ದೇಶ

ಹತ್ಯೆಯಾದ ಮೂವರು ಉಗ್ರರಿಂದ ಕಾಶ್ಮೀರದಲ್ಲಿ ರೈಲು ಸ್ಫೋಟಿಸಲು ಸಂಚು: ಬಿಎಸ್ಎಫ್

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಒಳನುಸುಳಲು ಯತ್ನಿಸಿ ಬಿಎಸ್ ಎಫ್ ನಿಂದ ಹತ್ಯೆಯಾದ ಮೂವರು...

ಹತ್ಯೆಯಾದ ಮೂವರು ಉಗ್ರರಿಂದ ಕಾಶ್ಮೀರದಲ್ಲಿ ರೈಲು ಸ್ಫೋಟಿಸಲು ಸಂಚು: ಬಿಎಸ್ಎಫ್
ಸಾಂದರ್ಭಿಕ ಚಿತ್ರ
Published On :
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಒಳನುಸುಳಲು ಯತ್ನಿಸಿ ಬಿಎಸ್ ಎಫ್ ನಿಂದ ಹತ್ಯೆಯಾದ ಮೂವರು ಶಸ್ತ್ರ ಸಜ್ಜಿತ ಉಗ್ರರು ಕಣಿವೆ ರಾಜ್ಯದಲ್ಲಿ ಐಇಡಿ ಬಳಸಿ ಚಲಿಸುವ ರೈಲನ್ನು ಸ್ಫೋಟಿಸಲು ಸಂಚು ರೂಪಿಸಿದ್ದರು ಎಂದು ಬಿಎಸ್ ಎಫ್ ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂವರು ನುಸುಳುಕೋರ ಉಗ್ರರನ್ನು ಹತ್ಯೆ ಮಾಡಿದ ಮಾರನೇ ದಿನವೇ ಹಿರಿಯ ಅಧಿಕಾರಿಯೊಬ್ಬರು, ಈ ಮೂವರು ಬಳಿ ಐದು ಸ್ಫೋಟಕ ಬಾಟಲಿಗಳು ಪತ್ತೆಯಾಗಿದ್ದು, ಭಾರಿ ಪ್ರಮಾಣದ ದಾಳಿಗೆ ಸಂಚು ರೂಪಿಸಿದ್ದರು ಎಂದು ಹೇಳಿದ್ದಾರೆ.
ಹತ್ಯೆಯಾದ ಉಗ್ರರು ಐಇಡಿ ಹಾಗೂ ರಾಸಾಯನಿಕ ಸ್ಫೋಟಕಗಳನ್ನು ಬಳಿಸಿ ರೈಲು ಹಳಿಗಳನ್ನು ಸ್ಫೋಟಿಸಲು ಸಂಚು ರೂಪಿಸಿದ್ದರು ಎಂದು ಬಿಎಸ್ಎಫ್ ಹೆಚ್ಚುವರಿ ಮಹಾ ನಿರ್ದೇಶಕ ಅರುಣ್ ಕುಮಾರ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಒಂದು ವೇಳೆ ನಮ್ಮ ಯೋಧರು ಉಗ್ರರ ಒಳನುಸುಳುವಿಕೆ ಯತ್ನವನ್ನು ವಿಫಲಗೌಳಿಸದೇ, ಶಸ್ತ್ರ ಸಜ್ಜಿದ ಉಗ್ರರನ್ನು ಹತ್ಯೆ ಮಾಡದಿದ್ದರೆ ಭಾರಿ ಹಾನಿ ಸಂಭವಿಸುವ ಸಾಧ್ಯತೆ ಇತ್ತು ಎಂದು ಕುಮಾರ್ ಹೇಳಿದ್ದಾರೆ.
ಮಂಗಳವಾರ ಜಮ್ಮು- ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಉಗ್ರರ ಒಳನುಸುಳುವಿಕೆ ಯತ್ನವನ್ನು ಗಡಿ ಭದ್ರತಾ ಪಡೆ ವಿಫ‌ಲಗೊಳಿಸಿದ್ದು, ಮೂವರು ಉಗ್ರರನ್ನು ಹತ್ಯೆ ಮಾಡಿದೆ. ಗುಂಡಿನ ಚಕಮಕಿಯಲ್ಲಿ ಯೋಧನೊಬ್ಬ ಗಾಯಗೊಂಡಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.