ಸೀಮಿತ ದಾಳಿ ಸಾಕ್ಷ್ಯಾಧಾರ ಬೇಕಿಲ್ಲ, ಮೋದಿ ಹೊಗಳುವುದನ್ನು ಬಿಡಿ: ಕಾಂಗ್ರೆಸ್
ಭಾರತೀಯ ಸೇನೆ ನಂಬಿಕೆಯಿದ್ದು, ನಮಗೆ ಸೀಮಿತ ದಾಳಿ ಸಾಕ್ಷ್ಯಾಧಾರಗಳೇನು ಬೇಕಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹೊಗಳುವುದನ್ನು ಬಿಡಿ ಎಂದು ಕಾಂಗ್ರೆಸ್...

ನವದೆಹಲಿ: ಭಾರತೀಯ ಸೇನೆ ನಂಬಿಕೆಯಿದ್ದು, ನಮಗೆ ಸೀಮಿತ ದಾಳಿ ಸಾಕ್ಷ್ಯಾಧಾರಗಳೇನು ಬೇಕಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹೊಗಳುವುದನ್ನು ಬಿಡಿ ಎಂದು ಕಾಂಗ್ರೆಸ್ ಗುರುವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ವಕ್ತಾರ ಸಂದೀಪ್ ದೀಕ್ಷಿತ್ ಅವರು, ಸೀಮಿತ ದಾಳಿ ಹಿಡಿದು ಬಿಜೆಪಿ ನಾಯಕರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕೊಂಡಾಡುತ್ತಿದ್ದಾರೆ. ಮೊದಲು ಬಿಜೆಪಿ ನಾಯಕರು ಮೋದಿಯವರನ್ನು ಕೊಂಡಾಡುವುದನ್ನು ನಿಲ್ಲಿಸಬೇಕಿದೆ. ಸೀಮಿತ ದಾಳಿ ನಡೆಸಿದ್ದೇವೆಂದು ಸ್ವತಃ ಭಾರತೀಯ ಸೇನೆಯೇ ಹೇಳಿಕೆ ನೀಡಿದೆ. ನಮಗೆ ಸೇನೆ ಮೇಲೆ ಸಂಪೂರ್ಣವಾದ ನಂಬಿಕೆಯಿಂದೆ. ಸೀಮಿತ ದಾಳಿ ಕುರಿತ ಸಾಕ್ಷ್ಯಾಧಾರಗಳು ನಮಗೆ ಬೇಕಿಲ್ಲ. ಸಾಕ್ಷ್ಯಾಧಾರ ಕೇಳುತ್ತಿರುವ ಜನರು ನಿಜಕ್ಕೂ ಮೂರ್ಖರು ಎಂದು ಹೇಳಿದ್ದಾರೆ.
ಬಿಜೆಪಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಸೀಮಿತ ದಾಳಿ ನಡೆಸಿದ್ದಾರೆಂಬಂತೆ ವಿಶ್ವದ ಮುಂದೆ ತೋರ್ಪಡಿಸುತ್ತಿದೆ. ಸೀಮಿತ ದಾಳಿ ಹಿಡಿದು ಬಿಜೆಪಿಯವರು ರಾಜಕೀಯ ಆಟ ವಾಡುತ್ತಿದ್ದಾರೆ. ದಾಳಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಏನನ್ನು ಮಾಡಲು ಸಾಧ್ಯವಿಲ್ಲ. ಈ ಹಿಂದೆ ಕೂಡ ಭಾರತೀಯ ಸೇನೆ ಇಂತಹ ಸಾಕಷ್ಟು ಸೀಮಿತ ದಾಳಿಗಳನ್ನು ನಡೆಸಿತ್ತು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


