗಳಿದ್ದು. ಐವರ ಪೈಕಿ ಇಬ್ಬರು ಪಾಕಿಸ್ತಾನ ಮೂಲದ ಶಂಕಿತರು ಎಂದು ಹೇಳಲಾಗುತ್ತಿದೆ. ಉಳಿದ ಮೂವರು ಶಂಕಿತ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.

ಶಂಕಿತ ಉಗ್ರರಿಂದ ಪಾಟ್ನಾದ ಪ್ರಮುಖ ಪ್ರದೇಶಗಳ ಮ್ಯಾಪ್ ಗಳು ಹಾಗೂ ಇನ್ನಿತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಬಂಧಿತ ಶಂಕಿತ ಉಗ್ರರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿರುವ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.