ದೇಶ

ನೋಟು ನಿಷೇಧದ ವಿರುದ್ಧ ಟಿಡಿಪಿ ಸಂಸದನ ವಿನೂತನ ಪ್ರತಿಭಟನೆ

ಟಿಡಿಪಿ ಪಕ್ಷದ ಸಂಸದರೊಬ್ಬರು ಕೇಂದ್ರ ಸರ್ಕಾರ 500, 1000 ರೂ ನೋಟುಗಳನ್ನು ನಿಷೇಧಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.

ನೋಟು ನಿಷೇಧದ ವಿರುದ್ಧ ಟಿಡಿಪಿ ಸಂಸದನ ವಿನೂತನ ಪ್ರತಿಭಟನೆ
ನೋಟು ನಿಷೇಧದ ವಿರುದ್ಧ ಟಿಡಿಪಿ ಸಂಸದನ ವಿನೂತನ ಪ್ರತಿಭಟನೆ
Published On :
ತಿರುಪತಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ 500, 1000 ರೂ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಬೇಕೆಂದು ಪತ್ರ ಬರೆದು ಸಲಹೆ ನೀಡಿದ್ದ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಅವರ ಪಕ್ಷದ ಸಂಸದರೊಬ್ಬರು ಕೇಂದ್ರ ಸರ್ಕಾರ 500, 1000 ರೂ ನೋಟುಗಳನ್ನು ನಿಷೇಧಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. 
ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿರುವ ಟಿಡಿಪಿ ಸಂಸದ ಎನ್ ಶಿವಪ್ರಸಾದ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಬ್ಯಾಂಕ್ ಬ್ರಾಂಚ್ ನ ಮುಂಭಾಗದಲ್ಲಿ ಜಾನಪದ ಕಲಾವಿದನ ವೇಷ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ವೀಣೆಯನ್ನು ಕೈಯ್ಯಲ್ಲಿ ಹಿಡಿದು ಬುರ್ರಕಥಾ ಗಾಯನವನ್ನು ನಡೆಸುವ ಮೂಲಕ 1000, 500 ರೂ ನೋಟುಗಳ ಚಲಾವಣೆ ರದ್ದುಗೊಂಡಿರುವುದರಿಂದ ಜನಸಾಮಾನ್ಯರಿಗೆ ಉಂಟಾಗಿರುವ ಸಂಕಷ್ಟವನ್ನು ಎತ್ತಿತೋರಿಸಲು ಟಿಡಿಪಿ ಸಂಸದ ಶಿವಪ್ರಸಾದ್ ಯತ್ನಿಸಿದ್ದಾರೆ. 
ಬುರ್ರಕಥೆ ತೆಲುಗಿನಲ್ಲಿ ಜನಪ್ರಿಯವಾದ ಜಾನಪದ ಕಲೆಯಾಗಿದ್ದು, ಸಂಸದ ಶಿವಪ್ರಕಾಶ್ ರೈತರೊಂದಿಗೆ ಬುರ್ರಕಥೆ ಕಲೆಯನ್ನು ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದ್ದು, ಜನಸಾಮಾನ್ಯರ ಸಂಕಷ್ಟವನ್ನು ನಿವಾರಿಸಲು  ಪರ್ಯಾಯವಾದ ಮಾರ್ಗವನ್ನು ಕಂಡುಕೊಳ್ಳಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ ಒಳ್ಳೆಯ ದಿನಗಳು ಕಪ್ಪುಹಣ ಹೊಂದಿರುವವರಿಗೆ ಬಂದಿದೆಯೋ ಅಥವಾ ಸಾಮಾನ್ಯ ಜನರಿಗೆ ಬಂದಿದೆಯೋ ಎಂದು ಶಿವಪ್ರಕಾಶ್ ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.