ದೇಶ

ಭಾರತೀಯ ಯೋಧರಿಗೆ ಅವಮಾನ: ಕ್ಷಮೆಯಾಚಿಸಿದ ನಟ ಓಂಪುರಿ

ಭಾರತೀಯ ಸೈನಿಕರಿಗೆ ಅವಮಾನವಾಗುವಂತ ಹೇಳಿಕೆ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಹಿರಿಯ ನಟ ಓಂಪುರಿ ಕ್ಷಮೆಯಾಚಿಸಿದ್ದಾರೆ..

ಭಾರತೀಯ ಯೋಧರಿಗೆ ಅವಮಾನ: ಕ್ಷಮೆಯಾಚಿಸಿದ ನಟ ಓಂಪುರಿ
ಓಂಪುರಿ
Published On :

ನವದೆಹಲಿ: ಭಾರತೀಯ ಸೈನಿಕರಿಗೆ ಅವಮಾನವಾಗುವಂತ ಹೇಳಿಕೆ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಹಿರಿಯ ನಟ ಓಂಪುರಿ ಕ್ಷಮೆಯಾಚಿಸಿದ್ದಾರೆ.

"ನಾನು ಹೇಳಿದ ಮಾತುಗಳಿಂದ ನನಗೆ ಮುಜುಗರವಾಗಿದೆ. ನಾನು ಕ್ಷಮೆಗೆ ಅರ್ಹನಲ್ಲ, ನಾನು ಶಿಕ್ಷೆಗೆ ಯೋಗ್ಯನಾದವನು, ನಾನು ಮೊದಲು ಉರಿ ಉಗ್ರ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳ ಕ್ಷಮೆ ಯಾಚಿಸುತ್ತೇನೆ, ಎಲ್ಲರು ನನ್ನನ್ನು ಕ್ಷಮಿಸಿ, ನಾನು, ಇಡೀ ದೇಶ, ಸೇನೆಯಲ್ಲಿ ಕ್ಷಮೆ ಕೇಳುತ್ತೇನೆ, ಕ್ಷಮೆ ಮಾತ್ರ ಇದನ್ನು ಸರಿ ಪಡಿಸಬಲ್ಲುದು, ನಾನು ತಪ್ಪಿತಸ್ಥ, ನಾನು ಶಿಕ್ಷೆಗೆ ಮಾತ್ರ ಅರ್ಹ, ನನ್ನನ್ನು ಕ್ಷಮಿಸಬೇಡಿ"...ಎಂದು ಓಂಪುರಿ ಕ್ಷಮೆ ಯಾಚಿಸಿದ್ದಾರೆ.

ಸುದ್ದಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಕಲಾವಿದರನ್ನು ಬೆಂಬಲಿಸುವ ಭರದಲ್ಲಿ ಭಾರತೀಯ ಸೇನೆಯ ಯೋಧರಿಗೆ ಅಪಮಾನ ಮಾಡಿದ್ದಾರೆ ಎಂಬ ಆರೋಪದ ಮೇಲೆ ಬಾಲಿವುಡ್ ನಟ ಓಂಪುರಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.  

ಪಾಕಿಸ್ತಾನದ ಕಲಾವಿದರು ಭಯೋತ್ಪಾದಕರಲ್ಲ ಎಂದು ಸಲ್ಮಾನ್ ಖಾನ್ ನೀಡಿದ್ದ ಹೇಳಿಕೆ ಬಗ್ಗೆ ಓಂಪುರಿ ಅವರಿಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಓಂಪುರಿ ಅವರು ‘ಭಾರತ ಹಾಗೂ ಪಾಕಿಸ್ತಾನಗಳು ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ರೀತಿ ಶತಮಾನಗಳ ಕಾಲ ಯುದ್ಧ ಮಾಡಲು ನೀವು ಬಯಸುತ್ತೀರಾ?’ ಎಂದಿದ್ದರು. ಯೋಧರಿಗೆ ಸೇನೆ ಸೇರುವಂತೆ ಯಾರು ಕೇಳಿದ್ದರು? ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುವಂತೆ ಹೇಳಿದ್ದು ಯಾರು? ಎಂದು ಓಂಪುರಿ ಪ್ರಶ್ನಿಸಿದ್ದರು. ಜತೆಗೆ ‘ನಾನೂ ಸೈನಿಕನ ಮಗ’ ಎಂದೂ ಹೇಳಿ ವ್ಯಾಪಕ ಟೀಕೆಗೊಳಗಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.