ನಗ್ರೋಟಾ ಉಗ್ರ ದಾಳಿ ಮೂಲಕ ತನ್ನ ನಡೆ ಬದಲಿಸಿಕೊಳ್ಳುವುದಿಲ್ಲ ಎನ್ನುತ್ತಿದೆ ಪಾಕ್: ಆರ್.ಕೆ.ಸಿಂಗ್ ಕಿಡಿ
ಜಮ್ಮು ಮತ್ತು ಕಾಶ್ಮೀರದ ನಗ್ರೋಟಾ ಉಗ್ರರ ದಾಳಿ ಮೂಲಕ ಎಂದಿಗೂ ತನ್ನ ನಡೆ ಬದಲಿಸಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ಪಾಕಿಸ್ತಾನ ರವಾನಿಸುತ್ತಿದೆ ಎಂದು ಬಿಜೆಪಿ ನಾಯಕ ಆರ್.ಕೆ. ಸಿಂಗ್ ಅವರು ಬುಧವಾರ...

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ನಗ್ರೋಟಾ ಉಗ್ರರ ದಾಳಿ ಮೂಲಕ ಎಂದಿಗೂ ತನ್ನ ನಡೆ ಬದಲಿಸಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ಪಾಕಿಸ್ತಾನ ರವಾನಿಸುತ್ತಿದೆ ಎಂದು ಬಿಜೆಪಿ ನಾಯಕ ಆರ್.ಕೆ. ಸಿಂಗ್ ಅವರು ಬುಧವಾರ ಹೇಳಿದ್ದಾರೆ.
ನಗ್ರೋಟಾ ಉಗ್ರರ ದಾಳಿ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ನಗ್ರೋಟಾ ದಾಳಿ ಮೂಲಕ ಪಾಕಿಸ್ತಾನ ತನ್ನ ಜಿಹಾದ್ ಉಗ್ರವಾದದ ನೀತಿಯಿಂದ ಹಾಗೂ ಭಾರತದ ಮೇಲೆ ದಾಳಿ ನಡೆಸುತ್ತಲೇ ಇರುತ್ತೇವೆಂಬ ಸಂದೇಶವನ್ನು ರವಾನಿಸುತ್ತಿದೆ ಎಂದು ಹೇಳಿದ್ದಾರೆ.
ಇದೀಗ ಪಾಕಿಸ್ತಾನಕ್ಕೂ ಭಾರತ ಸಂದೇಶ ರವಾನಿಸುವ ಸಮಯ ಎದುರಾಗಿದೆ. ಪಾಠ ಕಲಿಸದೇ ಹೋದರೆ ಈ ರೀತಿಯ ಘಟನೆಗಳು ಮರುಕಳಿಸುತ್ತಲೇ ಇರುತ್ತದೆ. ಪಾಕಿಸ್ತಾನ ನಮ್ಮನ್ನು ಪರೀಕ್ಷಿಸುತ್ತಿದ್ದು, ಇದಕ್ಕೆ ಭಾರತ ಪ್ರತ್ಯುತ್ತ ನೀಡಲೇಬೇಕಿದೆ. ಉಗ್ರರ ದಾಳಿ ನಡೆಸುತ್ತಿರುವ ಪಾಕಿಸ್ತಾನಕ್ಕೆ ಇತರೆ ಸರ್ಕಾರಕ್ಕಿಂತ ನಮ್ಮ ಸರ್ಕಾರ ವಿಭಿನ್ನವಾಗಿದೆ ಎಂಬುದನ್ನು ತಿಳಿಸಬೇಕಿದೆ. ನನಗೆ ಹೊಡೆದರೆ, ಪ್ರತಿಯಾಗಿ ಬಲವಾಗಿ ನಾನು ನಿನಗೆ ಹೊಡೆಯುತ್ತೇನೆಂಬ ನೀತಿ ನಮ್ಮದು ಎಂದು ತಿಳಿಸಿದ್ದಾರೆ.
ನಗ್ರೋಟಾ ದಾಳಿ ಮೂಲಕ ಪಾಕಿಸ್ತಾನ ಎಂದಿಗೂ ತನ್ನ ನೀತಿಯನ್ನು ಬದಲಿಸಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ರವಾನಿಸುತ್ತಿದೆ. ಹೀಗಾಗಿಯೇ ಜಿಹಾದ್ ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸಿದೆ. ಹಲವು ವರ್ಷಗಳಿಂದಲೂ ಪಾಕಿಸ್ತಾನ ಈ ನೀತಿಯನ್ನು ಪಾಲಿಸಿಕೊಂಡು ಬಂದಿದೆ. ರಹೀಲ್ ಶರೀಫ್ ಅವರೂ ಕೂಡ ಇದೇ ನೀತಿಯನ್ನೇ ಅನುಸರಿಸಿದ್ದರು. ಇದೀಗ ನೂತನ ಸೇನಾ ಮುಖ್ಯಸ್ಥರೂ ಕೂಡ ಇದೇ ನೀತಿಯನ್ನು ಪಾಲಿಸಿದ್ದು, ಭಾರತಕ್ಕೆ ಸಂದೇಶವನ್ನು ರವಾನಿಸಿದ್ದಾರೆ. ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡುವ ಸಮಯ ಎದುರಾಗಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


