ಸೇನಾ ಶಿಬಿರಗಳ ಮೇಲೆ ದಾಳಿಗೆ ಗಡಿಯಲ್ಲಿ ಕಾಯ್ತಿದ್ದಾರೆ 250ಕ್ಕೂ ಹೆಚ್ಚು ಉಗ್ರರು!
ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಭಾರತೀಯ ಸೇನೆ ನಡೆಸಿದ್ದ ಸೀಮಿತ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲು ಪಾಕ್ ಉಗ್ರರು ಶತಪ್ರಯತ್ನ ನಡೆಸುತ್ತಿದ್ದು...

Published On :
ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಭಾರತೀಯ ಸೇನೆ ನಡೆಸಿದ್ದ ಸೀಮಿತ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲು ಪಾಕ್ ಉಗ್ರರು ಶತಪ್ರಯತ್ನ ನಡೆಸುತ್ತಿದ್ದು, ಗಡಿಯಲ್ಲಿ 250ಕ್ಕೂ ಹೆಚ್ಚು ಉಗ್ರರು ಸೇನೆ ಮೇಲೆ ದಾಳಿಗೆ ಸಜ್ಜಾಗಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಭಾರತೀಯ ಸೇನೆ ನಡೆಸಿದ್ದ ಸೀಮಿತ ದಾಳಿಯಿಂದ ಎಲ್ಇಟಿ ಉಗ್ರ ಸಂಘಟನೆಗೆ ಹೆಚ್ಚು ಹೊಡೆತ ಬಿದ್ದಿದ್ದು, ಭಾರತದಲ್ಲಿ ಹೆಚ್ಚು ಹಾನಿ ಸಂಭವಿಸುವ ರೀತಿಯಲ್ಲಿ ದಾಳಿ ನಡೆಸಲು ಎಲ್ ಇ ಟಿ ಉಗ್ರ ಸಂಘಟನೆ ಸಂಚು ರೂಪಿಸಿದ್ದು, ಸಂಸತ್ ಭವನ, ದೆಹಲಿ ಸಚಿವಾಲಯಗಳು, ಅಕ್ಷರಧಾಮ ದೇವಾಲಯ ಉಗ್ರರ ಹಿಟ್ ಲಿಸ್ಟ್ ನಲ್ಲಿವೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.
ಪ್ರಮುಖವಾಗಿ ಸೈನಿಕರ ಸೇನಾ ನೆಲೆಗಳು ಉಗ್ರರ ಮುಖ್ಯ ಟಾರ್ಗೇಟ್ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಸೇನಾ ನೆಲೆಗಳ ಮೇಲೆ ದಾಳಿಗಳು ನಡೆಯುತ್ತೀವೆ. ಇನ್ನು ಹಲವು ಗಡಿ ನುಸುಳಿವಿಕೆ ಯತ್ನಗಳು ಸೈನಿಕರು ವಿಫಲಗೊಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


