ಸೇನೆಯ ಸೀಮಿತ ದಾಳಿ: ತವರಿಗೆ ಹೊಗಲಾಗದೆ ಸಿಲುಕಿದ್ದ ಪಾಕ್ ಯುವತಿಯರಿಗೆ ಸುಷ್ಮಾ ಸ್ವರಾಜ್ ಹೃದಯಸ್ಪರ್ಶಿ ಸ್ಪಂದನೆ
ಭಾರತ- ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದ್ದರೂ, ಪಾಕಿಸ್ತಾನದವರ ಸಂಕಷ್ಟಕ್ಕೆ ಮಿಡಿಯುವ ಭಾರತದ ಮಾನವೀಯತೆಗೆ ಕೊರತೆ ಎದುರಾಗಿಲ್ಲ ಎಂಬುದಕ್ಕೆ ಉತ್ತಮ ಉದಾಹರಣೆಯಾಗಬಲ್ಲ ಒಂದು ಘಟನೆ ನಡೆದಿದೆ.

ನವದೆಹಲಿ: ಭಾರತ- ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದ್ದರೂ, ಪಾಕಿಸ್ತಾನದವರ ಸಂಕಷ್ಟಕ್ಕೆ ಮಿಡಿಯುವ ಭಾರತದ ಮಾನವೀಯತೆಗೆ ಕೊರತೆ ಎದುರಾಗಿಲ್ಲ ಎಂಬುದಕ್ಕೆ ಉತ್ತಮ ಉದಾಹರಣೆಯಾಗಬಲ್ಲ ಒಂದು ಘಟನೆ ನಡೆದಿದೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ಸೌಹಾರ್ದಯುತ ನಡೆಯಿಂದ ಭಾರತಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನ ಯುವ ನಿಯೋಗದ ಮನಸ್ಸನ್ನು ಗೆದ್ದಿದ್ದಾರೆ. ಗ್ಲೋಬಲ್ ಯೂತ್ ಪೀಸ್ ಫೆಸ್ಟಿವಲ್ (ಜಾಗತಿಕ ಯುವ ಶಾಂತಿ ಉತ್ಸವ) ನಲ್ಲಿ ಭಾಗವಹಿಸಲು 19 ಯುವತಿಯರು ಸೆ.27 ರಂದು ಭಾರತಕ್ಕೆ ಆಗಮಿಸಿದ್ದರು. ಆದರೆ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ನೆಲೆಗಳ ಮೇಲೆ ನಡೆಸಿದ ಸೀಮಿತ ದಾಳಿಯ ಪರಿಣಾಮ ಪಾಕಿಸ್ತಾನಕ್ಕೆ ವಾಪಸ್ ತೆರಳಲು ಅಕ್ಟೊಬರ್ 4 ಕ್ಕೆ ನಿಗದಿಯಾಗಿದ್ದ ಅವರ ಪ್ರಯಾಣಕ್ಕೆ ಅಡ್ಡಿ ಉಂಟಾಗಿತ್ತು.
ಭಾರತ ಪಾಕಿಸ್ತಾನದ ಭಯೋತ್ಪಾದಕರ ಮೇಲೆ ದಾಳಿ ನಡೆಸಿದ್ದ ಪರಿಣಾಮ, ಯುವ ಶಾಂತಿ ಉತ್ಸವದಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿದ್ದ 19 ಯುವತಿಯರಿಗೆ ಕೂಡಲೇ ಪಾಕಿಸ್ತಾನಕ್ಕೆ ವಾಪಸ್ಸಾಗುವಂತೆ ಪಾಕ್ ಒತ್ತಡ ಹೇರಿತ್ತು. ಈ ಹಿನ್ನೆಲೆಯಲ್ಲಿ ಅ.1 ರಂದು ಕಾರ್ಯಕ್ರಮದ ಸಂಚಾಲಕರು ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಬಳಿಕ ಸುಷ್ಮಾ ಸ್ವರಾಜ್ 19 ಯುವತಿಯರು ಸುರಕ್ಷಿತವಾಗಿ ಪಾಕಿಸ್ತಾನಕ್ಕೆ ತೆರಳುವುದಕ್ಕೆ ವ್ಯವಸ್ಥೆ ಮಾಡುವುದಾಗಿ ಭರವಸೆಯನ್ನು ನೀಡಿದ್ದರು. ಪಾಕಿಸ್ತಾನದ ಯುವತಿಯರ ರಕ್ಷಣೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸುಷ್ಮಾ ಸ್ವರಾಜ್, ಹೆಣ್ಣು ಮಕ್ಕಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಭರವಸೆ ನೀಡಿದ್ದರು. ಈ ಬಗ್ಗೆ ಅನುಭವವನ್ನು ಹಂಚಿಕೊಂಡಿರುವ ಅಮೇರಿಕಾದ ಟ್ರಾಯ್ ವಿಶ್ವವಿದ್ಯಾನಿಲಯದ ವಿದೇಶಾಂಗ ವ್ಯವಹಾರಗಳ ವಿದ್ಯಾರ್ಥಿನಿ ಹರೀರ್ ಭಾರತದಲ್ಲಿ ಅತಿಥಿಗಳನ್ನು ದೇವರ ರೀತಿಯಲ್ಲಿ ಸತ್ಕರಿಸುತ್ತಾರೆ ಎಂದು ಹೇಳಿದ್ದಾರೆ. ಸಹಾಯಕ್ಕಾಗಿ ವಿದೇಶಾಂಗ ಇಲಾಖೆಗೆ ಮೊರೆ ಹೋದ ಬಹುತೇಕ ಜನರಿಗೆ ಸಹಾಯ ಮಾಡಿರುವ ಸಚಿವೆ ಸುಷ್ಮಾ ಸ್ವರಾಜ್ ನ ನಡೆ ಬಗ್ಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


