ಭಾರತದ ಸೀಮಿತ ದಾಳಿ: ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ 20 ಉಗ್ರರ ಹತ್ಯೆ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಯೋಧರು ನಡೆಸಿದ ಸೀಮಿತ ದಾಳಿಯಲ್ಲಿ ಅತೀ ಹೆಚ್ಚು ಹಾನಿಗೊಂಡಿರುವುದು ಲಷ್ಕರ್ ಇ ತೊಯ್ಬಾ(ಎಲ್ಇಟಿ)...

Published On :
ಬಾರಾಮುಲ್ಲಾ/ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಯೋಧರು ನಡೆಸಿದ ಸೀಮಿತ ದಾಳಿಯಲ್ಲಿ ಅತೀ ಹೆಚ್ಚು ಹಾನಿಗೊಂಡಿರುವುದು ಲಷ್ಕರ್ ಇ ತೊಯ್ಬಾ(ಎಲ್ಇಟಿ) ಉಗ್ರ ಸಂಘಟನೆಗೆ ಎಂಬ ವರದಿ ಭಾರತೀಯ ಸೇನೆಯ ಮೂಲಗಳಿಂದ ತಿಳಿದುಬಂದಿದೆ.
ಭಾರತೀಯ ಸೇನಾ ಕ್ಷೇತ್ರ ಘಟಕ ಈ ವರದಿಯನ್ನು ಬಹಿರಂಗಗೊಳಿಸಿದ್ದು ಇದರಲ್ಲಿ ಎಲ್ಇಟಿ ಉಗ್ರ ಸಂಘಟನೆಗೆ ಸೇರಿದ 20ಕ್ಕೂ ಹೆಚ್ಚು ಉಗ್ರರು ಭಾರತೀಯ ಸೇನೆಯ ಸೀಮಿತ ದಾಳಿಯಲ್ಲಿ ಹತರಾಗಿದ್ದು, ಇದು ಎಲ್ಇಟಿಗೆ ದೊಡ್ಡ ಹೊಡೆತವಾಗಿದೆ.
ಭಾರತೀಯ ಸೇನೆ ಸೆಪ್ಟೆಂಬರ್ 29ರಂದು ಪಿಒಕೆಗೆ ನುಗ್ಗಿ 7 ಉಗ್ರರ ಶಿಬಿರಗಳನ್ನು ದ್ವಂಸಗೈದಿದ್ದರು. ಇದರಲ್ಲಿ ಒಂದಾದ ದುದ್ನಿಯಾಳ್ ನಲ್ಲಿದ್ದ ಉಗ್ರರ ಶಿಬಿರದಲ್ಲಿ ಎಲ್ಇಟಿ ಉಗ್ರ ಸಂಘಟನೆಯ ಉಗ್ರರು ಅಡಗಿದ್ದು ಇದರಲ್ಲಿ ಕನಿಷ್ಠ 20 ಉಗ್ರರು ಹತರಾಗಿದ್ದಾರೆ ಎಂದು ಘಟಕ ತಿಳಿಸಿದೆ.
ಭಾರತೀಯ ಸೇನೆಯ ಸೀಮಿತ ದಾಳಿಯಲ್ಲಿ ಪಿಒಕೆಯಲ್ಲಿದ್ದ 7 ಉಗ್ರರ ಶಿಬಿರಗಳನ್ನು ದ್ವಂಸಗೈದಿದ್ದರು. ಇದರಲ್ಲಿ ಸುಮಾರು 38 ಉಗ್ರರು ಹತರಾಗಿದ್ದು, ಕೆಲ ಪಾಕಿಸ್ತಾನಿ ಸೈನಿಕರು ಸಹ ಬಲಿಯಾಗಿದ್ದರು ಎಂದು ಹೇಳಲಾಗಿತ್ತು. ಆದರೆ ಪಾಕಿಸ್ತಾನ ಮಾತ್ರ ಭಾರತ ಸೀಮಿತ ದಾಳಿ ನಡೆಸಿಲ್ಲ ಎಂದು ವಾದಿಸುತ್ತಾ ಬಂದಿತ್ತು. ಇದೀಗ ಬಿಡುಗಡೆಯಾಗಿರುವ ವರದಿ ಭಾರತ ನಡೆಸಿದ ಸೀಮಿತ ದಾಳಿಗೆ ಪೂರಕವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


