ದೇಶ

ಮೋನಿಕಾ ಘುರ್ಡೆ ಕೊಲೆಯಲ್ಲ, 'ಹತ್ಯಾಚಾರ': ಪೊಲೀಸ್

ಸುಗಂಧ ಧ್ರವ್ಯ ತಜ್ಞೆ ಮೋನಿಕಾ ಘುರ್ಡೆ ಕೊಲೆ ಪ್ರಕರಣದಲ್ಲಿ ಹೊಸದೊಂದು ತಿರುವು ದೊರೆತಿದ್ದು, ಕೊಲೆಗೂ ಮುನ್ನ ಆಕೆಯ ಮೇಲೆ ಅತ್ಯಾಚಾರ ಮಾಡಲಾಗಿತ್ತು ಎಂಬ ಮಾಹಿತಿಯನ್ನು ಗೋವಾ ಪೊಲೀಸರು ಹೊರ ಹಾಕಿದ್ದಾರೆ.

ಮೋನಿಕಾ ಘುರ್ಡೆ ಕೊಲೆಯಲ್ಲ, 'ಹತ್ಯಾಚಾರ': ಪೊಲೀಸ್
ಕೊಲೆಯಾದ ಮೋನಿಕಾ ಹಾಗೂ ಆರೋಪಿ ರಾಜ್ ಕುಮಾರ್ (ಸಂಗ್ರಹ ಚಿತ್ರ)
Published On :

ಪಣಜಿ: ಸುಗಂಧ ಧ್ರವ್ಯ ತಜ್ಞೆ ಮೋನಿಕಾ ಘುರ್ಡೆ ಕೊಲೆ ಪ್ರಕರಣದಲ್ಲಿ ಹೊಸದೊಂದು ತಿರುವು ದೊರೆತಿದ್ದು, ಕೊಲೆಗೂ ಮುನ್ನ ಆಕೆಯ ಮೇಲೆ ಅತ್ಯಾಚಾರ ಮಾಡಲಾಗಿತ್ತು ಎಂಬ ಮಾಹಿತಿಯನ್ನು  ಗೋವಾ ಪೊಲೀಸರು ಹೊರ ಹಾಕಿದ್ದಾರೆ.

ಈ ವಿಚಾರವನ್ನು ಸ್ವತಃ ಕೊಲೆಗಾರ ಆಕೆಯ ಆಪಾರ್ಟ್ ಮೆಂಟ್ ಮಾಜಿ ಸೆಕ್ಯೂರಿಟಿ ಗಾರ್ಡ್ ರಾಜ್ ಕುಮಾರ್ ಸಿಂಗ್ ಎಂಬುವವನೇ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ಗೋವಾ  ಪೊಲೀಸರು ಹೇಳಿದ್ದಾರೆ. ಕಳೆದ ಆಕ್ಟೋಬರ್ 5ರಂದ ಗೋವಾದ ಸಂಗೋಲ್ಡಾದಲ್ಲಿರುವ ಆಪಾರ್ಟ್ ಮೆಂಟ್ ನಲ್ಲಿ ಮೋನಿಕಾ ಘುರ್ಡೆ ಅವರನ್ನು ಮಂಚಕ್ಕೆ ಕಟ್ಟಿಹಾಕಿ ಹತ್ಯೆಗೈಯಲ್ಲಾಗಿತ್ತು.  ಹತ್ಯೆಗೂ ಮುನ್ನ ಆಕೆಯ ಮೇಲೆ ರಾಜ್ ಕುಮಾರ್ ಸಿಂಗ್ ಅತ್ಯಾಚಾರ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

"ಪ್ರಕರಣ ಸಂಬಂಧ ನಡೆದ ಪೊಲೀಸ್ ವಿಚಾರಣೆ ವೇಳೆ ಆರೋಪಿ ರಾಜ್ ಕುಮಾರ್ ಸಿಂಗ್ ತಪ್ಪೊಪ್ಪಿಕೊಂಡಿದ್ದು, ಮೋನಿಕಾರನ್ನು ತಾನೇ ಕೊಂದಿರುವುದಾಗಿ ಹೇಳಿದ್ದಾನೆ. ಮೋನಿಕಾ ಅವರ  ಮನೆಯನ್ನು ಅಕ್ರಮವಾಗಿ ಪ್ರವೇಶಿಸಿದ್ದ ರಾಜ್ ಕುಮಾರ್ ಸಿಂಗ್ ಆಕೆಗೆ ಕತ್ತಿ ತೋರಿಸಿ ಬೆದರಿಸಿದ್ದ. ಮೋನಿಕಾ ಪ್ರಜ್ಞಾಹೀನಳಾಗುತ್ತಿದ್ದಂತೆಯೇ ಆಕೆಯನ್ನು ಕೊಠಡಿಯಲ್ಲಿದ್ದ ಮಂಚಕ್ಕೆ ಕಟ್ಟಿಹಾಕಿದ್ದ ರಾಜ್ ಕುಮಾರ್ ಬಳಿಕ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ನಂತರ ತಲೆದಿಂಬಿನಿಂದ ಆಕೆಯನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ ಎಂದು ಗೋವಾ ಪೊಲೀಸ್ ವರಿಷ್ಠಾಧಿಕಾರಿ ವಿಮಲ್ ಗುಪ್ತಾ ತಿಳಿಸಿದ್ದಾರೆ.

ಅಕ್ಟೋಬರ್ 5ರಂದು ಮೋನಿಕಾರನ್ನು ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ರಾಜ್ ಕುಮಾರ್ ನನ್ನು ಆಕ್ಟೋಬರ್ 8ರಂದು ಬೆಂಗಳೂರಿನಲ್ಲಿ ಸೆರೆ ಹಿಡಿಯಲಾಗಿತ್ತು. ಕೊಲೆ ಬಳಿಕ ಮೊನಿಕಾರ ಎಟಿಎಂ  ಕಾರ್ಡ್ ಹೊತ್ತೊಯ್ದಿದ್ದ ಆರೋಪಿ ರಾಜ್ ಕುಮಾರ್ ಬೆಂಗಳೂರಿನ ಗಾಂಧಿ ಬಜಾರ್ ನಲ್ಲಿ ಶಾಪಿಂಗ್ ಮಾಡಿದ್ದ. ಎಟಿಎಂ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗುತ್ತಿದೆ ಎಂಬ ವಿಚಾರವನ್ನು ಕಲೆ ಹಾಕಿದ  ಪೊಲೀಸರು ಅದರ ಆಧಾರದ ಮೇಲೆ ರಾಜ್ ಕುಮಾರ್ ಸಿಂಗ್ ನನ್ನು ಬಂಧಿಸಿದ್ದರು.

ಮನೆ ಮೇಲ್ಛಾವಣಿ ಹತ್ತಿ ಸತತ 2 ದಿನಗಳ ಕಾಲ ಆಕೆಯ ಚಲನವಲನ ಗಮನಿಸಿದ್ದ ಆರೋಪಿ
ಪ್ರಕರಣ ಸಂಬಂಧ ಪೊಲೀಸರು ಕುತೂಹಲಕಾರಿ ಮಾಹಿತಿಗಳನ್ನು ಹೊರಹಾಕಿದ್ದು, ಕೊಲೆಗೂ ಮುನ್ನ ಆರೋಪಿ ರಾಜ್ ಕುಮಾರ್ ಸಿಂಗ್ ಗೋವಾದಲ್ಲಿನ ಮೋನಿಕಾ ಮನೆ ನುಸುಳಿದ್ದ. ಮನೆಯ ಮೇಲ್ಛಾವಣಿ ಹತ್ತಿ ಸತತ 2 ದಿನಗಳ ಕಾಲ ಆಕೆಯ ಚಲನವಲನಗಳನ್ನು ಗಮನಿಸಿದ್ದ. ಬಳಿಕ ಮನೆಯಲ್ಲಿ ಆಕೆ ಒಬ್ಬಳೇ ಇರುವುದನ್ನು ಖಚಿತ ಪಡಿಸಿಕೊಂಡ ರಾಜ್ ಕುಮಾರ್ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ಅಕೆಯನ್ನು ಮಂಚಕ್ಕೆ ಕಟ್ಟಿ ಹಾಕಿ ಆಕೆಗೆ ಬಲವಂತವಾಗಿ ಅಶ್ಲೀಲ ಚಿತ್ರಗಳನ್ನು ತೋರಿಸಿದ್ದಾನೆ. ಬಳಿಕ ಆಕೆಯ ಮೇಲೆ ಅತ್ಯಾಚಾರ ಮಾಜಿ ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.